spot_img
spot_img

ಮಾರ್ಚ್ 19.2025 ನಿಜವಾದ ಮಹಿಳಾ ದಿನಾಚರಣೆ

Must Read

spot_img
- Advertisement -

ಮಹಿಳಾ ಶಕ್ತಿ

ದಿನಾಂಕ 19 ಬೆಳಗಿನ ಜಾವ 3 .27 ಇತಿಹಾಸ ಪುಟ ಸೇರಿದೆ.
ಆ ಕ್ಷಣ ಇಡೀ ಜಗತ್ತು ಎಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ನಿದ್ರೆ ಬಿಟ್ಟು ಸುನಿತಾ ವಿಲಿಯಮ್ಸ್ ಅವರ ಬರುವಿಕೆಯನ್ನು ಕಾಯುತ್ತಿತ್ತು.

ಹೆಣ್ಣು ಏನು ಬೇಕಾದರೂ ಸಾಧಿಸುತ್ತಾಳೆ ಎಂಬುದಕ್ಕೆ ಸುನಿತಾ ವಿಲಿಯಮ್ಸ್ ಜೀವಂತ ಉದಾಹರಣೆ.
ಅನೇಕ ದುರ್ಘಟನೆಗಳು, ತಿಂಗಳುಗಟ್ಟಲೆ ನಡೆಯುತ್ತಿರುವ ಯುದ್ಧಗಳು, ಪ್ರವಾಹಗಳು ,ಪ್ರಕೃತಿ ವಿಕೋಪ, ಭೂಕಂಪ ಜ್ವಾಲಾಮುಖಿಗಳು, ಅಂತಾರಾಷ್ಟ್ರೀಯ ಕ್ರೀಡೆಗಳು, ಚಲನಚಿತ್ರೋತ್ಸವಗಳು ಏನೆಲ್ಲಾ ಘಟನೆಗಳು ನಡೆಯುತ್ತಿದ್ದರೂ ಕೂಡ, ಭೂಮಿಯ ಮೇಲೆ ಇರುವ ಜೀವಿಗಳ ಜೀವನ ತನ್ನ ಪಾಡಿಗೆ ತಾನು
ನಿರಂತರವಾಗಿ ಯಥಾಸ್ಥಿತಿಯಲ್ಲಿ ಸಾಗುತ್ತಿರುವಾಗ, ಮಾರ್ಚ್ 19 ರಂದು ಇಡೀ ಜೀವ ಸಂಕುಲವೇ ತನ್ನ ಎದೆ ಬಡಿತವನ್ನು ಕೈಯಲ್ಲಿ ಹಿಡಿದುಕೊಂಡು ಟಿವಿ ಹಾಗೂ ಮೊಬೈಲ್ಗಳತ್ತ ಕಣ್ಣೂ ರೆಪ್ಪೆ ಬಡಿಯದೆ , ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಹೊತ್ತಿ ತರುತ್ತಿದ್ದ ಸ್ಪೇಸ್ ಎಕ್ಸ್ ನ ಡ್ರ್ಯಾಗನ್ ಮ್ಯಾಡ್ಯೂಲ್ ಗಗನ ನೌಕೆಯ ದಾರಿ ಕಾಯುತ್ತಿದ್ದರು. ನಮ್ಮ ದೇಶದ ಪ್ರಧಾನ ಮಂತ್ರಿ ದೇಶದ ಹೆಮ್ಮೆಯ ವ್ಯಕ್ತಿಗಾಗಿ ದೀರ್ಘ ಪುಟದ ಪತ್ರ ಕೂಡ ಬರೆದು ಅವರ ಬರುವಿಕೆಯ ಕ್ಷಣಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

- Advertisement -

ಇಡೀ ಮಾನವ ಸಂಕುಲ ಇವರ ಸುರಕ್ಷತೆಗಾಗಿ ಪೂಜೆ ಪ್ರಾರ್ಥನೆ ಮಾಡಿತು. ಇವರು ಯಾವ ದೇಶದವರು ಇವರು ಯಾವ ಜಾತಿಯವರು ಎನ್ನದೆ, ಇವರ ಸಾಧನೆಗೆ ನಮಸ್ಕರಿಸಿ ಇಡೀ ಮಾನವ ಕುಲ ಒಂದೇ ಎಂಬ ಸಂದೇಶ ದೊರೆಯಿತು.
ಕುವೆಂಪು ಅವರ” ಓ ನನ್ನ ಚೇತನ ಆಗು ನೀ ಅನಿಕೇತನ ವಿಶ್ವ ಮಾನವನಾಗು” ಎಂಬ ಸಂದೇಶ ನಿಜವಾಯಿತು ನೋಡಿ.
ನಮ್ಮ ನಿತ್ಯ ಜೀವನದಲ್ಲಿ ಒಂದು ದಿನ ನಮ್ಮ ದೈನಂದಿನ ಬೇಡಿಕೆಗಳಲ್ಲಿ ನೀರು, ವಿದ್ಯುತ್,ಆಹಾರ ಹೀಗೆ ಯಾವುದೇ ಒಂದರ ಕೊರತೆ ಆದರೂ ಕೂಡ ನಾವು ಸಹಿಸಿಕೊಳ್ಳುವುದಿಲ್ಲ. 8 ದಿನ ಮಾತ್ರ ಅಂತರಿಕ್ಷಕ್ಕೆ ಹೋಗಿದ್ದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ 9 ತಿಂಗಳು ಹೇಗೆ ಬದುಕಿರಬಹುದು? ಇದು ಅಚ್ಚರಿ ಹಾಗೂ ಪವಾಡ ಅಂತಾನೇ ಹೇಳಬಹುದು.

ಇವರು 2024 ರ ಜೂನ್ 5 ರಂದು ಬೋಯಿಂಗ್ ನ ಸ್ಟಾರ್ ಲೈನರ್ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದರು. ಸ್ಟಾರ್ ಲೈನರ್ ಕ್ಯಾಪ್ಸೂಲ್ ನ ಪ್ರೋಪಾಲ್ಯನ್ ನಲ್ಲಿ ತೊಂದರೆ ಕಂಡು ಬಂದು ಇವರು ಈ ನೌಕೆಯಲ್ಲಿ ಭೂಮಿಗೆ ಬರುವುದು ಅಪಾಯಕಾರಿ ಎಂದು ತಿಳಿದು ಅಲ್ಲೆ ಉಳಿದು ಬಿಟ್ಟರು .ಆದರೆ ಸ್ಟಾರ್ ಲೈನರ್ ನೌಕೆ ಸೆಪ್ಟೆಂಬರ್ 2024 ರಲ್ಲಿ ಭೂಮಿಗೆ ವಾಪಸ್ ಆಗಿತ್ತು.

ಇತ್ತೀಚೆಗೆ ಗೊತ್ತಾದ ಒಂದು ಬೇಸರದ ಸಂಗತಿ ಎಂದರೆ, ಸ್ಪೇಸ ಎಕ್ಸ ಸಿ ಇ ಒ ಎಲಾನ್ ಮಸ್ಕ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇಬ್ಬರು ಗಗನ ಯಾತ್ರಿಗಳು ಸಿಲುಕಿರುವ ವಿಷಯ ಪ್ರಸ್ತಾವನೆ ಮಾಡಿದಾಗ ಮಾಜಿ ಅಧ್ಯಕ್ಷ ಜೋ ಬೈಡನ್ ರಾಜಕೀಯ ಕಾರಣಗಳಿಂದ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದರು ಎಂಬ ವಿಷಯ ತಿಳಿದು ಬಂದಿದೆ.

