Homeಸುದ್ದಿಗಳುಸರ್ವಧರ್ಮ ಮಹಿಳಾ ಪತ್ತಿನ ಸಹಕಾರಿ ಸಂಘಕ್ಕೆ ೨.೨೧ ಲಕ್ಷ ರೂ ನಿವ್ವಳ ಲಾಭ

ಸರ್ವಧರ್ಮ ಮಹಿಳಾ ಪತ್ತಿನ ಸಹಕಾರಿ ಸಂಘಕ್ಕೆ ೨.೨೧ ಲಕ್ಷ ರೂ ನಿವ್ವಳ ಲಾಭ

spot_img

ಹುನಗುಂದ: ಇಲ್ಲಿನ ಸರ್ವಧರ್ಮ ಮಹಿಳಾ ಪತ್ತಿನ ಸಹಕಾರಿ ಸಂಘವು ಶೇರು ಸದಸ್ಯರ ಮತ್ತು ಗ್ರಾಹಕರ ಸಹಕಾರದಿಂದ ಸನ್ ೨೦೨೪-೨೫ ನೇ ಸಾಲಿನಲ್ಲಿ ೨.೨೧ ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಸರ್ವಧರ್ಮ ಮಹಿಳಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ಮಂಗಳಾ ಶಿ ತಾರಿವಾಳ ಹೇಳಿದರು.

ಸಂಘದ ಕಾರ್ಯಾಲಯದಲ್ಲಿ ನಡೆದ ೪ ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಪ್ರಸಕ್ತ ಸಾಲಿನಲ್ಲಿ ೨೫೧ ಸದಸ್ಯರನ್ನು ಹೊಂದಿದ್ದು. ೨.೬೬ ಲಕ್ಷ ಶೇರು ಬಂಡವಾಳವನ್ನು ಹೊಂದಿದೆ, ೪೦ ಸಾವಿರ ನಿಧಿಗಳನ್ನು ಹೊಂದಿ,೧.೪೯ ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದ್ದು, ೧.೪೨ ಕೋಟಿ ಠೇವು ಸಂಗ್ರಹವಾಗಿದೆ, ೧.೧೦ ಕೋಟಿ ಸಾಲವನ್ನು ವಿತರಿಸಲಾಗಿದೆ, ಸಂಘವು ಸಂಪೂರ್ಣ ಗಣಿಕೃತಗೊಂಡಿವೆ ಎಂದರು.

ಸಂಘದ ನಿರ್ದೇಶಕಿ ಕಸ್ತೂರಿಬಾಯಿ ವಾಯ್ ಕೊಳೂರ ಮಾತನಾಡಿ ಮಾರ್ಚ ೩೧ ಅಂತ್ಯಕ್ಕೆ ೧೧.೭೬ ಲಕ್ಷ ಲಾಭವಾಗಿದ್ದು ಅದರಲ್ಲಿ ಕ್ಯಾಶ್ ಸರ್ಟಿಪಿಕೇಟ್ ಠೇವು ಬಡ್ಡಿ, ಮಕ್ಕಳ ಭವಿಷ್ಯನಿಧಿಗಳ ಬಡ್ಡಿ ಮುಂಗಡ ೩.೯೦ ಲಕ್ಷ ಕೊಡಲಾಗಿ ಉಳಿದದ್ದು ೨.೨೧ ಲಕ್ಷ ನಿವ್ವಳ ಲಾಭವಾಗಿದ್ದು ಪ್ರಸಕ್ತ ವರ್ಷದಲ್ಲಿ ಶೇಕಡಾ ೬% ಡಿವಿಡೆಂಡ ನೀಡಲಾಗುವುದು ಎಂದರು.

ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಸವಿತಾ ರಮೇಶ ತಾರಿವಾಳ ಮಾತನಾಡಿ ಮುಂದಿನ ೨೦೨೬ ಅಂತ್ಯಕ್ಕೆ ಸಂಘವು ಇನ್ನಷ್ಟು ಪ್ರಗತಿಹೊಂದಲು ಸಂಘದ ಗ್ರಾಹಕರು ಸಹಕರಿಸಬೇಕು ಹಾಗೂ ಸಿಬ್ಬಂದಿಗಳು ಶ್ರಮಿಸಬೇಕು ಎಂದು ಹೇಳುತ್ತಾ,ಸಂಘವು ೨೦೧೨ ರಲ್ಲಿ ೩.೬೬ ಲಕ್ಷ ಬಂಡವಾಳದೊಂದಿಗೆ ಪ್ರಾರಂಭವಾಗಿ ಮಾರ್ಚ ೨೦೨೫ ಅಂತ್ಯಕ್ಕೆ ೧.೪೯ ಕೋಟಿ ದುಡಿಯುವ ಬಂಡವಾಳದೊಂದಿಗೆ ಪ್ರಗತಿ ಹೊಂದಿದೆ ಇದಕ್ಕೆ ನಮ್ಮ ಸಂಘದ ಗ್ರಾಹಕರು ಹಾಗೂ ಸಂಘದ ಆಡಳಿತ ಮಂಡಳಿ, ಸಂಘದ ಸಿಬ್ಬಂದಿಗಳ ಶ್ರಮವೇ ಕಾರಣ ಎಂದು ಹೇಳಿದರು.

