spot_img
spot_img

ಗರಗದ ಮಡಿವಾಳೇಶ್ವರ ಸಮಾಜದ ಪರಿವರ್ತಕರಾಗಿ ಶ್ರೇಷ್ಠತೆ  ಕಂಡವರು- ಡಾ.ವಿಶ್ವ ಪ್ರಭು ಶ್ರೀಗಳು

Must Read

spot_img
ಸಿಂದಗಿ: ಗರಗದ ಮಡಿವಾಳೇಶ್ವರ ಶ್ರೀಗಳು ಬಾಲ್ಯದಿಂದಲೇ ಪವಾಡ ಪುರುಷರಾಗಿ ಬೆಳೆದು ಕಿತ್ತೂರು ಸಂಸ್ಥಾನ ಪರಿತ್ಯಾಗ ಮಾಡಿ ಭಾರತ ಸಂಚಾರ ಮಾಡಿ ಕೊನೆಗೆ ಭಕ್ತರ ಕೋರಿಕೆಯಂತೆ ಗರಗದಲ್ಲಿ ನೆಲೆಸಿರುವ ಗರಗದ ಮಡಿವಾಳ ಶಿವಯೋಗಿಗಳು ದೊಡ್ಡ ಸಂಸ್ಕೃತ ಪಂಡಿತರು   ಅವರು ಜೀವನದುದ್ದಕ್ಕೂ ಪ್ರವಚನ, ಭಾಷಣದ ಮೂಲಕ ಪಾಂಡಿತ್ಯ ಪ್ರದರ್ಶಿಸದೇ ಜನರಿಗೆ ಬದುಕಿನ ಸತ್ಯದ  ಮಾರ್ಗ ತಿಳಿಸಿ ಸಮಾಜದ ಪರಿವರ್ತಕರಾಗಿ ಶ್ರೇಷ್ಠತೆ  ಕಂಡವರು ಎಂದು  ಸಿಂದಗಿ ಸಾರಂಗಮಠ  ಉತ್ತಾರಾಧಿಕಾರಿ   ಪ್ರವಚನಕಾರ ಡಾ. ವಿಶ್ವ ಪ್ರಭು ಶಿವಾಚಾರ್ಯರು ಹೇಳಿದರು.
ತಾಲೂಕಿನ ಸುಕ್ಷೇತ್ರ ಬ್ಯಾಕೋಡ ಗ್ರಾಮದ  ಹಿರೇಮಠದ ಶ್ರೀ ಮದ್ ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಅಭಿನವ ಸಿದ್ಧಲಿಂಗ  ರಾಜದೇಶಿಕೇಂದ್ರ ಶಿವಾಚಾರ್ಯ ಭಗತ್ವಾದಂಗಳವರ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಷ ಬ್ರ ಶ್ರೀ ಬಸವಲಿಂಗೇಶ್ವರ ಜಾತ್ರೆ ಮಹೋತ್ಸವದ ಅಂಗವಾಗಿ, ಗರಗದ ಶ್ರೀ ಮಡಿವಾಳೇಶ್ವರ  ಪುರಾಣ -ಪ್ರವಚನ  ಕಾರ್ಯಕ್ರಮದಲ್ಲಿ ಪುರಾಣ ಪ್ರವಚನಕಾರರಾಗಿ ಅವರು ಮಾತನಾಡಿ, ಜಗತ್ತಿನಲ್ಲಿ ನುಡಿದಂತೆ ನಡೆಯುವ ಮಹಾತ್ಮರು ಜಗತ್ತಿನಲ್ಲಿ ಸರ್ವ ಶ್ರೇಷ್ಠತೆಯನ್ನು ಹೊಂದುವದು ಸಹಜ. ಮಹಾತ್ಮರಲ್ಲಿ ಬ್ರಹ್ಮಜ್ಞಾನ ಸಂಪನ್ನ ಬ್ರಹ್ಮಚಾರಿ ಶ್ರೀ  ಗರಗದ ಮಡಿವಾಳೇಶ್ವರ ಜೀನವ ಚರಿತ್ರೆ ಆಲಿಸುವದರಿಂದ  ಜೀವನ ಪಾವನವಾಗುತ್ತದೆ. ಗ್ರಾಮದ ಬಸವಲಿಂಗೇಶ್ವರರು ಪವಾಡ ಪುರುಷರು ಅವರು ಗುರು ಪರಪಂರೆಯಲ್ಲಿ ಜೀವನ ನಡೆಸಿ  ನುಡಿದಂತೆ  ನಡೆದವರು  ಮನಸ್ಸು ಪರಿಶುದ್ಧವಾಗಬೇಕಾದರೆ ಪ್ರತಿ ದಿನವು ದೇವಾಲಯಕ್ಕೆ ಬಂದು ಭಕ್ತಿ ಭಾವದಿಂದ ನೆನೆಯಬೇಕು   ಎಂದರು.
