Homeಸುದ್ದಿಗಳುಕೋವಿಡ್ ಗೆ ಬಲಿಯಾದವರ ಕುಟುಂಬದತ್ತ ಸ್ವಲ್ಪ ನೋಡಿ

ಕೋವಿಡ್ ಗೆ ಬಲಿಯಾದವರ ಕುಟುಂಬದತ್ತ ಸ್ವಲ್ಪ ನೋಡಿ

spot_img

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಉಮಾದೇವಿ ಎಂಬ ಮಹಿಳೆಯ ಪತಿ ಕೊವಿಡ್ ನಿಂದಾಗಿ ಇತ್ತೀಚಿನ ದಿನಗಳಲ್ಲಿ ತೀರಿಕೊಂಡಿದ್ದರಿಂದ, ಆಕೆ ಮತ್ತು ಆಕೆಯ ಮೂವರು ಹೆಣ್ಣು ಮಕ್ಕಳು ಪ್ರತಿದಿನವೂ ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದ್ದಾಗ , ಅದರ ಯಾತನೆ ನೋವು ಸಹಿಸಲಾರದೇ ಉಮಾದೇವಿಯು ನಿನ್ನೆ ಮಲಪ್ರಭಾ ನದಿಗೆ ತನ್ನ ಎಂಟು ವರ್ಷದ ಮಗಳೊಂದಿಗೆ ಹಾರಿದ್ದಾಳೆ. ಮಗಳು ಅಸು ನೀಗಿದೆ. ಇನ್ನೆರಡು ಮಕ್ಕಳು ತಾಯಿಯ ಕೈಯಿಂದ ಕೊಸರಿಕೊಂಡು ದೂರ ಉಳಿದಿವೆ. ನದಿಯ ಹತ್ತಿರ ಮೀನು ಹಿಡಿಯುವವರು ನದಿಗೆ ಜಿಗಿದು ತಾಯಿ ಉಮಾದೇವಿಯನ್ನು ಮುಳುಗುತ್ತಿದ್ದಾಗ ರಕ್ಷಿಸಿ ದಡಕ್ಕೆ ಸೇರಿಸಿದ್ದಾರೆ.

ಇಲ್ಲಿ ಒಂದು ವಿಷಯ ಗಮನಿಸುವುದೇನೆಂದರೆ , ಕೋವಿಡ್ ನಿಂದಾಗಿ ಕುಟುಂಬದ ಪ್ರಮುಖ ವ್ಯಕ್ತಿಯ ಸಾವು ಸಂಭವಿಸಿದ ನಂತರ ಈ ರೀತಿಯ ಬಹಳಷ್ಟು ಕುಟುಂಬಗಳು ಇಡೀ ರಾಜ್ಯಾದ್ಯಂತ ಮಾನಸಿಕ ತೊಳಲಾಟದಲ್ಲಿ ಸಿಲುಕಿ ಇತ್ತ ಸಾಯಲೂ ಆಗದೇ , ಅತ್ತ ಬದುಕಲೂ ಆಗದೇ, ವಿಲವಿಲ ಒದ್ದಾಡುವಂತಾಗಿದೆ.

ಇಂಥ ಕುಟುಂಬಗಳನ್ನು ಸರಕಾರ ಗುರುತಿಸಿ, ಎಲ್ಲಕ್ಕಿಂತ ಹೆಚ್ಚಾಗಿ ಸೇವಾಭಾವಿ ಸಂಘ ಸಂಸ್ಥೆಗಳು ಇಂತಹ ಕುಟುಂಬದ ಸದಸ್ಯರಿಗೆ ಸಹಾಯ ಹಸ್ತ ಚಾಚಬೇಕು.


ನೀಲಕಂಠ ದಾತಾರ.

RELATED ARTICLES

Most Popular

error: Content is protected !!
Join WhatsApp Group