- Advertisement -

ಇದು ಎಷ್ಟರ ಮಟ್ಟಿಗೆ ನ್ಯಾಯ ಹೇಳಿ?
ಗಗನಯಾನಿಗಳ ತಿಂಗಳ ವೇತನ ಕೂಡ ಕಡಿಮೆ ಇದೆ. ಜೀವ ಭಯಬಿಟ್ಟು ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಹೋಗುವಾಗ ಇವರ ಸುರಕ್ಷತೆ ಕೂಡ ಸರಕಾರದ್ದು ಇರುತ್ತದೆ. ಅವರ ಸಾಧನೆ ಸಾಮಾನ್ಯ ವಿಷಯ ಇಲ್ಲವೆ ಇಲ್ಲ.

ಆದರೆ ಧೈರ್ಯಗುಂದದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ , ಸಮಯ ವ್ಯರ್ಥ ಮಾಡದೇ ಅದರ ಸದುಪಯೋಗ ಮಾಡಿಕೊಂಡರು.ಸತತ 3 ಬಾರಿ ಅಂತರಿಕ್ಷಯಾನದಲ್ಲಿ ಇತಿಹಾಸ ಬರೆದ ಮಹಿಳೆ ಸುನಿತಾವಿಲಿಯಮ್ಸ್ .ಅಂತರಿಕ್ಷದಲ್ಲಿ 19 ಕೋಟಿ ಕಿಲೋಮೀಟರ್ ಪ್ರಯಾಣ ಮಾಡಿದ್ದಾರೆ ಹಾಗೂ 4576 ಬಾರಿ ಭೂಮಿಯನ್ನು ಸುತ್ತಿದ್ದಾರೆ ಎಂಬ ಆಶ್ಚರ್ಯಕರ ವಿಷಯ ಗೊತ್ತಾಯಿತು. ಸದ್ಯಕ್ಕೆ ವೈದ್ಯಕೀಯ ತಪಾಸಣೆಯಲ್ಲಿರುವ ಅವರ ಆರೋಗ್ಯ ಸ್ಥಿತಿ ಬೇಗನೆ ಗುಣಮುಖವಾಗಿ ಇವರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಾಮಾನ್ಯ ಸ್ಥಿತಿಗೆ ಬರಲಿ ಎಂದು ಹಾರೈಸೋಣ.

ಸುನಿತಾ ವಿಲಿಯಮ್ಸ್ ಇವರಿಂದ ಅಂತರಿಕ್ಷಯಾನದ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳುವ ಕಾತುರದಲ್ಲಿ ಜನ ಇದಾರೆ. ಏನೇನು ವಿಸ್ಮಯಗಳು ಇವೆಯೋ? ಅವರು ಹೇಗೆ ಬದುಕಿದರು? ಅವರ ಊಟ ತಿಂಡಿ ಅವರ ಜೀವನ ಶೈಲಿ ? ಅಲ್ಲಿಯ ವಾತಾವರಣ ಅವರು ಮಾಡಿಕೊಂಡ ಧೈರ್ಯ ಎಲ್ಲದರ ಬಗ್ಗೆ ಸಂಪೂರ್ಣವಾಗಿ ನಾವು ತಿಳಿದುಕೊಳ್ಳಬೇಕಾದರೆ ಸುನಿತಾ ವಿಲಿಯಮ್ಸ್ ಬೇಗನೆ ಚೇತರಿಸಿಕೊಳ್ಳಬೇಕು.

8 ದಿನದ ದಿನಗಳ ಮಿಷನ್ ಗಾಗಿ ಹೋಗಿರುವ ಮಹಿಳೆ ಹಿಂತಿರುಗಿ ಭೂಮಿ ಮೇಲೆ ಬಂದಿದ್ದು 9 ತಿಂಗಳ ನಂತರ, ಅಬ್ಬಾ ಆ ಹೆಣ್ಣು ಮಗಳಲ್ಲಿ ಧೈರ್ಯ ಎಷ್ಟಿರಬಹುದು? ಊಹೆಗೆ ನಿಲುಕದಷ್ಟು ಆಶ್ಚರ್ಯ …. ನಾನು ಅವಾಗವಾಗ ತರಗತಿ ಮಕ್ಕಳಲ್ಲಿ ಈ ವಿಷಯದ ಬಗ್ಗೆ ಚರ್ಚೆ ಮಾಡುತ್ತಿದ್ದೆ… ಸುನಿತಾ ವಿಲಿಯಂ ಯಾವ ರೀತಿ ಧೈರ್ಯ ಮಾಡಿಕೊಂಡು ಅಂತರಿಕ್ಷದಲ್ಲಿ ಜೀವನ ಸಾಗಿಸುತ್ತಿರಬಹುದು ಎಂದು?
ಇವರು ಸುರಕ್ಷಿತವಾಗಿ ಬೇಗನೆ ಬರಬೇಕು ಎನ್ನುವ ಕಾತರದಿಂದ ನಾನು ಕೂಡ ಕಾಯುತ್ತಿದ್ದೆ….

ಆದರೆ ಸುನಿತಾ ವಿಲಿಯಮ್ಸ್  ನಿಜವಾಗಲೂ ದೇವರ ಸೃಷ್ಟಿ, ಇವರಲ್ಲಿರುವ ತಾಳ್ಮೆ ಶಕ್ತಿ ಎಷ್ಟಿರಬಹುದು ನೋಡಿ. ಅವರು ಹಿಂದುರುಗಲು ವಿಳಂಬವಾದರೆ ಯಾವುದೆ ಕಾರಣಕ್ಕೂ ಭಯಪಡದೆ ತನಗೆ ಸಿಕ್ಕಂತಹ ಸಮಯವನ್ನು ವ್ಯರ್ಥ ಮಾಡದೆ ಪ್ರತಿಕ್ಷಣ ಅಂತರಿಕ್ಷದಲ್ಲಿ ಸಂಶೋಧನೆ ಮಾಡಿ ಇತಿಹಾಸ ರಚಿಸಿದ್ದಾರೆ.900 ಗಂಟೆಗಳ ಸಂಶೋಧನೆ, ಬಾಹ್ಯಾಕಾಶದಲ್ಲಿ ಸೂಕ್ಷ್ಮಾಣು ಜೀವಿಗಳು ಬದುಕಬಹುದೆ? ಹೀಗೆ 150 ವೈಜ್ಞಾನಿಕ ಸಂಶೋಧನೆಗಳನ್ನು ಮಾಡಿದ್ದಾರೆ.

