ಮುಧೋಳ – ಸದ್ಗುರುವಿನ ಮಹಿಮೆಗೆ ಎಂದು ಉಪಮೆ ಕೊಡಲಿಕ್ಕೆ ಸಾಧ್ಯವಿಲ್ಲ. ಯಾವಾತನು ಸದ್ಗುರುವಿನ ನಾಮವನ್ನು ಅಖಂಡವಾಗಿ ಜಪಿಸುವನೋ ಅವನನ್ನು ಬ್ರಹ್ಮನೇ ಪೂಜಿಸುವನು.ಸದ್ಗುರುವಿನ ಮಹಿಮೆಯನ್ನು ಸಹಸ್ರಮುಖನಾದ ಮಹಾ ಶೇಷನಿಂದಲೂ ವರ್ಣಿಸಲಾಗದು ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಸುಕ್ಷೇತ್ರ ಚಿಚಖಂಡಿ .ಕೆ .ಡಿ. ಗ್ರಾಮದಲ್ಲಿ ಗೌರಿ ಗಣೇಶ ಚತುರ್ಥಿ ಅಂಗವಾಗಿ ಪ್ರಾರಂಭಗೊಂಡ ಏಳು ದಿನದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನೀಡುತ್ತಾ ಈಶ್ವರನಿಗೆ ಅಧಿಷ್ಠಾನವಾಗಿರುವ ನಿರ್ಗುಣ ನಿರ್ವಿಕಾರವಾದ ಬ್ರಹ್ಮತತ್ವವನ್ನು ಗುರು ಕೃಪೆಯಿಂದ ಪ್ರಾಪ್ತಿ ಮಾಡಿಕೊಂಡು ದ್ವೈತ ಭಾವವನ್ನು ನಿರಸನ ಮಾಡಿಕೊಂಡು ಸುಖವನ್ನು ಹೊಂದಬೇಕೆಂದರು.
ಇದೆ ಸಂದರ್ಭದಲ್ಲಿ ಭಕ್ತಸ್ತೋಮಕ್ಕೆ ಪ್ರಸಾದ ವ್ಯವಸ್ಥೆ ಮಾಡಿದ ಮಲ್ಲು ವಗ್ಗೇನವರ ಹಾಗೂ ವೆಂಕಟೇಶ ರುದ್ರಗೌಡರ ಅವರನ್ನು ಸತ್ಕರಿಸಲಾಯಿತು.ಕೃಷ್ಣ ಬಡಿಗೇರ, ಗೋವಿಂದ ಪೂಜಾರಿ, ಗಿರೀಶ ಸೈಯಪ್ಪಗೋಳ, ಚೇತನ ಘಂಟಿ, ಮಲ್ಲು ಚಂದರಗಿ, ಬಸಪ್ಪ ತೇಲಿ ಮುಂತಾದವರು ಉಪಸ್ಥಿತರಿದ್ದರು.ಸ್ಥಳೀಯ ಕಲಾವಿದರಿಂದ ಭಜನಾ ಸೇವೆ ಜರುಗಿತು