ಬೆಳಗಾವಿ:ನಗರದ ಸಾರ್ವಜನಿಕ ಗ್ರಂಥಾಲಯಗಳಿಗೆ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರಾದ ಬಸವರಾಜೇಂದ್ರ ಎಚ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ನಗರದ ಶಹಾಪುರದ ರವೀಂದ್ರ ಕೌಶಿಕ ಇ ಗ್ರಂಥಾಲಯ, ವಡಗಾವಿ, ಸದಾಶಿವ ನಗರ ಶಾಖಾ ಗ್ರಂಥಾಲಯಗಳು,ಮತ್ತು ಪ್ರಧಾನ ಗ್ರಂಥಾಲಯಕ್ಕೆ ಭೇಟಿನೀಡಿ, ಅಲ್ಲಿಯ ಕಾರ್ಯನಿರ್ವಹಣೆ, ವಿವಿಧ ವಿಭಾಗಗಳು,ಪುಸ್ತಕ ಸಂಗ್ರಹ, ವರ್ಗೀಕರಣ ಮತ್ತು ಇತರ ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ಗ್ರಂಥಾಲಯದಲ್ಲಿನ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಓದುಗರೊಂದಿಗೆ ಮಾತನಾಡಿ, ಸಲಹೆ ಸೂಚನೆ ನೀಡಿದರು. ಪರೀಕ್ಷಾ ತಯಾರಿ, ಓದುವ ಹವ್ಯಾಸದ ಬಗ್ಗೆ ತಿಳಿಹೇಳಿದರು. ಸಾರ್ವಜನಿಕರಿಗೆ ಯಾವದೇ ತೊಂದರೆ ಆಗದಂತೆ ಸೇವೆ ನೀಡುವುದು, ಮೂಲಭೂತ ಸೌಕರ್ಯಗಳನ್ನು ನೀಡಿ, ಉತ್ತಮ ಸೇವೆ ಸಲ್ಲಿಸುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಈ ಸಂಧರ್ಭದಲ್ಲಿ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ರಾಮಯ್ಯ, ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಕೃಷ್ಣಮೂರ್ತಿ, ಸಿಬ್ಬಂದಿಗಳಾದ ಪ್ರಕಾಶ ಇಚಲಕರಂಜಿ, ಅಶೋಕ ಬೆನ್ನೂರ, ಸಂಜೀವ ಕುಲಕರ್ಣಿ, ಮತ್ತಿತರು ಮತ್ತು ವಿಧ್ಯಾರ್ಥಿಗಳು, ಸಾರ್ವಜನಿಕ ಓದುಗರು ಹಾಜರಿದ್ದರು.