ಸುನಿತಾ ವಿಲಿಯಮ್ಸ್ 608 ದಿನ ಬಾಹ್ಯಾಕಾಶದಲ್ಲಿ ಕಳೆದದ್ದು ಇತಿಹಾಸ. ಬುಚ್ ವಿಲ್ಮೊರ್ ಅವರು ಕೂಡ 464 ದಿನ ಬಾಹ್ಯಾಕಾಶದಲ್ಲಿ ಕಳೆದದ್ದು ಇತಿಹಾಸ.ಬಾಹ್ಯಾಕಾಶದ ಯಾತ್ರಿಗಳ ಇತಿಹಾಸ ನೋಡಿದಾಗ ಅತಿ ಹೆಚ್ಚು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಉಳಿದ ಗಗನಯಾನಿ

ಪಿಗ್ಗಿ ವೈಟ್ಸನ್ 675 ದಿನಗಳು

ಸುನಿತಾ ವಿಲಿಯಮ್ಸ್ 608 ದಿನಗಳು

ಜೇಫ್ ವಿಲಿಯಮ್ಸ್ 534 ದಿನಗಳು

ಮಾರ್ಕ್ ಒನಡೇ ಹೇ 523 ದಿನಗಳು

ಸ್ಕಾಟ್ ಕಾರ್ಕಲ್ಲಿ 520

ಬುಚ್ ವಿಲ್ಮೋರ್ 464 ದಿನಗಳು

ಮೈಕ್ ಬ್ಯಾರೆಟ್ 47 ದಿನಗಳು

ಶೇನ್ ಕಿಂಬ್ರೋ 388ದಿನಗಳು.

ಗಗನ ತಾರೆಗಳ ವಿಷಯವನ್ನು ನಾವು ಮಕ್ಕಳಿಗೆ ಮನೆಯಲ್ಲಿ ಹಾಗೂ ಶಾಲೆಗಳಲ್ಲಿ ವಿವರಿಸಲೇಬೇಕು ಇದನ್ನು ತೋರಿಸಲೇಬೇಕು.

ಇಂತಹ ವಿಷಯಗಳನ್ನು ಮಕ್ಕಳೊಂದಿಗೆ ಚರ್ಚಿಸಿದಾಗ ಅವರು ಕೂಡ ಸಾಧನೆ ಮಾಡುವ ಗುರಿ ಹೊಂದುತ್ತಾರೆ, ಅವರಲ್ಲಿ ಕೂಡ ಬದಲಾವಣೆ ಬರಬಹುದು, ತಮ್ಮ ಮಕ್ಕಳು ಡಾಕ್ಟರ್ ಇಂಜಿನಿಯರ್ ಆಗುವ ಕನಸು ಕಾಣುತ್ತಿರುವ ಪಾಲಕರಿಗೊಂದು ಕಿವಿ ಮಾತು, ಮಕ್ಕಳೊಂದಿಗೆ ಹೊಸ ಹೊಸ ವಿಷಯಗಳ ಬಗ್ಗೆ ಚರ್ಚಿಸಿ ಹಾಗೂ ಪ್ರಸ್ತುತ ಸಂದರ್ಭದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಮಕ್ಕಳೊಂದಿಗೆ ಚರ್ಚೆಯಾಗಬೇಕು, ಮಕ್ಕಳಿಗೆ ಸಮಯ ಕೊಡಬೇಕು,ಮಕ್ಕಳಲ್ಲಿ ಹೊಸ ಗುರಿ ಸಾಧನೆ ಮಾಡುವ ಕನಸುಗಳು ಹುಟ್ಟಲಿ. ಸುನಿತಾ ವಿಲಿಯಮ್ಸ್ ಸಾಧನೆ ಅಷ್ಟಿಷ್ಟಲ್ಲ. ಸೇನಾ ಪಡೆಗಳಲ್ಲಿ ಸೇರಿ, ಪೈಲೆಟ್ ಆದರೂ, ಮುಂದೆ ಅವರ ಅನುಭವ ಅವರನ್ನು ಉನ್ನತ ಸ್ಥಾನಕ್ಕೆ ಕರೆದೊಯಿತು, ವಿವಿಧ ಬಗೆಯ ಯುದ್ಧ ವಿಮಾನ ಹಾಗೂ ಹೆಲಿಕ್ಯಾಪ್ಟರ್ ಗಳ ಪೈಲೆಟ್ ಆಗಿರುವುದರಿಂದ ಇವರಿಗೆ ನಾಸಾ ದಲ್ಲಿ ಉದ್ಯೋಗ ದೊರೆಯಿತು.

ನಮ್ಮ ಯೋಚನೆಗಳು ಉನ್ನತವಾಗಿರಲಿ, ಹೊಸ ಗುರಿ ಇಟ್ಟುಕೊಳ್ಳೋಣ ,ಹೊಸ ಬದಲಾವಣೆಗಳನ್ನು ಬಯಸೋಣ ಮಕ್ಕಳಿಗೆ ಸ್ಪೂರ್ತಿ ನೀಡುವುದು ಪಾಲಕರ ಕರ್ತವ್ಯ.
ಒಂದು ಜೀವವನ್ನು ಸೃಷ್ಟಿಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ, ಖಂಡಿತವಾಗಿ ಅವಳಲ್ಲಿ ಅನಂತವಾದ ಶಕ್ತಿ ಇದೆ ಎಂದರ್ಥ. ಮಾತೃ ಶಕ್ತಿ, ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸತ್ಕಾರ, ಸನ್ಮಾನ, ಸಾಂತ್ವನ ಗುಣಗಳು ಆಕೆಗೆ ಹುಟ್ಟಿನಿಂದಲೇ ಮೇಳೈಸಿಕೊಂಡು ಬಂದಿರುತ್ತವೆೆ. ನಮ್ಮ ದೇಶದಲ್ಲಿ ಕೌಟುಂಬಿಕ ಪದ್ಧತಿ, ಸಂಸ್ಕೃತಿ, ಸಂಸ್ಕಾರಗಳು, ಕುಟುಂಬ ನಿರ್ವಹಣೆ, ಆರೈಕೆ ಮಾಡುವ ಜವಾಬ್ದಾರಿ ಅನಾದಿ ಕಾಲದಿಂದಲೂ ಬಂದಿರುವುದರಿಂದ ಸಣ್ಣ ವಯಸ್ಸಿನಿಂದಲೇ ಆಕೆಗೆ ಹಲವಾರು ನೀತಿ ನಿಯಮಗಳು, ಕಟ್ಟುಪಾಡುಗಳನ್ನು ಹಾಕಲಾಗುತ್ತದೆ. ಮಹಿಳೆಯನ್ನು ಮುಖ್ಯವಾಗಿ ಎರಡು ವರ್ಗವಾಗಿ ನೋಡ ಬೇಕಾಗುತ್ತದೆ. ಒಂದು ಗ್ರಾಮೀಣ ಮಹಿಳೆ, ಇನ್ನೊಂದು ನಗರ ಪ್ರದೇಶದ ಮಹಿಳೆ. ಪಾತ್ರ ಮತ್ತು ಜವಾಬ್ದಾರಿಗಳ ನಿರ್ವಹಣೆಯಲ್ಲಿ ಇವರಿಬ್ಬರಲ್ಲಿ ವ್ಯತ್ಯಾಸಗಳಿವೆ. ಶಿಕ್ಷಣದ ಮಟ್ಟ ಮತ್ತು ಕುಟುಂಬದ ಪರಿಸರ, ಅದಕ್ಕೆ ಅನುಸರಿಸಿ ಜೀವನವನ್ನು ನೋಡುವ ಮತ್ತು ಅನುಭವಿಸಲು ಇಚ್ಛಿಸುವ ಮನೋಭಾವದಲ್ಲಿ ಇಬ್ಬರಿಗೂ ವ್ಯತ್ಯಾಸವಿದೆ.