  ಸಾರಂಗಮಠ -ಗಜ್ಜಿನಮಠದ ಪೀಠದ ಒಡೆಯ  ಡಾ .ಪ್ರಭು ಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯವಹಿಸಿ ಆರ್ಶೀವಚನ  ನೀಡಿ, ಗರಗದ ಮಡಿವಾಳೇಶ್ವರ ಜೀವನ ಚರಿತ್ರೆ ಆಲಿಸುವ ಮೂಲಕ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ರೂಡಿಸಿ ಕೊಂಡು ತಂದೆ ತಾಯಿ ಗುರು ಹಿರಿಯರನ್ನು ದೇವರ ಸ್ವರೂಪದಲ್ಲಿ ಕಾಣಬೇಕು .ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಆಚಾರ ವಿಚಾರ ಕಲಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಧರ್ಮದ ದಾರಿಯಲ್ಲಿ  ನಡೆಯುವಂತೆ  ಮಾರ್ಗದರ್ಶನ ನೀಡಬೇಕು  ಎಂದರು.
   ಸಂಗೀತಗಾರ ಅನೀಲಕುಮಾರ ಮಠಪತಿ ಹಾಗೂ ಸಾಹಿತಿ ಬರಹಗಾರ ಕವಿ ಕಲಾವಿದ ಮುತ್ತುರಾಜ ಬ್ಯಾಕೋಡ ಸಂಗೀತ ಸೇವೆ ಮಾಡಿದರು.
ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ನಿರೂಪಿಸಿದರು .
ಶರಣಯ್ಯ ಮಠ, ಶಿವಯ್ಯ ಹಿರೇಮಠ,
ರಾಯಗೊಂಡಪ್ಪಗೌಡ ಬಿರಾದಾರ, ಸಂತೋಷ ಹಳಗೊಂಡ, ಸಿದ್ದಣ್ಣ ಹವಳಗಿ, ಪರಸುರಾಮ ದೊಡಮನಿ, ಶ್ರೀಶೈಲ ನಾಯ್ಕೋಡಿ, ಮಲ್ಲಿಕಾರ್ಜುನ ಬುಶೇಟ್ಟಿ, ಗೊಲ್ಲಾಳಪ್ಪಗೌಡ ಎಂ ಬಿರಾದಾರ, ಅರವಿಂದ್ರಗೌಡ ಬಿರಾದಾರ ರಾಮಗೊಂಡ, ಶ್ರೀಮತಿ ಗಂಗು ರುದ್ರಯ್ಯ ಹಿರೇಮಠ, ಶಿಕ್ಷಕ ಮಕ್ಕಳ  ಸಾಹಿತಿ ಬಸವರಾಜ ಅಗಸರ ಸೇರಿದಂತೆ ಭಕ್ತಿರಿಗೆ ಶ್ರೀಮಠದ ಪರವಾಗಿ ಸನ್ಮಾನಿಸಿ ಗೌರವಿಸಿದರು.
- Advertisement -

LEAVE A REPLY

Please enter your comment!
Please enter your name here

- Advertisement -

Latest News

ಪೋಶೆಟ್ಟಿಹಳ್ಳಿಯಲ್ಲಿ ವೈಭವದ ಹನುಮ ಜಯಂತಿ ಆಚರಣೆ

  ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲ್ಲೂಕಿನ ಪಂಚ ಗಿರಿಗಳ ಮಧ್ಯೆ ಇರುವ ಉತ್ತರ ಪಿನಾಕಿನಿ ನದಿ ತೀರದ  ಪೋಶೆಟ್ಟಿಹಳ್ಳಿ ಗ್ರಾಮದಲ್ಲಿ ಶ್ರೀ ವ್ಯಾಸರಾಜ ರಿಂದ ಪ್ರತಿಷ್ಠಿತ...
- Advertisement -

More Articles Like This

- Advertisement -
close
error: Content is protected !!
Join WhatsApp Group