ಮೂಡಲಗಿ: ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀದೇವಿ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜೂ.5 ರಿಂದ 7 ರವರೆಗೆ ಮೂರು ದಿನಗಳ ಕಾಲ ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ದೇವಸ್ಥಾನ ಕಮೀಟಿಯ ಭರಮಪ್ಪ ಗಂಗಣ್ಣವರ ಹೇಳಿದರು.
ಗುರುವಾರದಂದು ಮೂಡಲಗಿಯ ಪತ್ರಿಕಾ ಕಚೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಸಗುಪ್ಪಿ ಗ್ರಾಮದ ಶ್ರೀ ಮಹಾಲಕ್ಷ್ಮೀದೇವಿ ದೇವಸ್ಥಾನದ ಕಟ್ಟಡ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೋಳಿಸಿ ಮಾತನಾಡಿದ ಅವರು, ಮೇ.5ರಂದು ಮಧ್ಯಾಹ್ನ 2ಕ್ಕೆ ಶ್ರೀ ಮಹಾಲಕ್ಷ್ಮೀದೇವಿಯ ನೂತನ ಮೂರ್ತಿ, ಕಳಸ ಮತ್ತು ನವಗ್ರಹ ಮೂರ್ತಿಗಳನ್ನುವಿವಿಧ ವಾದ್ಯ ಮೇಳ ಹಾಗೂ ಕುಂಭಮೇಳದ ಮೆರವಣಿಗೆ ಜರುಗುವುದು. ಸಂಜೆ. 5ಕ್ಕೆ ಸಕಲ ಶ್ರೀಗಳಿಂದ ದೇವಸ್ಥಾನದ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಗಳು ಆರಂಭವಾಗುವುದು. ಸಂಜೆ 6 ಕ್ಕೆ ಜರುಗುವು ಆಧ್ಯಾತ್ಮಕ ಪ್ರವಚನದ ದಿವ್ಯ ಸಾನ್ನಿಧ್ಯವನ್ನು ಗೋಕಾಕದ ಶ್ರೀ ಮುರುಘರಾಜೇಂದ್ರ ಶ್ರೀಗಳು ವಹಿಸುವರು. ಸಾನ್ನಿಧ್ಯವನ್ನು ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು, ಕಪ್ಪತಗುಡ್ಡದ ಶ್ರೀ ಶಿವುಕುಮಾರ ಶ್ರೀಗಳು, ಕವಲಗುಡ್ದ ಶ್ರೀ ಅಮರೇಶ್ವರ ಮಹಾರಾಜರು, ಹುಣಶ್ಯಾಳ ಪಿ.ಜಿ ಯ ಶ್ರೀ ನಿಜಗುಣ ದೇವರು, ಕಟಕಭಾಂವಿಯ ಶ್ರೀ ಅಭಿನವ ಧರೇಶ್ವರ ಶ್ರೀಗಳು ವಹಿಸುವರು.
ಮುಖ್ಯ ಅಥಿತಿಗಳಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಸಚಿವ ಸತೀಶ ಜಾರಕಿಹೊಳಿ ಭಾಗಹಿಸುವರು. ರಾತ್ರಿ 9 ಗಂಟೆಯಿಂದ ಬೆಳಗಿನವರೆಗೆ ವಿವಿಧ ಹೋಮ ಹವನಗಳು, ಪೂಜಾ ವಿಧಿ-ವಿಧಾನಗಳು ಹಾಗೂ ರುದ್ರಾಭಿಷೇಕ ಜರುಗುವವು.