ಸುನೀತಾ ವಿಲಿಯಮ್ಸ್ (ಜನನ ಸೆಪ್ಟೆಂಬರ್ 19, 1965) ಅವರು ಅಮೇರಿಕದಲ್ಲಿ ನೌಕಾದಳದಲ್ಲಿ ಅಧಿಕಾರಿ ಹಾಗೂ ನಾಸಾದಲ್ಲಿ ಗಗನಯಾತ್ರಿಯಾಗಿದ್ದಾರೆ.[೧] ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಏರ್ಪಡಿಸಿದ್ದ ಎಕ್ಸ್‌ಪೆಡಿಷನ್ 14ರ ಯಾನದಲ್ಲಿಯ ಗಗನ ಯಾತ್ರಿಗಳಲ್ಲಿ ಒಬ್ಬರನ್ನಾಗಿ ಆಯ್ಕೆ ಮಾಡಲಾಗಿತ್ತು. ನಂತರ ಎಕ್ಪ್‌ಪೆಡಿಷನ್ 15ರಲ್ಲೂ ಕೂಡ ಅವರನ್ನು ಬಳಸಿಕೊಳ್ಳಲಾಯ್ತು. ಅವರು ಅತಿ ಹೆಚ್ಚು ದಿನ (195 ದಿನ) ಬಾಹ್ಯಾಕಾಶ ನೌಕೆಯಲ್ಲಿ ಕಾಲ ಕಳೆದ ಮಹಿಳೆ ಎಂಬ ದಾಖಲೆಯನ್ನು ಹೊಂದಿದ್ದಾರೆ.[೨] ನಾಸಾದ ಸಾರ್ವಜನಿಕ ವಕ್ತಾರೆಯಾಗಿರುವ ಇವರನ್ನು ಕೊಲ್‌ಬರ್ಟ್ ರಿಪೋರ್ಟ್ ಕಿರುತೆರೆ ಕಾರ್ಯಕ್ರಮದಲ್ಲಿ ISSನ Node 3ಗೆ ಸೂಚಿಸಲಾದ ಹೆಸರನ್ನು ಬಿತ್ತರಿಸಲು ಆಯ್ಕೆ ಮಾಡಲಾಗಿತ್ತು

ಇವರು ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಮೆಸಾಚುಸೆಟ್ಸ್‌ನ ನೀಡಮ್‌ನಲ್ಲಿಯ ನೀಡಮ್ ಹೈಸ್ಕೂಲ್‌ನಲ್ಲಿ ಪೂರೈಸಿದ ಸುನಿತಾ ವಿಲಿಯಮ್ಸ್ 1983ರಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದರು. 1987ರಲ್ಲಿ ಇವರು ಅಮೇರಿಕಾದ ನೌಕಾ ಅಕಾಡೆಮಿಯಿಂದ ದೈಹಿಕ ವಿಜ್ಞಾನದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದುಕೊಂಡರು. ನಂತರ 1995ರಲ್ಲಿ ಫ್ಲೋರಿಡಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಇಂಜಿನಿಯರಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ವಿಜ್ಞಾನ ಪದವಿಯನ್ನು ಪಡೆದರು.

1987ರಲ್ಲಿ ವಿಲಿಯಮ್ಸ್‌ ಅವರು ಅಮೇರಿಕಾದ ನೌಕಾಪಡೆಗೆ ಸೇರ್ಪಡೆಯಾಗಲು ಅನುಮತಿ ಪಡೆದರು. ಅವರು 1989ರಲ್ಲಿ ನೌಕಾ ಚಾಲಕರಾಗಿ ನಿಯೋಜಿತರಾದರು ಮತ್ತು 1993ರಲ್ಲಿ ನೇವಲ್ ಟೆಸ್ಟ್ ಪೈಲಟ್ ಸ್ಕೂಲ್‌ನಿಂದ ಪದವಿಯನ್ನು ಪಡೆದುಕೊಂಡರು.
1998 ಜೂನ್‌ರಲ್ಲಿ ನಾಸಾಕ್ಕೆ ಆಯ್ಕ್ರೆಯಾದ ವಿಲಿಯಮ್ಸ್‌ ಅವರಿಗೆ ಆಗಸ್ಟ್ 1998ರಲ್ಲಿ ತರಬೇತಿ ಪ್ರಾರಂಭವಾಯಿತು.[೧] ಅವರ ಗಗನಯಾನಿ ತರಬೇತಿಯು ಅಭಿಶಿಕ್ಷಣ ಉಪನ್ಯಾಸಗಳು ಮತ್ತು ಪ್ರವಾಸಗಳು, ಹಲವಾರು ತಾಂತ್ರಿಕ ಮತ್ತು ವೈಜ್ಞಾನಿಕ ಉಪನ್ಯಾಸಗಳು, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮತ್ತು ಗಗನ ನೌಕೆಯ ಕುರಿತಾದ ಗಹನ ಪರಿಚಯ, ಮನೋದೈಹಿಕ ತರಬೇತಿ ಮತ್ತು T-38 ವಿಮಾನಕ್ಕಾಗಿನ ಮೂಲ ತರಬೇತಿ, ಅಷ್ಟೇ ಅಲ್ಲದೆ ನೀರಿನಿಂದ ಹಾಗೂ ಕಾಡಿನಲ್ಲಿನ ಅಪಘಾತಗಳಿಂದ ರಕ್ಷಿಸಿಕೊಳ್ಳುವ ತರಬೇತಿಯನ್ನು ಒಳಗೊಂಡಿತ್ತು. ಮೂರು ಬಾರಿ ಗಗನ ನಡಿಗೆಯನ್ನು ಯಶಸ್ವಿಯಾಗಿ ಪೂರೈಸಿ, ಅತಿ ಹೆಚ್ಚು ಗಗನ ನಡಿಗೆ ಕೈಗೊಂಡ ಕ್ಯಾಥರಿನ್ ಥೊರಂಟಾನ್‌ರನ್ನು ವಿಲಿಯಮ್ಸ್ ಮೀರಿಸಿದ್ದರು. ನಂತರ ಪೆಗ್ಗಿ ವಿಟ್ಸ್‌ನ್ ವಿಲಿಯಮ್ಸ್ ರ ದಾಖಲೆಯನ್ನು ಮುರಿದರು. ಕಠಿಣ ತರಬೇತಿಯ ಮತ್ತು ಮೌಲ್ಯಮಾಪನ ನಂತರದಲ್ಲಿ ವಿಲಿಯಮ್ಸ್ ಮಾಸ್ಕೋದ ರಷ್ಯನ್ ಸ್ಪೇಸ್ ಎಜೆನ್ಸಿಯ ಜೊತೆಗೆ ISSಗೆ ರಷ್ಯಾದ ಕೊಡುಗೆಗಳ ಕುರಿತಾಗಿ ಕೆಲಸ ಮಾಡಿದರು. ಅಲ್ಲದೆ ಇವರು ISSಗೆ ಕಳುಹಿಸಿದ ಪ್ರಪ್ರಥಮ ಗಗನ ಯಾತ್ರಿ ತಂಡದ ಜೊತೆ ಕೂಡ ಕೆಲಸ ಮಾಡಿದರು. ಎಕ್ಸ್‌ಪೆಡಿಷನ್ 1ನ ನಂತರದಲ್ಲಿ ವಿಲಿಯಮ್ಸ್‌ ರೊಬೊಟಿಕ್ಸ್ ಬ್ರಾಂಚ್‌ನ ISS ರೊಬೊಟಿಕ್ ಆರ್ಮ್ ಮತ್ತು ಅದಕ್ಕೆ ಸಂಬಂಧಿಸಿದ ಸ್ಪೆಷಲ್ ಪರ್ಪಸ್ ಡೆಕ್ಸ್‌ಟೆರಿಯಸ್ ಮ್ಯಾನಿಪುಲೇಟರ್ ಕುರಿತಾಗಿ ಕೆಲಸ ಮಾಡಿದರು. ಅವರು NEEMO 2 ಮಿಷನ್‌ನಲ್ಲಿದ್ದ ತಂಡದ ಸದಸ್ಯರಾಗಿದ್ದರು. ಈ ಮಿಷನ್‌ನಲ್ಲಿ ಅವರು ಉಳಿದವರ ಜೊತೆಗೆ ಮೇ 2002ರಲ್ಲಿ ಒಂಬತ್ತು ದಿನಗಳಕಾಲ ನೀರಿನೊಳಗೆ ಅಕ್ವೇರಿಯಸ್ ಹ್ಯಾಬಿಟೇಟ್‌ನಲ್ಲಿ ವಾಸವಿದ್ದರು.

