ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಿಂದ ಆಂದ್ರಪ್ರದೇಶದ ಶ್ರೀ ಶೈಲಂನಲ್ಲಿ ನಡೆಯುಲಿರುವ ಜಾತ್ರೆ ಮಹೋತ್ಸಕ್ಕೆ ಪಾದ ಯಾತ್ರೆ ತೆರಳುತ್ತಿರುವ ಭಕ್ತರ ಮನೆ ಮನೆಗೆ ಪೂರ್ವ ಭಾವಿಯಾಗಿ ರವಿವಾರ ಗ್ರಾಮದ ಮಡಿವಾಳ ಸಮಾಜದ ಮುಖಂಡ ವೈದ್ಯ ರಾಮಲಿಂಗಪ್ಪ ಭೀ ಅಗಸರ ಅವರ ತೋಟದ ಮನೆಗೆ ಮಲ್ಲಯ್ಯನ ಕಂಭಿ ಹೊತ್ತ ಅರ್ಚಕ ಶಾಂತಯ್ಯ ಮಠಪತಿ,ಮಲ್ಲಯ್ಯ ಮಠಪತಿ ಅವರು ಆಗಮಿಸಿದರು.
ಭಕ್ತರು ನೀರು ಸಿಡಿಕಾಯಿ ಒಡೆದು ತಮ್ಮ ಮನೆಯಲ್ಲಿ ಹೊಸ ವಸ್ತ್ರವನ್ನು ನೆಲದ ಮೇಲೆ ಹಾಸಿ ಮಲ್ಲಯ್ಯನ ಕಂಭಿಯನ್ನು ಬರಮಾಡಿ ಕೊಂಡರು. ನಂತರ ಮಲ್ಲಯ್ಯನ ಕಂಭಿಗೆ ವಿಶೇಷ ಪೂಜಾ ಕಾರ್ಯನಿರ್ವಹಿಸಿ ಮಲ್ಲಯ್ಯನ ಜಯ ಘೋಷವಾಕ್ಯದೊಂದಿಗೆ ಮಂಗಳಾರುತಿ ಮಾಡಿದರು.
ಮನೆಯ ಸುಮಂಗಲಿಯರು ಆರತಿ ಮಾಡಿದರು ನೈವೇದ್ಯ ಗೆ ಸಿಹಿ ಬೆಲ್ಲ ಎಲ್ಲರಿಗೂ ಮಹಾ ಪ್ರಸಾದ ವಿತರಿಸಿದರು. ತದನಂತರ ಶ್ರೀಗಳಿಗೆ ಹಾಗೂ ಕಲಾವಿದರಿಗೆ ಮನೆಯ ಒಡೆಯರು ಕಾಣಿಕೆ ನೀಡಿದರು.
ತದನಂತರ ಶ್ರೀಶೈಲ ಮಲ್ಲಯ್ಯನ ಕಂಭಿ ಅರ್ಚಕ ಶಾಂತಯ್ಯ ಮಠಪತಿ ಮಾತನಾಡಿ ಶ್ರೀಶೈಲ ಪಾದ ಯಾತ್ರೆಯಲ್ಲಿ ಭಾಗವಹಿಸುವ ಭಕ್ತರಿಗೆ ಧರ್ಮ ಮಾರ್ಗ ಸನ್ಮಾರ್ಗದತ್ತ ತೋರುತ್ತದೆ ನಮ್ಮ ಧರ್ಮ ಸಂಸ್ಕೃತಿಗಳು ಭಕ್ತಿಯ ಸನ್ಮಾರ್ಗದಿಂದ ಜೀವನದಲ್ಲಿ ಅಳವಡಿಸಿ ಕೊಂಡು ಹೋಗಲು ಉತ್ತಮ ಸಂದೇಶವಾಗಿದೆ.ಚಿಕ್ಕಸಿಂದಗಿ ಗ್ರಾಮದಿಂದ 30 ಜನರು ಶ್ರೀಶೈಲಂ ಪಾದ ಯಾತ್ರಿಗೆ ಕಂಭಿಯೊಂದಿಗೆ ತಯಾರ ಆಗಿದ್ದಾರೆ ನಾವು ಎಲ್ಲರು ಹೋಳಿಯ ಹುಣ್ಣಿಮೆ ಮರುದಿನ ಮುಂಜಾನೆ ಪಾದ ಯಾತ್ರೆ ಆರಂಭಿಸುತ್ತೇವೆ ಎಂದರು.
ಶ್ರೀಶೈಲಂ ಮುಟ್ಟುವವರೆಗೆ ಭಕ್ತರು ಎಲ್ಲಿ ನೋಡಿದರು ಪಾದ ಯಾತ್ರಿಗಳಿಗೆ ಮಹಾ ಪ್ರಸಾದ ತಂಪು ನೀರು,ಹಣ್ಣು ಹಂಪಲ,ಆರೋಗ್ಯ ಸೇವೆ, ವಸ್ತಿ ಸೇವೆ ಮಾಡುತ್ತಾರೆ ಎಂದು ವಿವರಿಸಿದರು. ಮಾರ್ಗ ಮಧ್ಯೆ ಮಲ್ಲಯ್ಯನ ಜಯ ಘೋಷ ವಾಕ್ಯದೊಂದಿಗೆ ಹಗಲು ರಾತ್ರಿ ಬಿಸಿಲು ಎನ್ನದೆ ತಂಡೋಪತಂಡವಾಗಿ ಹೋಗುತ್ತಾರೆ ಆದ್ದರಿಂದ ಗ್ರಾಮದ ಭಕ್ತರು ಪಾದ ಯಾತ್ರೆಗೆ ಹಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ವೈದ್ಯ ರಾಮಲಿಂಗಪ್ಪ ಅಗಸರ.ವೈದ್ಯ ಸಂಗಮೇಶ .ಶಿಕ್ಷಕ ಸಾಹಿತಿ ಬಸವರಾಜ ಅಗಸರ.ಮಲ್ಲು ಅರಳಗುಂಡಗಿ.ಪ್ರೀತಿ ಮಹೇಶ ಸಗರ .ವಿನಯಕುಮಾರ ಸಗರ. ಗುರುಬಾಯಿ ಅಗಸರ. ನೀಲಮ್ಮ ಸಗರ.ಶೀಲಾ ಬಸವರಾಜ ಅಗಸರ ಹಾಗೂ ಕೋಕಟನೂರಿನ ಕಲಾ ಬಳಗದವರು ಭಾಗವಹಿಸಿದ್ದರು.