ಜೂ.6 ರಂದು ಮುಂ 7ಕ್ಕೆ ಗ್ರಾಮದ ಸಕಲ ದೇವರುಗಳಿಗೆ ಉಡಿ ತುಂಬುವ ಕಾರ್ಯಕ್ರಮ, 9-30 ಕ್ಕೆ ಶ್ರೀ ಮಹಾಲಕ್ಷ್ಮೀದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ, ನವಗ್ರಹ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮ ವಿವಿಧ ಶ್ರೀಗಳ ಸಾನ್ನಿಧ್ಯದಲ್ಲಿ ಜರುಗುವುದು. 12-30ಕ್ಕೆ ಜರುಗುವ ಆಶೀರ್ವಚನ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯವನ್ನು ನಿಡಸೋಸಿಯ ಶ್ರೀ ಪಂಚಮ ಶಿವಲಿಂಗೇಶ್ವರ ಶ್ರೀಗಳು, ಅರಭಾವಿಯ ಶ್ರೀ ಸಿದ್ದಲಿಂಗ ಶ್ರೀಗಳು, ಹೊಸದುರ್ಗದ ಶ್ರೀ ಪುರುಷೋತ್ತಮಾನಂದ ಪುರಿ ಶ್ರೀಗಳು, ಬಂಡಿಗಣಿಯ ಶ್ರೀ ಅನ್ನದಾನೇಶ್ವರ ಶ್ರೀಗಳು, ಬಾಗೋಜಿಕೊಪ್ಪದ ಶ್ರೀ ಶಿವಲಿಂಗಮುರುಘರಾಜೇಂದ್ರ ಶಿವಾಚಾರ್ಯ ಶ್ರೀಗಳು ವಹಿಸುವರು. ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸುವರು, ಸಾಯಂಕಾಲ 4ಕ್ಕೆ ಮಸಗುಪ್ಪಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ದೇವರುಗಳ ಪಲ್ಲಕ್ಕಿಗಳ ಆಗಮಿಸುವವು. ಸಂಜೆ 6ಕ್ಕೆ ಜರುಗುವ ಆಧ್ಯಾತ್ಮಿಕ ಪ್ರವಚನದ ದಿವ್ಯ ಸಾನ್ನಿಧ್ಯವನ್ನು ಶ್ರೀಶೈಲ ಪೀಠದ ಡಾ.ಚನ್ನಸಿದರಾಮ ಪಂಡಿತರಾದ್ಯ ಶಿವಾಚಾರ್ಯ ಭಗವತ್ಪಾದರರು, ಹಂದಿಗುಂದದ ಶ್ರೀಶಿವಾನಂದ ಶ್ರೀಗಳು, ಘಟಪ್ರಭಾದ ಶ್ರೀ ಮಲ್ಲಿಕಾರ್ಜುನ ಶ್ರೀಗಳು, ಚಿಮ್ಮಡದ ಶ್ರೀ ಪ್ರಬು ಶ್ರೀಗಳು, ಶೆಗುಣಶಿಯ ಶ್ರೀ ಮಹಂತಪ್ರಭು ಶ್ರೀಗಳು ವಹಿಸುವರು. ರಾತ್ರಿ 10ಕ್ಕೆ ವಿವಿಧ ಗ್ರಾಮಗಳಿಂದ ವಾಲಗಮೇಳಗಳು ಜರುಗುವದು.
ಜೂ.7 ರಂದು ಮುಂ. 7ಕ್ಕೆ ಸಕಲ ದೇವತೆಗಳಿಗೆ ಪೂಜಾ ಕಾರ್ಯಕ್ರಮ, 10ಕ್ಕೆ ಪಲ್ಲಕ್ಕಿ ಉತ್ಸವ ನೆರವೇರುವುದು ಎಂದರು.
ಕಮೀಟಿಯ ಸಂಜು ಹೊಸಕೋಟಿ ಮಾತನಾಡಿ, ಮಸಗುಪ್ಪಿ ಗ್ರಾಮದಲ್ಲಿ ಮೂರು ದಿನಗಳ ಕಾಲ ಜರುಗುವ ಮಹಾಲಕ್ಷ್ಮೀದೇವಿ ನೂತನಕಟ್ಟಡ ಉದ್ಘಾಟನೆಯಲ್ಲಿ ಉತ್ತಮುತ್ತಲಿನ ಭಕ್ತಾಧಿಗಳು ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಆನಂದ ಹೊಸಕೋಟಿ, ಮಹಾಂತೇಶ ಕುರಿ, ಈಶ್ವರ ಗಾಡವಿ ಇದ್ದರು.