2008 ರಿಂದ ,ನಾಸಾದ ಗಗನಯಾತ್ರಿಗಳ ಕಚೇರಿಯ ಡೆಪ್ಯುಟಿ ಚೀಫ್ಆಗಿ ವಿಲಿಯಮ್ಸ್ ಕಾರ್ಯನಿರ್ವಹಿಸುತ್ತಿದ್ದಾರೆ.
ಎಲ್ಲ ಗಗನಯಾತ್ರಿಗಳಂತೆ ವಿಲಿಯಮ್ಸ್ ಕೂಡ ಪರವಾನಗಿ ಪಡೆದಿರುವ ಹವ್ಯಾಸಿ ರೆಡಿಯೋ ಆಪರೇಟರ್ ಆಗಿದ್ದಾರೆ. 2001ರಲ್ಲಿ ಇವರು ಟೆಕ್ನಿಷಿಯನ್ ಕ್ಲಾಸ್ ಲೈಸೆನ್ಸ್ ಪರೀಕ್ಷೆಯನ್ನು ಪಾಸು ಮಾಡಿದ್ದು ಫೆಡರಲ್ ಕಮ್ಯುನಿಕೇಷನ್ ಕಮಿಷನ್‌ನಿಂದ ಆಗಸ್ಟ್ 13ರ 2001ರಲ್ಲಿ KD5PLB ರೆಡಿಯೊ ಕರೆ ಗುರುತನ್ನು ಪಡೆದಿದ್ದಾರೆ.ISSನಿಂದ ವಿಲಿಯಮ್ಸ್ ಅವರು ಅಲ್ಲಿಯ ಎರಡು ರೇಡಿಯೋಗಳಲ್ಲಿ ಒಂದನ್ನು ಬಳಸಿ ಶಾಲಾವಿದ್ಯಾರ್ಥಿಗಳ ಜೊತೆ ಮಾತನಾಡಿದ್ದರು.
STS-116 ಬದಲಾಯಿಸಿ ಎಕ್ಸ್‌ಪೆಡಿಷನ್ 14ರ ತಂಡವನ್ನು ಸೇರಿಕೊಳ್ಳಲು ವಿಲಿಯಮ್ಸ್ ಅವರನ್ನು STS-116ಜೊತೆಗೆ ಡಿಸ್ಕವರಿ ನೌಕೆಯ ಮೂಲಕ ಅಂತರಾಷ್ಚ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಡಿಸೆಂಬರ್ 9 2006ರಂದು ಹಾರಿಬಿಡಲಾಯಿತು. ಎಪ್ರಿಲ್ 2007ರಂದು ರಷ್ಯಾದ ಸದಸ್ಯರು ತಮ್ಮ ಕಕ್ಷೆಯನ್ನು ಎಕ್ಸ್‌ಪೆಡಿಷನ್ 15ಕ್ಕೆ ಬದಲಾಯಿಸಿಕೊಂಡರು.

ವಿಲಿಯಮ್ಸ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ(ISS) ಪ್ರಯಾಣಕ್ಕೆ ತಮ್ಮ ದಿನನಿತ್ಯದ ಬಳಕೆಯ ಕೆಲವು ವಸ್ತುಗಳ ಜೊತೆಗೆ ಭಗವದ್‌ಗೀತೆಯ ಒಂದು ಪುಸ್ತಕ, ಗಣೇಶನ ಸಣ್ಣ ವಿಗ್ರಹ ಹಾಗೂ ಕೆಲವು ಸಮೋಸಾಗಳನ್ನು ಕೊಂಡೊಯ್ದಿದ್ದರು.

ಎಕ್ಸ್‌ಪೆಡಿಷನ್ಸ್‌ 14 ಮತ್ತು 15

ಡಿಸ್ಕವರಿ ನೌಕೆಯು ಭೂ ಕಕ್ಷೆಯಿಂದ ಹಾರಿದ ಮೇಲೆ ತನ್ನ ಮೆಚ್ಚಿನ ತಲೆ ಕೂದಲನ್ನು ಲಾಕ್ಸ್‌ ಆಫ್ ಲವ್ ಸಂಸ್ಥೆಗೆ ನೀಡುವಂತೆ ವ್ಯವಸ್ಥೆ ಮಾಡಿದ್ದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಜಾನ್‌ಹಿಗ್ಗಿನ್ ಬಾಥಮ್, ವಿಲಿಯಮ್ಸ್ ಅವರ ಕೂದಲನ್ನು ಕತ್ತರಿಸಿದರು. ಕೂದಲನ್ನು STS-116ನ ತಂಡವು ಅದನ್ನು ಭೂಮಿಗೆ ತಂದಿತು.

STS-116 ಮಿಷನ್‌ನ ಎಂಟನೇ ದಿನ ವಿಲಿಯಮ್ಸ್‌ ಅವರು ಬಾಹ್ಯಾಕಾಶ ನೌಕೆಯಿಂದ ಹೊರಗೆ ಬಂದು ಮೊದಲ ಗಗನ ನಡಿಗೆಯ ಚಟುವಟಿಕೆಗಳನ್ನು ಕೈಗೊಂಡರು. ಜನವರಿ 31, ಫ್ರೆಬ್ರವರಿ 4 ಮತ್ತು ಫೆಬ್ರವರಿ 9, 2007ರಂದು ವಿಲಿಯಮ್ಸ್‌ ಅವರು ಮೈಕೆಲ್ ಲೊಫೆಜ್-ಅಲ್ಜಿರಿಯಾ ಜೊತೆಗೆ ISS ನಿಂದ ಮೂರು ಗಗನ ನಡಿಗೆಗಳನ್ನು ಮುಗಿಸಿದರು. ಈ ನಡಿಗೆಯ ಸಂದರ್ಭದಲ್ಲಿ ಕ್ಯಾಮೆರಾವನ್ನು ಸರಿಯಾಗಿ ಕಟ್ಟಿಕೊಳ್ಳದ್ದರಿಂದ ವಿಲಿಯಮ್ಸ್‌ ಅದನ್ನು ಸರಿಪಡಿಸುವುದರೊಳಗಾಗಿ ಅದು ಬಿಚ್ಚಿಕೊಂಡು ಆಕಾಶದಲ್ಲಿ ತೇಲಾಡುತ್ತಿತ್ತು.

