ಹಿರಿಯ ಚಿಂತಕ ಡಾ ಎನ್ಕೆ ರಾಮಶೇಷನ್ ಅಭಿಮತ
ಕರ್ನಾಟಕ ಸರ್ವೋದಯ ಮಂಡಲ ಬೆಂಗಳೂರು ನಗರ ಜಿಲ್ಲಾ ಘಟಕ ಹಾಗೂ ಮಾಧವ ನಗರದ ವೈಇಎಸ್ ಬಿಸಿನೆಸ್ ಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ನಡೆದ ಯುವಕರಿಂದ ಯುವಕರಿಗಾಗಿ ಗಾಂಧಿ ವಿಚಾರಧಾರೆಗಳ ಚಿಂತನ ಮಂಥನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಹಿರಿಯ ಚಿಂತಕ ಎನ್ಕೆ ರಾಮಶೇಷನ್ ಸರ್ವೋದಯ ಫಿಲಾಸಫಿಯ ಸರ್ವೋಚ್ಚ ನೇತಾರ ಮಹಾತ್ಮ.. ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಲೇಜಿನ ವಿದ್ಯಾರ್ಥಿಗಳಾದ ಕು ಸೌಮ್ಯ ,ಭುವನ, ನಿವೇದ ಮತ್ತು ನಿತಿನ್ ರವರು ವಿಚಾರಧಾರೆಯ ಪ್ರಸ್ತುತಪಡಿಸಿದರು.
ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಎಚ್ಎಸ್ ಸುರೇಶ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗೌ ಕಾರ್ಯದರ್ಶಿ ಯ ಚಿ ದೊಡ್ಡಯ್ಯ ಪ್ರಾಸ್ತಾವಿಕ ನುಡಿಗಳನಾಡಿದರು.
ಕೋಶಾಧ್ಯಕ್ಷ ವಿರೂಪಾಕ್ಷ ಹುಡೇದ್ ,ಬೆಂಗಳೂರು ನಗರ ಜಿಲ್ಲೆಯ ಘಟಕದ ಗೌರವಾಧ್ಯಕ್ಷ ಸುರೇಶ್ ಕಲಘಟಗಿ, ಅಧ್ಯಕ್ಷ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಕಾರ್ಯದರ್ಶಿ ಸುಮಾ ಚಂದ್ರಶೇಖರ,
ಸದಸ್ಯರಾದ ಗಿರಿಜಾ ಹೆಗ್ಗಡೆ ,ಎಚ್ ಎಲ್ ಕೃಷ್ಣಮೂರ್ತಿ ಹಾಗೂ ಕಾಲೇಜಿನ ಪ್ರಾಂಶುಪಾಲ ರಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.