ಸಂಘದ ಸಿಬ್ಬಂದಿ ಹುಲಿಗೆಮ್ಮ ಆರ್ ಗೌಂಡಿ ಮಾತನಾಡಿ ಪ್ರಸಕ್ತ ವರ್ಷದಲ್ಲಿ ೫.೧೩ ಕೋಟಿ ವಹಿವಾಟು ನಡೆಸಿದ್ದು,ಸಂಘವು ಸಂಪೂರ್ಣ ಭದ್ರತೆಯಲ್ಲಿದ್ದು, ಸಂಘದ ಹೆಸರಿನಲ್ಲಿ ೧೬.೮೦ ಬ್ಯಾಂಕಿನ ಹಲವಾರು ಬ್ಯಾಂಕುಗಳಲ್ಲಿ ಶಿಲ್ಕು ಇದ್ದು, ೧೮ ಲಕ್ಷ ಠೇವಣಿ ಇಟ್ಟಿದ್ದು, ಸಂಘದ ಭದ್ರತೆಗಾಗಿ ಇನ್ಸೂರನ್ಸ್ ಮಾಡಲಾಗಿದೆ ಎಂದು ಹೇಳಿದರು.

ಸಂಘದ ಸಲಹೆಗಾರಾದ ರಮೇಶ ಕೆ ತಾರಿವಾಳ ಮಾತನಾಡಿ ಮುಂದಿನ ೨೦೨೬ ಅಂತ್ಯಕ್ಕೆ ಸಂಘವು ಇನ್ನಷ್ಟು ಪ್ರಗತಿಹೊಂದಲು ಸಂಘದ ಗ್ರಾಹಕರು ಸಹಕರಿಸಬೇಕು ಹಾಗೂ ಸಿಬ್ಬಂದಿಗಳು ಶ್ರಮಿಸಬೇಕು ಎಂದು ಹೇಳುತ್ತಾ, ಸಾಲ ವಿತರಣೆ ಹಾಗೂ ವಸೂಲಾತಿ ಕ್ರಮಗಳ ಬಗ್ಗೆ ಸಲಹೆ ಸೂಚನೆಗಳನ್ನು ಸಂಘದ ಸಿಬ್ಬಂದಿಗಳಿಗೆ ಸಲಹೆಗಳನ್ನು ನೀಡಿದರು. ವೇದಿಕೆಯಲ್ಲಿ ಆಡಳಿತ ಅಧ್ಯಕ್ಷೆ ಮಂಗಳಾ ಶಿವಕುಮಾರ ತಾರಿವಾಳ ನಿರ್ದೇಶಕರಾದ ಜಯಶ್ರೀ ಮಲ್ಲಿಕಾರ್ಜುನ ಹುನಗುಂದ, ಲೀಲಾ ಸಿದ್ರಾಮಪ್ಪ ವೀರಾಪೂರ, ಶರಣಮ್ಮ ವೀರಭ್ರಯ್ಯ ಗಣಾಚಾರ, ಶರಣಮ್ಮ ಚೇತನಮುಕ್ಕಣ್ನವರ, ಮಧು ಶರಣಪ್ಪ ಚಳಗೇರಿ, ಕಾವ್ಯ ಈರಣ್ಣ ಮ್ಯಾಗೇರಿ, ಮಂಜುಳಾ ಸುರೇಶ ಹಳಪೇಟಿ, ರತ್ನಾ ಮಹಾಂತಗೌಡ ಗೌಡರ. ಕಲಾವತಿ ಬಸವರಾಜ ಮುಕ್ಕಣ್ನವರ, ರೇಣುಕಾ ಬಸವರಾಜ ಕಮ್ಮಾರ, ಶಾರದಾ ಸಿದ್ರಾಮೇಶ್ವರ ಮೂಲಿಮನಿ, ಕಸ್ತೂರಿಬಾಯಿ ಯಲಗೂರದಪ್ಪ ಕೊಳೂರ ಸೇರಿದಂತೆ ಅನೇಕರು ಇದ್ದರು.ಸಂಘದ ಸಿಬ್ಬಂದಿಗಳಾದ ಹುಲಿಗೆಮ್ಮ ಆರ್ ಗೌಂಡಿ ಸ್ವಾಗತಿಸಿ, ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group