- Advertisement -
ದಾವಣಗೆರೆಯ ಶ್ರೀಮತಿ ಸರಸ್ವತಿ ದಾನಪ್ಪ ಶೆಣೈ ಪ್ರತಿಷ್ಠಾನವು ಕನ್ನಡ ನಾಡು ನುಡಿ ಸೇವೆಗೆ ನೀಡುವ ಸರಸ್ವತಿ ಸಾಧಕ ಸಿರಿ ಪ್ರಶಸ್ತಿಗೆ ಕೊಡಗಿನ ಸಾಹಿತಿ ಹಾಗೂ ಪರಿಸರ ಚಿಂತಕರಾದ ಎಂ. ಡಿ.ಅಯ್ಯಪ್ಪ ಆಯ್ಕೆಯಾಗಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಬಲ್ಲಮಾವಟಿ ಗ್ರಾಮದವರಾದ ಅಯ್ಯಪ್ಪ ಅವರು ಇದುವರೆಗೆ ನಾಲ್ಕು ಕನ್ನಡ ಕೃತಿಗಳನ್ನು ಪ್ರಕಟಿಸಿದ್ದಾರೆ.ಪಕ್ಷಿಧಾಮಗಳನ್ನು ಕುರಿತ ಅವರ ಕೃತಿ ವನ್ಯಪ್ರಾಣಿ ಪ್ರೇಮಿಗಳ ಮನ ಸೆಳೆದಿದೆ. ಸದ್ಯದಲ್ಲೇ ಕೊಡವ ಭಾಷೆಯ ಕಥಾ ಸಂಕಲನವನ್ನು ಹೊರ ತರುವ ಸಿದ್ಧತೆಯಲ್ಲಿದ್ದಾರೆ.
ಮುಂಬರುವ ಏಪ್ರಿಲ್ 27 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಾಹಿತಿ ಅಯ್ಯಪ್ಪ ಅವರಿಗೆ ಸರಸ್ವತಿ ಸಾಧಕ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ತೆಯ ಪ್ರಕಟಣೆ ತಿಳಿಸಿದೆ.