ನದೀಮ ಸನದಿಗೆ ಮಧುರಚೆನ್ನ ಪ್ರಶಸ್ತಿ

Must Read

ಬೆಳಗಾವಿ: ಹಲಸಂಗಿಯ ಮಧುರಚೆನ್ನ ಪ್ರತಿಷ್ಠಾನ ನೀಡುವ ೨೦೧೯ ನೇ ಸಾಲಿನ ಮಧುರಚೆನ್ನ ಕಾವ್ಯ ಪ್ರಶಸ್ತಿಗೆ ಬೆಳಗಾವಿಯ ಯುವಕವಿ ನದೀಮ ಸನದಿ ಅವರ “ಹುಲಿಯ ನೆತ್ತಿಗೆ ನೆರಳು” ಕವನ ಸಂಕಲನ ಆಯ್ಕೆಯಾಗಿದೆ.

ನದೀಮ ಅವರು ಶಿಂದೊಳ್ಳಿ ಗ್ರಾಮದವರಾಗಿದ್ದು ವೃತ್ತಿಯಿಂದ ಸಿವಿಲ್ ಇಂಜಿನಿಯರ್ ಆಗಿದ್ದಾರೆ. ಇವರ ಇದೇ ಕೃತಿಗೆ ಈಗಾಗಲೇ ಹಾಸನದ ಕಾವ್ಯಮಾಣಿಕ್ಯ ರಾಜ್ಯ ಪ್ರಶಸ್ತಿ ಹಾಗೂ ಸೇಡಂ ನ ಅಮ್ಮ ಪ್ರಶಸ್ತಿ ಪ್ರಾಪ್ತವಾಗಿದೆ.

ಪ್ರಶಸ್ತಿಯು ೧೦,೦೦೦ ರೂ ನಗದು ಹಾಗೂ ಗೌರವ ಸನ್ಮಾನವನ್ನು ಒಳಗೊಂಡಿದೆ. ಇದೇ ತಿಂಗಳ ೧೫ ರಂದು ಹಲಸಂಗಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸನದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಚಾಲಕ ಸುಮೀತ ಮೇತ್ರಿ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group