spot_img
spot_img

ಮಹಾಶಿವರಾತ್ರಿ ಆಚರಣೆಯ ಮಹತ್ವ ತಿಳಿಯಿರಿ

Must Read

- Advertisement -

🎊 ಮಹಾಶಿವರಾತ್ರಿಯ ದಿನದಂದು ಶಿವನ ಮೂರ್ತಿ ಹಾಗೂ ಶಿವನ ಲಿಂಗವನ್ನು ಪೂಜಿಸಲಾಗುತ್ತದೆ. ಶಿವಲಿಂಗ ಶಿವನ ಸಂಕೇತವಾಗಿದೆ. ಶಿವ ಎಂದರೆ ಕಲ್ಯಾಣ ಮತ್ತು ಲಿಂಗ ಎಂದರೆ ಸೃಷ್ಟಿ. ಪೌರಾಣಿಕ ಗ್ರಂಥಗಳ ಪ್ರಕಾರ, ಭಗವಾನ್ ಶಿವನು ಭೂಮಿಯ ಮೇಲೆ ಜೀವನವನ್ನು ಪ್ರಚಾರ ಮಾಡಲು ಪ್ರಯತ್ನಿಸಿದನು. ಅದಕ್ಕಾಗಿಯೇ ಶಿವನನ್ನು ಆದಿದೇವ ಎಂದೂ ಕರೆಯಲಾಗುತ್ತದೆ.

🎊 ಹಿಂದೂ ಕ್ಯಾಲೆಂಡರ್ ಪ್ರಕಾರ, ಮಹಾಶಿವರಾತ್ರಿಯ ಈ ಪವಿತ್ರ ಹಬ್ಬವನ್ನು ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಆಚರಿಸಲಾಗುತ್ತದೆ. ಜೊತೆಗೆ ಭಗವಾನ್ ಭೋಲೆನಾಥನನ್ನು ಮಹಾಶಿವರಾತ್ರಿಯ ದಿನದಂದು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಈ ದಿನದಂದು ಮಹಾದೇವನ ಆರಾಧನೆ ಮಾಡುತ್ತಾ ಉಪವಾಸವನ್ನು ಮಾಡುವುದರಿಂದ ಅದೃಷ್ಟ ಮತ್ತು ಸಮೃದ್ಧಿಯನ್ನು ಲಭಿಸುತ್ತದೆ ಎಂದು ನಂಬಲಾಗುತ್ತದೆ.

🎊 ಹಿಂದೂಗಳಿಗೆ ಮಹಾಶಿವರಾತ್ರಿ ಬಹಳ ಮಹತ್ವವಾದ ಆಚರಣೆಯಾಗಿದೆ. ಈ ದಿನ ಜಾಗರಣೆ ಇದ್ದು ಶಿವನನ್ನು ಪೂಜಿಸಲಾಗುವುದು. ಯಾರು ಶಿವರಾತ್ರಿಯಂದು ಉಪವಾಸವಿದ್ದು ಶಿವನ ಪೂಜೆ ಮಾಡುತ್ತಾರೋ ಅವರು ಶಿವನ ಕೃಪೆಗೆ ಪಾತ್ರರಾಗುತ್ತಾರೆ ಎಂಬುವುದು ಅವನ ಭಕ್ತರ ಅಚಲ ನಂಬಿಕೆಯಾಗಿದೆ. ಈ ವರ್ಷ ಮಹಾಶಿವರಾತ್ರಿಯನ್ನು ಯಾವಾಗ ಆಚರಿಸಲಾಗುವುದು, ಪೂಜಾ ಸಮಯ, ವ್ರತ ಕಥಾ ಮುಂತಾದ ಮಾಹಿತಿ ಇಲ್ಲಿದೆ:

- Advertisement -

ಮಹಾಶಿವರಾತ್ರಿ ದಿನಾಂಕ ಮತ್ತು ಸಮಯ

🎊 ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಮಾಸದ ಕೃಷ್ಣ ಚತುರ್ದಶಿ ದಿನವನ್ನು ಮಾಸ ಶಿವರಾತ್ರಿ ಎಂದು ಆಚರಿಸಲಾಗುವುದು. ವರ್ಷದಲ್ಲಿ ಒಟ್ಟು 12 ಶಿವರಾತ್ರಿಗಳನ್ನು ಆಚರಿಸಲಾಗುವುದು. ಅವುಗಳಲ್ಲಿ ಮಹಾಶಿವರಾತ್ರಿ ತುಂಬಾ ದೊಡ್ಡ ಆಚರಣೆಯಾಗಿದೆ. ಸಾಮಾನ್ಯವಾಗಿ ಶಿವರಾತ್ರಿ ಫೆಬ್ರವರಿ – ಮಾರ್ಚ್ ತಿಂಗಳಿನಲ್ಲಿ ಬರುವುದು. ಈ ವರ್ಷ ಮಾರ್ಚ್ನಲ್ಲಿ ಬಂದಿದೆ. ಈ ದಿನ ಶಿವನನ್ನು ಶುಭ ಮುಹೂರ್ತದಲ್ಲಿ ಪೂಜಿಸುವುದರಿಂದ ಹೆಚ್ಚಿನ ಫಲ ದೊರೆಯುವುದು.

