‘ಸಮ್ಮಿಲನ’ದಿಂದ ಪ್ರೇಮ ಕವಿಗೋಷ್ಠಿ- ಪ್ರೇಮ ಗೀತಗಾಯನ ಹಾಗು ಪ್ರಶಸ್ತಿ ಪ್ರದಾನ

Must Read

ಕಲೆ -ಸಾಹಿತ್ಯ -ಸಾಂಸ್ಕೃತಿಕ ವೇದಿಕೆ ‘ಸಮ್ಮಿಲನ’ ವತಿಯಿಂದ 252ನೇ ಮಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಫೆ. 13, ಭಾನುವಾರ ದಂದು ನಗರದ ಶೇಷಾದ್ರಿಪುರ ಅಂಚೆ ಕಚೇರಿ ಪಕ್ಕದ ಕೆನ್ ಕಲಾ ಶಾಲೆಯಲ್ಲಿ ಪ್ರೇಮ ಕವಿಗೋಷ್ಠಿ- ಪ್ರೇಮ ಗೀತಗಾಯನ ಹಾಗು ಪ್ರಶಸ್ತಿ ಪ್ರದಾನ ಆಯೋಜಿಸಲಾಗಿತ್ತು.

ಸಮಾರಂಭದಲ್ಲಿ ಕನ್ನಡ ಪುಸ್ತಕ ಪರಿಚಾರಕ , ಸಮ್ಮಿಲನ ಸಂಸ್ಥಾಪಕ ಕುವರ ಯಲ್ಲಪ್ಪ ರವರು ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ ‘ಶಾರದಾ ಸುಪುತ್ರ ಪ್ರಶಸ್ತಿ’ ಹಾಗು ಕಲಾವಿದ ಕೆ.ಜಿ.ಸಂಪತ್ಕುಮಾರ್ ರವರಿಗೆ ‘ಗಾಯಕ ಎಸ್.ಯಲ್ಲಪ್ಪ ಸ್ಮಾರಕ ಪ್ರಶಸ್ತಿ’ ನೀಡಿ ಗೌರವಿಸಿದರು.

ಖ್ಯಾತ ಕವಿ, ಕತೆಗಾರ ಜಯಶಂಕರ್ ಪ್ರಕಾಶ್ ಬೆಮೆಲ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಅಪರಿಮಿತ ಜೀವನೋತ್ಸಾಹವಿರುವ ಹಿರಿಯ ಚೇತನಗಳು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಕಲ್ಪಿಸಿ, ಭಾವನೆಗಳಿಗೆ ಅಕ್ಷರ ರೂಪಕೊಟ್ಟು ,ಸಾಮಾಜಿಕ ಸ್ಥಿತ್ಯಂತರಗಳಿಗೆ ದನಿಯಾದ ವಿಶಿಷ್ಠ ಕಾರ್ಯಕ್ರಮದಲ್ಲಿ ಹಳೆಬೇರು ಹೊಸಚಿಗುರು ಎಂಬಂತೆ ಸಾಧಕರನ್ನು ಗೌರವಿಸಿರುವುದು ಅಭಿನಂದನೀಯ ಎಂದು ತಿಳಿಸಿದರು.

ಹಿರಿಯ ಸಾಹಿತಿ – ಗಾಯಕ ಟಿ.ಕೆ.ವೆಂಕಟರಾಮ್ ಭಾರತಿ , ಕವಿಯತ್ರಿ ಹಾ.ವಿ.ಮಂಜುಳಾ ಶಿವಾನಂದ , ಪ್ರಭಾಕರ ಗಂಗೊಳ್ಳಿ, ಗುಡಿಬಂಡೆ ಮಧುಸೂಧನ ಇನ್ನಿತರ 30ಕ್ಕೂ ಅಧಿಕ ಸಾಹಿತ್ಯಾಸಕ್ತರು ಕವಿಗೋಷ್ಠಿ ಯಲ್ಲಿ ಭಾಗವಹಿಸಿದ್ದರು.


ವಿವರಗಳಿಗೆ: 9972652804

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group