ಹಾವೇರಿಯಲ್ಲಿ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಲೋಕಾರ್ಪಣೆ

Must Read

ಹಾವೇರಿ-ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಹಾವೇರಿ ಕಸ್ತೂರಿ ಸಿರಿಗನ್ನಡ ವೇದಿಕೆ, ಅಕ್ಕನ ಬಳಗದ ಸಹಯೋಗದೊಂದಿಗೆ ಹೊಂಡದ ಮಠದ ಆವರಣದಲ್ಲಿ ಶಿಕ್ಷಕಿ ಶ್ರೀಮತಿ ಲಲಿತಾ ನಿರಾಕಾರಿ ಅಧ್ಯಕ್ಷತೆಯಲ್ಲಿ, ಶ್ರೀಮತಿ ಶೈಲಜಾ ಎಮ್. ಕೋರಿಶೆಟ್ಟರ ನೇತೃತ್ವದಲ್ಲಿ ನಡೆಯಿತು.

ಗ್ರಂಥ ಲೋಕಾರ್ಪಣೆ ಗೊಳಿಸಿದ ಶಿಕ್ಷಕಿ ಶ್ರೀಮತಿ ಶೋಭಾ ಜವಟಗೇರಿ ಅವರು ಮಾತನಾಡಿ ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ *ಮಹಾನ್ ದಾರ್ಶನಿಕ ಬಸವಣ್ಣ* ಗ್ರಂಥ ಬಸವಣ್ಣನವರ ಜನನ, ಕಪ್ಪಡಿ ಸಂಗಮದಲ್ಲಿ ಬಸವಣ್ಣನವರ ವಿದ್ಯಾಭ್ಯಾಸ, ಕಾಯಕ ಜೀವನ, ಕಲ್ಯಾಣದಲ್ಲಿ ಬಸವಣ್ಣನವರ ಸಾಧನೆಗಳು, ಬಸವ ಮಹಾಮನೆ, ಪ್ರಸಾದ- ದಾಸೋಹ, ಅನುಭವ ಮಂಟಪದ ಸ್ಥಾಪನೆ, ಬಸವ ಪೂರ್ವದ ಪರಿಸ್ಥಿತಿ ಹಾಗೂ ನಂತರದ ಸಾಮಾಜಿಕ, ಆರ್ಥಿಕ, ಸಾಹಿತ್ಯಕ, ಶೈಕ್ಷಣಿಕ ಪರಿಸ್ಥಿತಿ ವಿವರದೊಡನೆ ಬಸವಣ್ಣನವರ ಘನ ವ್ಯಕ್ತಿತ್ವ ಹಾಗೂ ಜೀವನದ ಘಟನೆಗಳನ್ನು ಒಳಗೊಂಡು ಜನರಿಗೆ ಒಳ್ಳೆಯ ಸಂದೇಶಗಳನ್ನು ತಲುಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಹಾವೇರಿಯ ಕಸ್ತೂರಿ ಸಿರಿಗನ್ನಡ ವೇದಿಕೆ ಅಧ್ಯಕ್ಷ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಕೋರಿಶೆಟ್ಟರ ಮಾತನಾಡಿ ಸಕಲ ಜೀವಾತ್ಮರಿಗೆಲೇಸನೆ ಬಯಸಿದ ಮಹಾನ್ ಮಾನವತಾವಾದಿ, ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದ ವಿಶ್ವದ ಯುಗಪುರುಷ ಬಸವಣ್ಣನವರು ಮಹಾ ಮಾನವತಾವಾದಿ, ಸ್ವತಂತ್ರ ವಿಚಾರವಾದಿ, ಸಮತಾವಾದಿ, ದಲಿತೋದ್ಧಾರಕ, ಶ್ರೇಷ್ಠ ಅರ್ಥಶಾಸ್ತ್ರಜ್ಞ, ಸ್ತ್ರೀಕುಲೋದ್ಧಾರಕ, ಪ್ರಾಮಾಣಿಕ ಬದುಕಿನ ಪಾರದರ್ಶಕ ವ್ಯಕ್ತಿತ್ವದ ಮಹಾನ್ ದಾರ್ಶನಿಕರಾಗಿದ್ದರು. ಇಂದಿನ ವಿದ್ಯಾರ್ಥಿಗಳಲ್ಲಿ ಇಂತಹ ಕಲ್ಪನೆ ಬಿತ್ತುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ಉದಯೋನ್ಮುಖ ಬರಹಗಾರ ಅರುಣ ರೇವಣೆಪ್ಪ ಬಂಕಾಪುರ ಅವರು ಮಾತನಾಡಿ ಬಸವ ಸಮಿತಿಯು ಈಗಾಗಲೇ 50 ಭಾಷೆಗಳಲ್ಲಿ ವಚನಗಳನ್ನು ಭಾಷಾಂತರಿಸಿದೆ. ಶಾಲೆಯಿಂದ ಶಾಲೆಗೆ, ಕಾಲೇಜಿನಿಂದ ಕಾಲೇಜಿಗೆ, ವಚನಕಾರರು ಮತ್ತು ವ್ಯಕ್ತಿತ್ವ ಕಾರ್ಯಕ್ರಮವನ್ನು ಹಮ್ಮಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನವಾಗಿದೆ ಎಂದು ಹೇಳಿದರು.

ಶಿಕ್ಷಕರ ದಿನಾಚರಣೆಯ ನಿಮಿತ್ತ ಶಿಕ್ಷಕಿಯರಾದ ಶ್ರೀಮತಿ ಶೋಭಾ ಜವಟಗೇರಿ, ಶ್ರೀಮತಿ ಲಲಿತಾ ನಿರಾಕಾರಿ ಅವರು ಸನ್ಮಾನಿಸಲಾಯಿತು.ರಶ್ಮಿ ತುಪ್ಪದ ಸ್ವಾಗತಿಸಿದರು,ಕುಮಾರಿ ಕಾವ್ಯಾ ಪ್ರಾರ್ಥನೆ ಮಾಡಿದರು,
ಶ್ರೀಮತಿ ರುದ್ರಾಕ್ಷಿ ಬೆಂಬಳಗಿ ನಿರೂಪಿಸಿದರು, ಸಿದ್ದುಮತಿ ನೇಲುಗಿ, ಸುಧಾ ಆನೂರ್ ಶೆಟ್ಟರ, ಪ್ರೇಮಕ್ಕ ಅರವಿಬೃಂಗಿಮಠ ಅಕ್ಕನ ಬಳಗದ ಅಧ್ಯಕ್ಷರಾದ ವಿಮಲಾ ಮರ್ತೂರ್ ,ರೇಷ್ಮಾ ಮುಷ್ಟಿ, ತೋಟಕ್ಕ ಅಕ್ಕಿ, ರೇಖಾ ಬಸೂನಾಳ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group