ಗಂಡ ಹೆಂಡತಿ ಮನಸ್ಸೊಂದಾದರೆ ನಂದಾ ದೀವಿಗೆ ಮುಡಿಸಿದಂತೆ – ಅಂಬಿಗರ ಚೌಡಯ್ಯ
ಬೈಲಹೊಂಗಲ: ಮನುಕುಲದ ಬೆಳವಣಿಗೆಯಲ್ಲಿ ವೈವಾಹಿಕ ಜೀವನ ಮಹತ್ವದ ಘಟ್ಟ. ಸತಿಪತಿಗಳು ಒಂದಾದ ಭಕ್ತಿ ಹಿತ ಒಪ್ಪುವುದು ಶಿವಂಗೆ, ಸತಿಪತಿ ಭಾವದಲ್ಲಿಯೇ ಲಿಂಗವನ್ನು ಕಂಡ ಬಸವಾದಿ ಶಿವಶರಣರ ದಾಂಪತ್ಯ ಜೀವನ ಆದರ್ಶ ಸಮಾಜ ನಿರ್ಮಾಣದ ಗುರಿ ಹೊಂದಿದೆ. ಸಾಧಕರಿಗೆ ದಾಂಪತ್ಯ ಬಾದಕವಲ್ಲ, ಸಾಧಕ ಎಂದು ಅರಿತು ಆಚರಿಸಿದ ಚೌಡಯ್ಯನವರ ಬದುಕು ಆದರ್ಶ
ಸ್ಥಳೀಯ ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ , ಶ್ರಾವಣ ಮಾಸದ ಪ್ರವಚನ ಎರಡನೇ ಸೋಮವಾರದ ವಿಶೇಷ ಕಾರ್ಯಕ್ರಮದಲ್ಲಿ ಪ್ರೇಮಕ್ಕ ಅಂಗಡಿ ಅಂಬಿಗರ ಚೌಡಯ್ಯನವರ ಕಲ್ಯಾಣ ಮಹೋತ್ಸವ ನೆರವೇರಿಸಿ ವಚನಾಧಾರಿತ ಹಾಗೂ ಮೌಖಿಕ ವಿಚಾರವನ್ನೊಳಗೊಂಡ ಚೌಡಯ್ಯನವರ ದಾಂಪತ್ಯವನ್ನು ವಿವರಿಸಿದರು.
ಪರಶುರಾಮ ಇಂದಿರಾ ