ಆರೋಗ್ಯದ ಸೇವೆ ಸಲ್ಲಿಸುವಲ್ಲಿ ಪ್ರಯತ್ನಿಸಬೇಕು ; ಲೆಕ್ಕ ಪರಿಶೋಧಕ ಗದಾಡಿ ಅಭಿಮತ
ಮೂಡಲಗಿ : ಶೇರುದಾರರು ಹಾಗೂ ಠೇವಣಿದಾರರ ಸಹಕಾರದಿಂದ ಸಂಘವು ೪.೦೪ ಕೋಟಿ ಲಾಭ ಹೊಂದಿದೆ. ಇದು ನಮ್ಮ ಸಹಕಾರಿ ಸಂಘದ ಬೆಳವಣಿಗೆಯ ಪ್ರತೀಕ ಎಂದು ಅಧ್ಯಕ್ಷ ಮಲ್ಲಪ್ಪ ಗಾಣಿಗೇರ ಹೇಳಿದರು.
ಮಹಾಲಕ್ಷ್ಮಿ ಸಭಾಭವನದಲ್ಲಿ ಬುಧವಾರ ಜರುಗಿದ ಮಹಾಲಕ್ಷ್ಮಿ ಅರ್ಬನ್ ಕೋ ಆಪ್ ಸೊಸಾಯಿಟಿಯ ೩೩ ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸಂಘವು ೩.೦೨ ಕೋಟಿ ಶೇರು ಸಂಗ್ರಹಿಸಿ. ೧೯.೮೨ ನಿಧಿಗಳ ಹೊಂದಿ ೧೫೧ ಕೋಟಿ ದುಡಿಯುವ ಬಂಡವಾಳ ಠೇವಣಿ ೧೨೦ ಕೋಟಿ ಹೊಂದಿ, ೧೦೬ ಕೋಟಿ ಸಾಲ ವಿತರಿಸಿದೆ. ಇದಕ್ಕೆ ಕಾರಣ ನಮ್ಮ ಸರ್ವ ಆಡಳಿತ ಮಂಡಳಿಯ ಪಾರದರ್ಶಕತೆ ಸಿಬ್ಬಂದಿಯ ಪರಿಶ್ರಮ, ಸೊಸಾಯಿಟಿ ಹಾಗೂ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ಸಿಕ್ಕರು ಅಲ್ಲಿ ಠೇವಣಿ ಮಾಡಲು ಸಲಹೆ ನೀಡಿದರು.
ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ ಮಾತನಾಡಿ, ಆರ್ಥಿಕ ಸ್ವಾತಂತ್ರ‍್ಯ ಇಲ್ಲದ ಸಮಯದಲ್ಲಿ ದಕ್ಷಿಣ ಕನ್ನಡ ಹೊರತು ಪಡಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಈ ಸೊಸೈಟಿಗಳಲ್ಲಿ ಬೇಗ ಸಾಲ ಸಿಗುತ್ತಿರಲಿಲ್ಲ. ಈಗ ಸಾಲ ನೀಡಲು ಹಲವು ಸಂಘಗಳು ಪೈಪೋಟಿಗೆ ಇಳಿದಿದ್ದಾವೆ. ಹಾಗೆಯೆ ಮರು ಸಾಲದ ಸಮಯದಲ್ಲಿ ಹೆಣಗಾಡುತ್ತಿವೆ. ಠೇವುದಾರರು ಸಂಘದ ನಿರ್ದೇಶಕರ ವಿಶ್ವಾಸ ಮೇಲೆ ಠೇವಣಿ ಮಾಡುತ್ತಾರೆ. ಸಿಬ್ಬಂದಿಯ ನೇಮಕಾತಿಯಲ್ಲಿ ಸರಿಯಾದ ನಿಯಮಗಳನ್ನು ಪಾಲಿಸದಿದ್ದರೆ ಕಾನೂನು ಮುಂದೆ ಕೈ ಕಟ್ಟಿ ನಿಲ್ಲಬೇಕಾಗುತ್ತದೆ ಅದರ ಬಗ್ಗೆ ಎಚ್ಚರ ಇರಲಿ ಎಂದರು. ಆರ್ಥಿಕ ಸಂಸ್ಥೆಯವರು ಇದನ್ನು ಹೊರತು ಪಡಿಸಿ ಆರೋಗ್ಯದ ಸೇವೆ ಸಲ್ಲಿಸುವಲ್ಲಿ ಪ್ರಯತ್ನಿಸಬೇಕು ಎಂದರು.
ಸಲಹಾ ಸಮಿತಿಯ ಎಸ್ ವ್ಹಿ ಹೊನ್ನುಂಗರ, ಬಿ ಎಲ್ ಪಾಟೀಲ, ಎಸ್ ಎನ್ ಹೊಸಗೌಡ್ರ, ಎಸ್ ಬಿ ಮೇಟಿ ಮಾತನಾಡಿದರು.
ವೇದಿಕೆಯ ಮೇಲೆ ಶಾಖಾ ಸಲಹಾ ಸಮಿತಿಯ ಅಧ್ಯಕ್ಷರಾದ ಎಮ್ ಎಸ್ ತುಪ್ಪದ, ಬಿ.ವ್ಹಿ ಕುಮಕಾಳೆ, ಎನ್ ಎ ಶಾನವಾಡ, ಎಮ್ ಜಿ ಪಾಟೀಲ್ ಇದ್ದರು. ಪ್ರಧಾನ ಕಛೇರಿಯ ಆಡಳಿತ ಮಂಡಳಿ ಸದಸ್ಯರಾದ ಶಿವಬಸು ಖಾನಟ್ಟಿ, ಸಂತೋಷ ಪಾರ್ಶಿ, ಮಹಾದೇವ ಗೋಕಾಕ, ಸಚೀನ ಮುನ್ಯಾಳ, ಸಾಂವಕ್ಕ ಶೆಕ್ಕಿ, ಭಾರತಿ ಪಾಟೀಲ, ವಿದ್ಯಾಶ್ರೀ ಮುರಗೋಡ, ಗೌರವ್ವ ಪಾಟೀಲ, ಶೋಭಾ ಕದಂ ಉಪಸ್ಥಿತರಿದ್ದರು,
ಉಪಾಧ್ಯಕ್ಷ ಡಾ ಪ್ರಕಾಶ ನಿಡಗುಂದಿ ವರದಿ ವಾಚನ ಮಾಡಿದರು. ಕ್ರೋಢೀಕೃತ ಅಢಾವೆ ಸಹಕಾರ್ಯದರ್ಶಿ ಹಣಮಂತ ದೇಸಾಯಿ, ಲಾಭ ಹಾನಿ ಸುಭಾಸ ಪುಟ್ಟಿ, ಅಂದಾಜು ಲಾಭಹಾನಿ ಅರ್ಜುನ ಗೋಕಾಕ, ಲಾಭ ವಿಭಾಗಣೆ ಶಾಖಾ ಕಾರ್ಯದರ್ಶಿ ವಿಜಯ ನಿಡಗುಂದಿ ಮಂಡಿಸಿದರು. ಮಾರಾಟಾಧಿಕಾರಿ ಅರ್ಜುನ ಗಾಣಿಗೇರ ನಿರೂಪಿಸಿದರು.ಪ್ರಧಾನ ವವ್ಯಸ್ಥಾಪಕ ಚನಬಸು ಬಗನಾಳ ಸ್ವಾಗತಿಸಿದರು. ಎಸ್ ಜಿ ಪೂಜೇರ. ವಂದಿಸಿದರು.