ಮಹಾಶಿವರಾತ್ರಿ ದಿನಾಂಕ : ಮಾರ್ಚ್ 01, 2022, ಮಂಗಳವಾರ

- Advertisement -

ಚತುರ್ದಶಿ ದಿನಾಂಕ ಪ್ರಾರಂಭವಾಗುತ್ತದೆ : ಮಾರ್ಚ್ 01, ಮಂಗಳವಾರ, ಬೆಳಗ್ಗೆ 03:16 ರಿಂದ

ಚತುರ್ದಶಿ ದಿನಾಂಕ ಕೊನೆಗೊಳ್ಳುತ್ತದೆ : ಮಾರ್ಚ್ 02, ಬುಧವಾರ, 1:00 ರವರೆಗೆ

🌼🌼🌼🌼🌼🌼

ಮಹಾಶಿವರಾತ್ರಿ ಪೂಜಾ ಸಮಯ

🍀 ರಾತ್ರಿ ಮೊದಲ ಪ್ರಹರ ಪೂಜಾ ಸಮಯ : ಸಂಜೆ 06:21 ರಿಂದ 09:27 ರವರೆಗೆ.

🍀 ರಾತ್ರಿ ಎರಡನೇ ಪ್ರಹರ ಪೂಜಾ ಸಮಯ: ರಾತ್ರಿ 09:27 ರಿಂದ 12:33 ರವರೆಗೆ.

🍀 ರಾತ್ರಿ ಮೂರನೇ ಪ್ರಹರ ಪೂಜಾ ಸಮಯ : ರಾತ್ರಿ 12:33 ರಿಂದ ಬೆಳಗ್ಗೆ 03:39 ರವರೆಗೆ.

🍀 ರಾತ್ರಿ ನಾಲ್ಕನೇ ಪ್ರಹರ ಪೂಜಾ ಸಮಯ : ಮುಂಜಾನೆ 03:39 ರಿಂದ 06:45 ರವರೆಗೆ.

🍀 ಮಹಾಶಿವರಾತ್ರಿ ಪಾರಣ ಸಮಯ: ಮಾರ್ಚ್ 2 ಬುಧವಾರ ಬೆಳಗ್ಗೆ 06:45.

ಮಹಾಶಿವರಾತ್ರಿ ಮಹತ್ವ

🎊 ಮಹಾಶಿವರಾತ್ರಿಯಂದು ಮಹಾದೇವ ಶಿವನು ದೇವಿ ಪಾರ್ವತಿಯನ್ನು ವಿವಾಹವಾದರು ಎಂದು ಪೌರಾಣಿಕ ಕತೆಯಲ್ಲಿ ಹೇಳಲಾಗಿದೆ. ಈ ದಿನ ಜಾಗರಣೆ ಇದ್ದು ಶಿವ – ಪಾರ್ವತಿಯನ್ನು ಪೂಜಿಸುವುದರಿಂದ ಬದುಕಿನ ಎಲ್ಲಾ ಕಷ್ಟಗಳು ದೂರಾಗುವುದು. ಈ ದಿನದಂದು ಪತಿ – ಪತ್ನಿ ಇಬ್ಬರೂ ಜಾಗರಣೆ ಇದ್ದು ಶಿವನನ್ನು ಪೂಜಿಸಬೇಕು, ಅವನ ಮಂತ್ರಗಳನ್ನು ಹೇಳಬೇಕು ಆಗ ಶಿವನು ನಮ್ಮ ಬೇಡಿಕೆಗಳನ್ನು ಪೂರೈಸುತ್ತಾನೆ. ಜೀವನದಲ್ಲಿ ನೆಮ್ಮದಿ ಇರುವುದು, ಸಂತಾನ ಭಾಗ್ಯ ಉಂಟಾಗುವುದು.

ಮಹಾಶಿವರಾತ್ರಿ ಪೂಜಾವಿಧಿಗಳೇನು?

🌹 ಈ ದಿನ ಭಕ್ತರು ಮುಂಜಾನೆ ಬೇಗನೇ ಎದ್ದು ಸ್ನಾನ ಮಾಡಬೇಕು.

🌹 ನಂತರ ಮಡಿ ಬಟ್ಟೆ ಧರಿಸಬೇಕು.

🌹 ನಂತರ ಪಕ್ಕದ ಶಿವನ ದೇವಾಲಯಕ್ಕೆ ಹೋಗಬೇಕು.

🌹 ಅದಾದ ಬಳಿಕ ಸಂಕಲ್ಪ ಕೈಗೊಳ್ಳಬೇಕು (ನೀವು ಏನು ಮನಸ್ಸಿನಲ್ಲಿ ಬೇಡಿಕೊಳ್ಳುತ್ತೀರೋ ಅದುವೇ ಸಂಕಲ್ಪ).

🌹 ಶಿವನಿಗೆ ಬಿಲ್ವೆ ಪತ್ರೆ ಹಾಗೂ ಹೂಗಳನ್ನು ಅರ್ಪಿಸಿ.

🌹 ನಂತರ ಶಿವನಿಗೆ ಆರತಿ ಮಾಡಿ.

🌹 ಪಾರಣ ಮುಹೂರ್ತದಲ್ಲಿ ಪಾರಣ ಮಾಡಿ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -
- Advertisement -

Latest News

ಸಿಂದಗಿ ನೀಲಗಂಗಾ ದೇವಿ ಜಾತ್ರೆ ಸಂಪನ್ನ

ಸಿಂದಗಿ - ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಜರುಗಿತು. ಸ್ಥಳೀಯ ಸಾರಂಗಮಠದ ಪರಮಪೂಜ್ಯಶ್ರೀ ಡಾ. ಪ್ರಭುಸಾರಂಗದೇವ...
- Advertisement -

More Articles Like This

- Advertisement -
close
error: Content is protected !!
Join WhatsApp Group