ಆಪರೇಷನ್ ಸಿಂದೂರ ಕಾರ್ಯಾಚರಣೆಯ ಕರ್ನಲ್ ಸೋಫಿಯಾ ಖುರೇಷಿ ಅವರ ಸಾಧನೆಗೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕರ್ನಲ್ ಸೋಫಿಯಾ ಅವರ ಮಾವ ಗೌಸ್ ಬಾಗೇವಾಡಿ ಅವರನ್ನು ತಮ್ಮ ಗೃಹ ಕಚೇರಿಗೆ ಕರೆಸಿಕೊಂಡು ಸತ್ಕರಿಸಿ ಮಾತನಾಡಿದ ಅವರು ಸೋಫಿಯಾ ಅವರು ಈ ಯುದ್ಧದ ಸಂದರ್ಭದಲ್ಲಿ ಸಲ್ಲಿಸಿದ ದೇಶಸೇವೆಯನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಕಚೇರಿಯ ಸಿಬ್ಬಂದಿ, ಮುಖಂಡರು ಉಪಸ್ಥಿತರಿದ್ದರು