ವಿಲಿಯಮ್ಸ್‌ ಒಂಬತ್ತು ದಿನಗಳಲ್ಲಿ ಮೂರು ಆಕಾಶ ನಡಿಗೆಗಳನ್ನು ಪೂರೈಸಿದರು. ಮೂರನೇ ಗಗನ ನಡಿಗೆಯನ್ನು ಪೂರೈಸಲು ವಿಲಿಯಮ್ಸ್ 6 ತಾಸು 40 ನಿಮಿಷಗಳ ಕಾಲ ಗಗನ ನಡಿಗೆಯಲ್ಲಿರಬೇಕಾಯ್ತು. ಮೂರು ಆಕಾಶ ನಡಿಗೆಗೆಗಳನ್ನು ಪೂರೈಸಲು ಅವರು 29ತಾಸು 17ನಿಮಿಷಗಳಷ್ಟು ಕಾಲ ಆಕಾಶ ನಡಿಗೆಯಲ್ಲಿ ಇರಬೇಕಾಯ್ತು. ಈ ನಡಿಗೆಯ ಮೂಲಕ ಈ ಹಿಂದೆ ಅತೀ ಹೆಚ್ಚು ಸಮಯ ಆಕಾಶ ನಡಿಗೆಯನ್ನು ಮಾಡಿದ ದಾಖಲೆ ಹೊಂದಿದ್ದ ಕ್ಯಾಥರಿನ್ ಸಿ. ಥೊರಂಟಾನ್‌ ಅವರ ದಾಖಲೆಯನ್ನು ವಿಲಿಯಮ್ಸ್‌ ಮುರಿದರು.[೧][೨]ಡಿಸೆಂಬರ್ 18, 2007ರಂದು ಎಕ್ಸಪೆಡಿಷನ್ 16ರ ತಮ್ಮ ನಾಲ್ಕನೇ ಗಗನ ನಡಿಗೆಯಲ್ಲಿ ಪೆಗ್ಗಿ ವಿಟ್ಸನ್‌ ಅವರು ಒಟ್ಟಾರೆ 32 ತಾಸು, 36 ನಿಮಿಷಗಳ ಕಾಲ ಗಗನ ನೌಕೆಯ ಹೊರಗಿದ್ದು (EVA) ಗಗನ ನಡಿಗೆಯನ್ನು ಮಾಡುವ ಮೂಲಕ ವಿಲಿಯಮ್ಸ್ ಅವರಿಗಿಂತ ಹೆಚ್ಚಿನ ಅವಧಿಯಲ್ಲಿ ಗಗನ ನಡಿಗೆಯನ್ನು ಮಾಡಿದರು.
ವಿಲಿಯಮ್ಸ್‌ ಅವರು ಹೆಚ್ಚಿನ ಮಸಾಲೆಯುಕ್ತ ಆಹಾರಕ್ಕೆ ಬೇಡಿಕೆಯಿಟ್ಟಿದ್ದರಿಂದ ಮಾರ್ಚ್ 2007ರ ಪ್ರಾರಂಭದಲ್ಲಿ ಪ್ರೋಗ್ರೆಸ್ ಗಗನ ನೌಕೆಯಲ್ಲಿ ಕೊಳವೆಯೊಂದರಲ್ಲಿ ವಾಸಾಬಿ ಪದಾರ್ಥವನ್ನು ಅವರಿಗೆ ಕಳುಹಿಸಲಾಯಿತು. ಕೊಳವೆಯನ್ನು ಬಿಚ್ಚಿದಾಗ ಭೂ ವಾತಾವರಣದ ಒತ್ತಡದಲ್ಲಿ ತುಂಬಿದ್ದ ಜೆಲ್ ರೀತಿಯ ಪೇಸ್ಟ್ ISSನಲ್ಲಿದ್ದ ಕಡಿಮೆ ಒತ್ತಡದಲ್ಲಿ ಒಮ್ಮೆಲೆ ಹೊರಚೆಲ್ಲಿಕೊಂಡಿತು.ಆ ವಾತಾವರಣದಲ್ಲಿ ವಾಸಾಬಿ ಪದಾರ್ಥವನ್ನು ಇಟ್ಟುಕೊಳ್ಳುವುದು ಕಷ್ಟದಾಯಕವಾಯ್ತು.

ಎಪ್ರಿಲ್ 16, 2007ರಂದು ಕಕ್ಷೆಯಲ್ಲಿ ಮೊಟ್ಟಮೊದಲ ಮ್ಯಾರಾಥಾನ್ ಪೂರೈಸಿದ ಗಗನಯಾತ್ರಿಯಲ್ಲಿ ವಿಲಿಯಮ್ಸ್‌ ಮೊದಲಿಗರಾದರು. ವಿಲಿಯಮ್ಸ್‌ 4 ತಾಸು 24 ನಿಮಿಷಗಳಲ್ಲಿ 2007 ಬೊಸ್ಟನ್ ಮ್ಯಾರಾಥಾನ್‌ ಅನ್ನು ಪೂರೈಸಿದರು. ತಂಡದ ಉಳಿದ ಸದಸ್ಯರು ಕಿತ್ತಳೆ ಹಣ್ಣುಗಳನ್ನು ನೀಡುತ್ತಾ ಅವರನ್ನು ಪ್ರೋತ್ಸಾಹಿಸಿದರು. ವಿಲಿಯಮ್ಸ್‌ ಸಹೋದರಿ, ದಿನಾ ಪಾಂಡ್ಯಾ ಮತ್ತು ಇನ್ನೊಬ್ಬ ಗಗನಯಾತ್ರಿ ಕರೆನ್ ಎಲ್.ನೈಬರ್ಗ್ ಅವರು ಭೂಮಿಯಲ್ಲಿ ಮ್ಯಾರಾಥಾನ್ ಓಟವನ್ನು ಪೂರೈಸಿದರು. ಈ ವಿವರಗಳನ್ನು ವಿಲಿಯಮ್ಸ್‌ ಅವರು ಮಿಷನ್ ಕಂಟ್ರೋಲ್ ಮೂಲಕ ಪಡೆದುಕೊಂಡರು. 2008ರಲ್ಲಿ ವಿಲಿಯಮ್ಸ್‌ ಅವರು ಭೂಮಿಯ ಮೇಲೆ ಬೊಸ್ಟನ್ ಮ್ಯಾರಾಥಾನ್‌ನಲ್ಲಿ ಭಾಗವಹಿಸಿದರು. ಅದೇ ವರ್ಷ ಪ್ರಸಿದ್ಢ ಗೇಮ್ ಶೋ ಡ್ಯುಯೆಲ್‌ನಲ್ಲಿ ಈ ಘಟನೆಯ ಕುರಿತು ಪ್ರಶ್ನೆ ಕೇಳಲಾಗಿತ್ತು. ಉತ್ತರಗಳು ಹೀಗಿದ್ದವು : ಲಂಡನ್, ನ್ಯೂಯಾರ್ಕ್, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಪ್ಯಾರಿಸ್. ISS ನಿಖರವಾದ ಉತ್ತರವಾಗಿತ್ತು.

