ಗಾಂಜಾ ಜಪ್ತಿ; ಸಾಧನೆ ಮಾಡಿದ ಪೊಲೀಸರಿಗೆ ಬಹುಮಾನ ವಿತರಿಸಿದ ಎಸ್ ಪಿ

Must Read

ಬೀದರ – ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಕ್ರಾಸ್ ಬಳಿ ಪೊಲೀಸರು ಭರ್ಜರಿ ಬೇಟೆಯಾಡಿ ಸುಮಾರು 3.40 ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡಿದ್ದರು. ಈ ದಾಳಿಯಲ್ಲಿ ಮೂವರು ಆರೋಪಿಗಳು ಪರಾರಿ ಒಬ್ಬನ ಬಂಧನವಾಗಿತ್ತು ಪರಾರಿಯಾದವರ ಹುಡುಕಾಟದಲ್ಲಿ ಹುಮನಾಬಾದ್ ಪೊಲೀಸರು ನಿರತರಾಗಿದ್ದಾರೆ.

ತೆಲಂಗಾಣದಿಂದ ಬೀದರ್ ಮಾರ್ಗವಾಗಿ ಸೊಲಾಪೂರ್ ನತ್ತ ಕಾರಿನಲ್ಲಿ ಸಾಗಿಸುತ್ತಿದ್ದ ಅಂದಾಜು 34 ಲಕ್ಷ ಮೌಲ್ಯದ ಗಾಂಜಾ ಹಾಗೂ 6 ಲಕ್ಷ ಮೌಲ್ಯದ ಕಾರು ಜಪ್ತಿ ಮಾಡಿಕೊಳ್ಳಲಾಗಿತ್ತು. ನೂತನ ಎಸ್ ಪಿ ಡೆಕ್ಕಾ ಕಿಶೋರ್ ಬಾಬು ಮಾರ್ಗದರ್ಶನದಲ್ಲಿ ಹುಮನಾಬಾದ್ ಪೊಲೀಸ್ ರ ದಾಳಿ ನಡೆದಿತ್ತು.ದಾಳಿ ಮಾಡಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಹುಮಾನ ನೀಡಿದರು.

ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿ ಕಿಶೋರ್ ಬಾಬು ವತಿಯಿಂದ ಬಹುಮಾನ ಸ್ವೀಕಾರ ಮಾಡಿದ ಪೊಲೀಸ್ ಟಿಮ್ ….ಸಿಪಿಐ ಪ್ರಕಾಶ ಯಾತ್ನೋರ..ಪಿ ಎಸ್ ಐ ರವಿ…ಪೊಲೀಸ್ ಸಿಬ್ಬಂದಿಯಾದ ಮಲ್ಲಿಕಾರ್ಜುನ ಮಹದೇವ.. ಇನ್ನೂ ಇತರರು ಪೊಲೀಸರಿಗೆ ಬಹುಮಾನ ಲಭಿಸಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಮಕ್ಕಳಲ್ಲಿ ಸಂಸ್ಕಾರದ ಗುಣಗಳು ಕಡಿಮೆಯಾಗುತ್ತಿರುವುದು ವಿಷಾದನೀಯ – ಕಲಶೆಟ್ಟಿ

ಸಿಂದಗಿ-ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಇಂದು ಸಂಸ್ಕಾರದ ಗುಣಗಳು ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಉಪನ್ಯಾಸಕ ಎಸ್.ಎಸ್.ಕಲಶೆಟ್ಟಿ ಹೇಳಿದರು.ಅವರು ಪಟ್ಟಣದ ಶ್ರೀ ಸಾತವೀರೇಶ್ವರ...

More Articles Like This

error: Content is protected !!
Join WhatsApp Group