ರೋಟರಿ ಐವರಿ ಸಿಟಿ ವತಿಯಿಂದ ಮಾತೆ ಮೀನಾಕ್ಷಿ ವಿದ್ಯಾರ್ಥಿ ವೇತನ ವಿತರಣೆ

Must Read

ಮೈಸೂರಿನ ರೋಟರಿ ಐವರಿ ಸಿಟಿ ವತಿಯಿಂದ ದಿನಾಂಕ:೦೭.೦೧.೨೦೨೬ ರಂದು ಮಾನಂದವಾಡಿ ರಸ್ತೆಯಲ್ಲಿರುವ ಇನ್ಸ್ಟ್ಯೂಟ್ ಆಫ್ ಇಂಜಿನಿರ‍್ಸ್ ಕಾಲೇಜಿನ ಸರ್ವಪಲ್ಲಿ ರಾಧಾಕೃಷ್ಣನ್ ಸಭಾಂಗಣದಲ್ಲಿ ಸ್ವಾತಂತ್ರ ಹೋರಾಟಗಾರರಾಗಿದ್ದ ಜಿ.ಎಲ್.ಸ್ವಾಮಿ ರವರ ಧರ್ಮಪತ್ನಿ ಮಾತೆ ಮೀನಾಕ್ಷಿ ರವರ ಹೆಸರಿನಲ್ಲಿ ವಿದ್ಯಾರ್ಥಿ ವೇತನವನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿತರಿಸುವ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತರಾದ ಗೌರಿಸತ್ಯ ರವರು ಮಾತನಾಡಿ ಸಮಾಜಸೇವೆಯಿಂದ ಮನುಷ್ಯನಿಗೆ ಆತ್ಮತೃಪ್ತಿ ಸಿಗುತ್ತದೆ, ಜೊತೆಗೆ ಸಂತೃಪ್ತಿ ಜೀವನ ನಡೆಸಿದ ಸಂತೋಷದ ಅನುಭವ ನಮಗೆಲ್ಲ ಲಭಿಸುತ್ತದೆ ಎಂದರು.

ಸಮಾಜದಲ್ಲಿ ಉಳ್ಳವರು ಕಷ್ಟದಲ್ಲಿರುವವರಿಗೆ, ನೊಂದವರಿಗೆ ಸಹಾಯಹಸ್ತವನ್ನು ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳು ಸಮಾಜದಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕೆಂದ ಅವರು, ಶಿಕ್ಷಕರಾದವರು ಪಾಠ ಬೋಧನೆಯ ಜೊತೆಗೆ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಆ ಮೂಲಕ ಸೇವಾಕಾರ್ಯಗಳು ಮುಂದುವರೆಯಲು ಸಹಾಯವಾಗುತ್ತದೆ ಎಂದು ತಿಳಿಸಿದರಲ್ಲದೆ, ಸೇವೆಯ ಮೂಲಕ ಶಿಕ್ಷಣ, ಶಿಕ್ಷಣದ ಮೂಲಕ ಸೇವೆ ಎಲ್ಲರಲ್ಲೂ ಬೆಳೆಯಬೇಕೆಂದು ತಿಳಿಸಿದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ನ್ಯಾಷನಲ್ ಇನ್ಸಿಟ್ಯೂಟ್ ಇಂಜಿನಿಯರ್ ಸಂಸ್ಥೆಯ ಅಧ್ಯಕ್ಷರು ಹಾಗೂ ನುರಿತ ವೈದ್ಯಕೀಯ ತಜ್ಞರಾದ ಡಾ.ಎಂ.ಎಸ್.ರಂಗನಾಥ್ ರವರು ಮಾತನಾಡಿ ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆದುಕೊಂಡು ಆ ಹಣವನ್ನು ವಿದ್ಯಾಭ್ಯಾಸಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು, ನಂತರದ ದಿನಗಳಲ್ಲಿ ತಾವುಗಳು ಉನ್ನತಮಟ್ಟ ತಲುಪಿದಾಗ ಬೆಳೆದುಬಂದ ದಾರಿಯನ್ನು ಎಂದಿಗೂ ಮರೆಯಬಾರದು, ಸಮುದಾಯಕ್ಕೆ ಸಹಾಯ, ಸಹಕಾರವನ್ನು ನೀಡಬೇಕೆಂದರು, ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಮಾಜ ಸೇವೆಗೆ ರೋಟರಿ ಐವರಿ ಸಿಟಿಯ ಜೊತೆ ನಾನು ಹಾಗೂ ನಮ್ಮ ಆಸ್ಪತ್ರೆ ಸದಾ ಕೈಜೋಡಿಸುತ್ತೇವೆಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಎನ್.ಐ.ಇ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಶಾರದಾವಿಲಾಸ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾದ ಡಾ.ಜಿ.ಎಲ್.ಶೇಖರ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿ ತಾಯಿ ನಮಗೆ ಜನ್ಮವನ್ನು ನೀಡುತ್ತಾಳೆ, ಜನ್ಮಕೊಟ್ಟ ತಾಯಿಯ ಋಣವನ್ನು ಎಂದೆಂದಿಗೂ ತೀರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವಕಾಶ ಸಿಕ್ಕಾಗ ತಾಯಿಯ ಹೆಸರಿನಲ್ಲಿ ಇಂತಹ ಸೇವಾ ಕಾರ್ಯಗಳನ್ನು ಮಾಡಬೇಕೆಂದು ಹೇಳಿದರು.

ವೇದಿಕೆಯಲ್ಲಿ ರೋಟರಿ ಐವರಿ ಸಿಟಿಯ ಅಧ್ಯಕ್ಷರಾದ ರೋ.ಕೇಶವ್ ಕಾಂಚನ್, ಕಾರ್ಯದರ್ಶಿ ರೋ.ಮುಖೇಶ್, ರೋ.ಡಾ.ಜಿ.ಎಲ್.ಶೇಖರ್, ರೋ.ಸುನಿಲ್‌ಬಾಳಿಗಾ, ರೋ.ಶಶಿಧರ್, ರೋ.ಡಾ.ಸಚ್ಚಿದಾನಂದ, ರೋ.ಇಫ್ತಿಕರ್, ರೋ.ಆರ್.ನರಸಿಂಹ, ರೋ.ಪೂಜಾ ಬಾಳಿಗಾ, ಶಾರದಾವಿಲಾಸ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ದೇವಿಕಾ, ಸಿ.ಕೆ.ಅಶೋಕ್ ಕುಮಾರ್, ಮನೋಹರ್, ಮನೋಜ್‌ಕುಮಾರ್ ಹಾಗೂ ವಿವಿಧ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಐವರಿ ಸಿಟಿ ಕ್ಲಬ್‌ನ ಅಧ್ಯಕ್ಷರಾದ ರೋ.ಕೇಶವ್ ಕಾಂಚನ್ ಸ್ವಾಗತಿಸಿದರೆ, ಕಾರ್ಯದರ್ಶಿ ರೋ.ಮುಖೇಶ್ ವಂದಿಸಿದರು, ರೋ.ತೇನ್‌ಮೌಳಿ ಕಾರ್ಯಕ್ರಮ ನಿರೂಪಿಸಿದರು..

LEAVE A REPLY

Please enter your comment!
Please enter your name here

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group