ವಿಲಿಯಮ್ಸ್‌ ಅವರನ್ನು STS-117ರ “ಅಟ್ಲಾಂಟಿಸ್” ನೌಕೆಯ ಮೂಲಕ ಭೂಮಿಗೆ ವಾಪಸ್ಸು ಕರೆಸಿಕೊಳ್ಳುವ ನಿರ್ಧಾರವನ್ನು ಎಪ್ರಿಲ್ 26, 2007ರಂದು ಮಾಡಲಾಯಿತು. ಆದ್ದರಿಂದಾಗಿ ವಿಲಿಯಮ್ಸ್ ಅವರಿಗೆ ಅಮೇರಿಕಾದ ಏಕವ್ಯಕ್ತಿ ಗಗನನೌಕೆ ದಾಖಲೆಯನ್ನು ಮಾತ್ರ ಮುರಿಯಲಾಗಲಿಲ್ಲ. ಆದರೆ ಇತ್ತೀಚೆಗೆ ತಮ್ಮ ಈ ಹಿಂದಿನ ಜೊತೆಗಾರ ಗಗನಯಾತ್ರಿ ಕಮಾಂಡರ್ ಮೈಕೆಲ್ ಲೊಫೆಜ್-ಅಲ್ಜೀರಿಯಾ ಅವರು ಈ ದಾಖಲೆಯನ್ನು ಮುರಿದರು.

ಆದರೆ ಅತಿಹೆಚ್ಚು ಸಮಯದ ಏಕ ಮಹಿಳೆ ಗಗನಯಾನದ ಎಂಬ ದಾಖಲೆಯನ್ನು ಇವರು ಮುರಿದಿದ್ದಾರೆ.
*STS-117*
ವಿಲಿಯಮ್ಸ್‌ ಅವರು STS-117ನ ಮಿಷನ್ ಸ್ಪೆಷಲಿಸ್ಟ್ ಆಗಿ ಕಾರ್ಯ ನಿರ್ವಹಿಸಿ ಜೂನ್ 22, 2007ರಂದು STS-೧೧೭ ಮಿಷನ್‌ನ ಕೊನೆಯಲ್ಲಿ ಭೂಮಿಗೆ ವಾಪಸ್ಸಾದರು. ಗಗನ ನೌಕೆ ಅಟ್ಲಾಂಟಿಸ್ ಭೂಮಿಯನ್ನು ಪೌರ್ವಾತ್ಯ ಹಗಲಿನ ಸಮಯ (EDT) ಬೆಳಿಗ್ಗೆ 3:49ಕ್ಕೆ ಕ್ಯಾಲಿಫೋರ್ನಿಯಾದ ಏರ್‌ ಫೋರ್ಸ್ ಬೇಸ್‌ನಲ್ಲಿ ಬಂದಿಳಿಯಿತು. ಅಖಂಡ 195ದಿನಗಳನ್ನು ಅಂತರಿಕ್ಷದಲ್ಲಿ ಕಳೆದ ವಿಲಿಯಮ್ಸ್‌ ಸುರಕ್ಷಿತವಾಗಿ ಭೂಮಿಗೆ ಬಂದಿಳಿದರು.

