ಮೂಡಲಗಿ : ಅನುದಾನಿತ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘ ನಿಯಮಿತ ಅಥಣಿ ಇದರ ಮುಂದಿನ ಅವಧಿಗೆ ಅಧ್ಯಕ್ಷರಾಗಿ ಮೂಡಲಗಿ ಪಟ್ಟಣದವರಾದ ಮಂಜುನಾಥ.ವೆಂ ಭಸ್ಮೆ ಹಾಗೂ ಉಪಾಧ್ಯಕ್ಷರಾಗಿ ಪ್ರವೀಣ.ಇ ಪರ್ನಾಕರ್ ರವರು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಆರ್.ಎನ್ ನೂಲಿ ಸಹಕಾರಿ ಅಭಿವೃದ್ಧಿ ಅಧಿಕಾರಿಗಳು ಅಥಣಿ ಇವರು ಘೋಷಿಸಿದರು
ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಎಸ್.ಎಂ ಪಾಲಬಾವಿ, ಉಪಾಧ್ಯಕ್ಷರಾಗಿದ್ದ ಎಂ.ಜಿ ದೇವಮಾನೆ ಹಾಗೂ ಎಲ್ಲ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.