ಬಿಹಾರದಲ್ಲಿ ಮಹಾ ಘಟಬಂಧನ್ ಸುಪಡಾ ಸಾಫ್ !
ಬಹು ನಿರೀಕ್ಷಿತ ಬಿಹಾರ ಚುನಾವಣೆಯಲ್ಲಿ ಮಹಾ ಘಟಬಂಧನ್ ಒಕ್ಕೂಟದ ಸುಪಡಾ ಸಾಫ್ ಆಗಿದ್ದು ಕೇವಲ ೩೪ ಸೀಟ್ ಗೆಲ್ಲುವ ಮೂಲಕ ಅತ್ಯಂತ ದಯನೀಯ ಸ್ಥಿತಿಗೆ ಬಂದು ತಲುಪಿದೆ.
ಇತ್ತ ಬಿಜೆಪಿ, ಜೆಡಿಯು ಮಿಶ್ರಿತ ಎನ್ ಡಿಎ ಪಕ್ಷ ದಾಖಲೆಯ ೨೦೨ ಸೀಟುಗಳನ್ನು ಗೆಲ್ಲುವ ಮೂಲಕ ಬಿಹಾರದಲ್ಲಿ ದಾಖಲೆ ಸ್ಥಾಪಿಸಿದೆ.
ಇದರಿಂದ ಒಂದು ಕಾಲದ ಜಂಗಲ್ ರಾಜ್ ಗೆ ಬಿಹಾರದ ಜನ ಅತ್ಯಂತ ದೊಡ್ಡ ಹೊಡೆತ ನೀಡಿದ್ದಾರೆ. ಲಾಲೂ ಪ್ರಸಾದ ಯಾದವ ನೇತೃತ್ವದ ಜಂಗಲ್ ರಾಜ್ ಆಡಳಿತವನ್ನು ಜನರು ಇನ್ನೂ ಮರೆತಿಲ್ಲವೆಂಬಂತೆ ಮಹಾ ಘಟಬಂಧನ್ ಒಕ್ಕೂಟದ ಜನರಿಗೆ ಮರೆಯಲಾರದ ತಿರುಗೇಟು ನೀಡಿದ್ದಾರೆ.
ಚುನಾವಣೆಯ ಕಾಲಕ್ಕೆ ಕಾಂಗ್ರೆಸ್ ನಾಯಕ ಹೆಜ್ಜೆ ಹೆಜ್ಜೆಗೂ ಜಾತಿಯನ್ನು ಮುಂದೆ ಮಾಡಿ ಮಾತನಾಡುತ್ತ ಜನರಲ್ಲಿ ಒಂದು ರೀತಿಯ ಜಿಗುಪ್ಸೆ ಮೂಡಿಸಿದ್ದರು ಎಂಬಂಥ ಅಭಿಪ್ರಾಯಗಳು ಜನತೆಯಿಂದ ವ್ಯಕ್ತವಾಗುತ್ತಿವೆ.
ಫಲಿತಾಂಶ ನೋಡುವುದಾದರೆ ಒಟ್ಟು ೨೪೩ ಸ್ಥಾನಗಳ ಪೈಕಿ ಬಹುಮತಕ್ಕೆ ೧೨೨ ಸ್ಥಾನಗಳು ಬೇಕಾಗಿದ್ದು ಬಿಜೆಪಿ ೯೧, ನಿತೀಶಕುಮಾರ ಯಾದವರ ಸಂಯುಕ್ತ ಜನತಾದಳಕ್ಕೆ ೮೩ ಸ್ಥಾನಗಳು ಬಂದಿವೆ. ಇತರ ಪಕ್ಷಗಳೊಡನೆ ಒಟ್ಟು ೨೦೨ ಸ್ಥಾನ ಪಡೆದು ದಾಖಲೆ ನಿರ್ಮಿಸಿದೆ. ೨೦೧೦ ರಲ್ಲಿ ಎನ್ ಡಿಎ ೨೦೬ ಸ್ಥಾನ ಪಡೆದಿತ್ತು.ಆರ್ ಜೆಡಿಯ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಸ್ವತಃ ಸೋಲು ಕಂಡಿದ್ದು ಬಿಜೆಪಿಯ ಸತೀಶ ಕುಮಾರ ಜಯ ಸಾಧಿಸಿದ್ದಾರೆ. ಪಕ್ಷಕ್ಕೆ ಕೇವಲ ೨೭ ಸ್ಥಾನಗಳು ಬಂದಿವೆ. ಕಾಂಗ್ರೆಸ್ ಪಕ್ಷ ಅತ್ಯಂತ ಹೀನಾಯ ಕೇವಲ ೫ ಸ್ಥಾನಗಳಿಗೆ ತೃಪ್ತಿಪಡಬೇಕಾಗಿದೆ. ಇತರೆ ೭ ಸ್ಥಾನಗಳು ಪಕ್ಷೇತರಕ್ಕೆ ಹೋಗಿವೆ.
ಇನ್ನು ಚುನಾವಣಾ ಚಾಣಕ್ಯ ಎಂದು ಕರೆಯಲ್ಪಡುತ್ತಿದ್ದ ಜನ ಸುರಾಜ್ ಪಕ್ಷದ ಪ್ರಶಾಂತ ಕಿಶೋರ ಸೋಲು ಕಂಡಿದ್ದಾರೆ
ಕೆಲವು ದಿನಗಳ ಹಿಂದೆ ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಅವರು ಮಾತನಾಡುತ್ತ ದಿ. ೧೪.೧೧.೨೦೨೫ ರ ಬಿಹಾರ ಚುನಾವಣೆಯ ಮತ ಎಣಿಕೆಯಲ್ಲಿ ಮಹಾ ಘಟಬಂಧನದ “ಸುಪಡಾ ಸಾಫ್” ಆಗುತ್ತದೆ ಎಂಬ ಪದ ಬಳಸಿದ್ದರು.
ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆಶಿಯವರು ಬಿಹಾರ ಜನತೆಯ ನಿರ್ಧಾರಕ್ಕೆ ತಲೆ ಬಾಗುವುದಾಗಿ ಹೇಳಿದ್ದಾರೆ.
ಅನೇಕ ಬಿಜೆಪಿ ನಾಯಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಬಿಹಾರದ ಜಂಗಲ್ ರಾಜ್ ಅಂತ್ಯವಾದಂತಾಗಿದೆ ಎಂದು ಹೇಳಿದ್ದಾರೆ.
ಇತ್ತ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಹಾರದಲ್ಲಿ ವೋಟ್ ಚೋರಿಯಾಗಿದೆ ಎಂಬ ತಮ್ಮ ಹಳೆಯ ಹಾಡು ಹಾಡಿದ್ದಾರೆ. ಎನ್ ಡಿಎ ಗೆ ಇಷ್ಟೊಂದು ಬೃಹತ್ ಗೆಲುವು ಯಾಕೆ, ಹೇಗೆ ಬಂತು ಎಂಬುದನ್ನು ಮುಂದೆ ನೋಡುವುದಾಗಿ ಹೇಳಿದರು.