ಕೇಪ್ ಕಾರ್ನಿವಲ್‌ನಲ್ಲಿಯ ಪ್ರತಿಕೂಲ ಹವಾಮಾನದ ಕಾರಣದಿಂದ ಮಿಷನ್‌ನ ಮ್ಯಾನೆಜರ್‌ಗಳು ಅಟ್ಲಾಂಟಿಸ್ ನೌಕೆಯನ್ನು ಮೊಜಾವೆ ಮರುಭೂಮಿಯಲ್ಲಿನ ಎಡ್ವರ್ಡ್ ಕಡೆಗೆ ತಿರುಗಿಸಬೇಕಾಯಿತು. ಅಲ್ಲದೆ 24 ಗಂಟೆಗಳಲ್ಲಿ ಮೂರು ಬಾರಿ ನೌಕೆಯು ಭೂಮಿ ಸ್ಪರ್ಶಿಸುವುದನ್ನು ತಪ್ಪಿಸಬೇಕಾಯ್ತು.”ಸುಸ್ವಾಗತ, ಮಹಾಮಿಷನ್‌ನಲ್ಲಿ ಯಶಸ್ವಿಯಾಗಿದ್ದಕ್ಕೆ ಅಭಿನಂದನೆಗಳು” ಎಂದು ವಿಲಿಯಮ್ಸ್‌ ಮತ್ತು ಅವರ ತಂಡದ ಉಳಿದವರಿಗೆ ಗಗನ ನೌಕೆ ಭೂಮಿಗೆ ಬಂದಿಳಿದ ಕೆಲವೇ ಕ್ಷಣಗಳ ನಂತರ ನಾಸಾದ ಮಿಷನ್ ಕಂಟ್ರೋಲ್ ಅದಿಕಾರಿಗಳು ತಿಳಿಸಿದರು..
ಭೂಮಿಗೆ ಬಂದಿಳಿದ ನಂತರದಲ್ಲಿ 41 ವರ್ಷದ ವಿಲಿಯಮ್ಸ್‌ ಅವರನ್ನು ಎಬಿಸಿ ಟೆಲಿವಿಶನ್ ನೆಟ್‌ವರ್ಕ್ “ವಾರದ ವ್ಯಕ್ತಿ”ಯಾಗಿ ಆಯ್ಕೆ ಮಾಡಿತು.ಅನಾರೋಗ್ಯದಿಂದಾಗಿ ಕೂದಲು ಕಳೆದುಕೊಂಡವರಿಗಾಗಿ ವಿಲಿಯಮ್ಸ್‌ ಅವರು ಕೂದಲನ್ನು ದಾನ ಮಾಡಿರುವುದನ್ನು ಡಿಸೆಂಬರ್‌ನಲ್ಲಿ ಗುರುತಿಸಿತು.
*2007-ಭಾರತಕ್ಕೆ ಭೇಟಿ*
ವಿಲಿಯಮ್ಸ್‌ ಅವರು 2007 ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದರು. ಭಾರತದಲ್ಲಿ ಅವರು ಮಹಾತ್ಮಾ ಗಾಂಧೀಜಿಯವರು 1915ರಲ್ಲಿ ಪ್ರಾರಂಭಿಸಿದ ಸಭರಮತಿ ಆಶ್ರಮಕ್ಕೆ ಹಾಗೂ ತಮ್ಮ ಪೂರ್ವಜರ ಹಳ್ಳಿಯಾದ ಗುಜರಾತ್‌ನ ಜುಲಾಸನ್‌ಗೆ ಭೇಟಿ ನೀಡಿದರು. ವಿಶ್ವ ಗುಜರಾತಿ ಸಂಸ್ಥೆಯು ಕೊಡುವ ಸರ್ದಾರ್ ವಲ್ಲಭಬಾಯಿ ಪಟೇಲ್ ವಿಶ್ವ ಪ್ರತಿಭಾ ಪ್ರಶಸ್ತಿಯನ್ನು ಪ್ರಪ್ರಥಮ ಬಾರಿಗೆ ಭಾರತೀಯ ಪೌರತ್ವವನ್ನು ಪಡೆಯದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್‌ ಅವರಿಗೆ ನೀಡಿ ಗೌರವಿಸಿತು. ಅಲ್ಲದೆ ಅವರು ತಮ್ಮ ಸಂಬಂಧಿ ಮಲಸಹೋದರಿಯ ಮನೆಗೆ ಬೇಟಿ ನೀಡಿದರು ಮತ್ತು ಅವರ ಮಗನ ಹುಟ್ಟಿದ ಹಬ್ಬದಲ್ಲಿ ಪಾಲ್ಗೊಂಡರು. ಅಕ್ಟೋಬರ್ 4, 2007ರಂದು ವಿಲಿಯಮ್ಸ್‌ ಅವರು ಅಮೇರಿಕನ್ ರಾಯಬಾರಿ ಶಾಲೆಯನ್ನು ಭೇಟಿ ಮಾಡಿದರು ನಂತರ ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ.ನಂತರದ ದಿನಗಳಲ್ಲಿ ಕೂಡ ಬಾಹ್ಯಾಕಾಶ ಯಾನಕ್ಕೆ ತಮ್ಮ ಜೀವನ ಮುಡಿಪಾಗಿಟ್ಟ ಮಹಿಳೆ ಈ ಸಲ ದೀರ್ಘಕಾಲದ ವರೆಗೆ ಬಾಹ್ಯಾಕಾಶ ನೌಕೆ ಯಲ್ಲಿ ಇರುವಂತಾಗಿದ್ದು. ನಿಜಕ್ಕೂ ವಿಚಿತ್ರ ಸಂಗತಿ. ಆದರೆ ಮರಳಿ ಬರುವಲ್ಲಿ ಅವರ ಬಗ್ಗೆ ನಡೆದ ಸಂಗತಿಗಳನ್ನು ಅವಲೋಕಿಸಿ ದಾಗ ನಿಜವಾಗಿಯೂ ಹೆಮ್ಮೆ ಅಭಿಮಾನ ಉಕ್ಕುತ್ತದೆ
*ಸುನಿತಾ ವಿಲಿಯಂ ಸಾಧನೆ ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ*
ಮತ್ತೆ ಸ್ವಾಗತ, ಭೂಮಿ ನಿಮ್ಮನ್ನು ಮಿಸ್ ಮಾಡಿಕೊಂಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮೂಲದ ಅಮೆರಿಕ ಗಗನಯಾನಿ ಸುನೀತಾ ವಿಲಿಯಮ್ಸ್ ಅವರನ್ನು ಸಾಮಾಜಿಕ ಜಾಲತಾಣದ ಮೂಲಕ ಸ್ವಾಗತಿಸಿದ್ದಾರೆ.
ಧೈರ್ಯ, ಮತ್ತು ಅಪರಿಮಿತ ಮಾನವ ಚೈತನ್ಯದ ಪರೀಕ್ಷೆಯಾಗಿದೆ. ಸುನೀತಾ ವಿಲಿಯಮ್ಸ್ ಮತ್ತು #Crew9 ಗಗನಯಾತ್ರಿಗಳು ಮತ್ತೊಮ್ಮೆ ಪರಿಶ್ರಮ ಎಂದರೆ ಏನು ಎಂದು ನಮಗೆ ತೋರಿಸಿದ್ದಾರೆ. ಅಜ್ಞಾತವಾದ ವಿಶಾಲತೆಯ ಮುಂದೆ ಅವರ ಅಚಲ ದೃಢಸಂಕಲ್ಪವು ಲಕ್ಷಾಂತರ ಜನರಿಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ.
ಬಾಹ್ಯಾಕಾಶ ಪರಿಶೋಧನೆಯು ಮಾನವ ಸಾಮರ್ಥ್ಯದ ಮಿತಿಗಳನ್ನು ವಿಸ್ತರಿಸುವ, ಕನಸು ಕಾಣುವ ಧೈರ್ಯ ಮತ್ತು ಆ ಕನಸುಗಳನ್ನು ವಾಸ್ತವಕ್ಕೆ ತಿರುಗಿಸುವ ಧೈರ್ಯವನ್ನು ಹೊಂದಿದೆ. ಒಬ್ಬ ಮಾರ್ಗದರ್ಶಕ ಮತ್ತು ಐಕಾನ್ ಆಗಿರುವ ಸುನೀತಾ ವಿಲಿಯಮ್ಸ್ ತಮ್ಮ ವೃತ್ತಿಜೀವನದುದ್ದಕ್ಕೂ ಈ ಮನೋಭಾವವನ್ನು ಪ್ರದರ್ಶಿಸಿದ್ದಾರೆ.
ಅವರ ಸುರಕ್ಷಿತ ಮರಳುವಿಕೆಗೆ ದಣಿವಿಲ್ಲದೆ ಕೆಲಸ ಮಾಡಿದ ಎಲ್ಲರ ಬಗ್ಗೆ ನಮಗೆ ಹೆಮ್ಮೆಯಿದೆ. ನಿಖರತೆಯು ಉತ್ಸಾಹವನ್ನು ಪೂರೈಸಿದಾಗ ಮತ್ತು ತಂತ್ರಜ್ಞಾನವು ದೃಢತೆಯನ್ನು ಪೂರೈಸಿದಾಗ ಏನಾಗುತ್ತದೆ ಎಂಬುದನ್ನು ಅವರು ಪ್ರದರ್ಶಿಸಿದ್ದಾರೆ
ಹೊಸ ಹೊಸ ವಿಷಯ ಹಾಗೂ ಆವಿಷ್ಕಾರಗಳ ಬಗ್ಗೆ ಉಪನ್ಯಾಸ ಚರ್ಚೆಗಳನ್ನು ಏರ್ಪಡಿಸಬೇಕು .ಮಕ್ಕಳು ಪಾಲಕರು ಹಾಗೂ ಇಂದಿನ ಯುವ ಜನತೆ ಭಾಗಿಯಾಗಬೇಕು. ನಿಮ್ಮ ವಿಚಾರಧಾರೆಗಳು ಯೋಚನೆಗಳು ವೈಜ್ಞಾನಿಕತೆಯಿಂದ ಕೂಡಿದ್ದು ವಿಶಾಲವಾಗಿರಬೇಕು…….
ಗಗನಯಾನಿಗಳ ಜೀವನ ಕೂಡ ಒಂದು ಸ್ಪೂರ್ತಿ… ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ ಬೇಗ ಗುಣಮುಖರಾಗಲಿ… ಅಂತರಿಕ್ಷದಲ್ಲಿ ಅವರು ಕಳೆದ ಪ್ರತಿಕ್ಷಣದ ಬಗ್ಗೆ ತಿಳಿದುಕೊಳ್ಳುವ ಕಾತರ ಇಡೀ ಜಗತ್ತಿಗೆ ಇದೆ…… ಮುಂದಿನ ದಿನಗಳಲ್ಲಿ ಅನೇಕ ಗಗನ ತಾರೆಗಳು ಹುಟ್ಟಲಿ….

ನಂದಿನಿ ಸುರೇಂದ್ರ ಸನಬಾಳ್,  ಪಾಳಾ ಕಲಬುರಗಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜಾನುವಾರುಗಳಿಗೆ ಉಚಿತ ತಪಾಸಣಾ ಶಿಬಿರ

ಶ್ರೀಮತಿ ಸೋಮವ ಚನ್ನಬಸಪ್ಪ ಅಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ ಕೆ ಕೊಪ್ಪ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ವತಿಯಿಂದ ಜಾನುವಾರುಗಳಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group