ಬೆಳಗಾವಿ : ಪ್ರತಿಷ್ಠಿತ ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ ನಿ ಬೆಳಗಾವಿ ರವಿವಾರದಂದು ನಡೆದ ಚುನಾವಣೆಯಲ್ಲಿ ರಾಯಬಾಗ ತಾಲುಕು ಮತಕ್ಷೇತ್ರದಿಂದ ಸ್ಪರ್ಧೆ ಮಾಡಿ ಆಯ್ಕೆಯಾದ ಅಪ್ಪಾಸಾಬ ಕುಲಿಗುಡೆ ಅವರು ಲೋಕೋಪಯೋಗಿ ಇಲಾಖೆ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಅರಬಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಸಹಕಾರದಿಂದ ನಿರ್ದೇಶಕರಾಗಿ ವಿಜಯಶಾಲಿಯಾಗಿದ್ದಕ್ಕೆ ಸಮಾಜಕ್ಕೆ ಕೀರ್ತಿ ತಂದಿದ್ದಾರೆ ಎಂದು ಅಪ್ಪಾಸಾಬ ಕೂಲಿಗುಡೆ ಅವರಿಗೆ ಮಾಳಿ ಮಾಲಗಾರ ಸಮಾಜದ ಮುಖಂಡರು ಅಭಿನಂದನೆ ಸಲ್ಲಿಸಿದರು
ಈ ಸಂದರ್ಭದಲ್ಲಿ ಮಾಳಿ ಮಾಲಗಾರ ಸಮಾಜದ ರಾಜ್ಯಾಧ್ಯಕ್ಷ ಕಾಡು ಮಾಳಿ, ಮುಖಂಡರಾದ ಸಿ ಬಿ ಕೂಲಿಗೋಡ, ಸದಾಶಿವ ಬುಟಾಳಿ, ನೀಲಪ್ಪ ಕಿವಟಿ, ಸಂಜು ಅಥಣಿ, ಮುರಿಗೆಪ್ಪ ಮಾಲಗಾರ, ಮಾದೇವ ತೆರದಾಳ, ಸದಾಶಿವ ಹೊಸಮನಿ, ಕೃಷ್ಣಾ ಮಾಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.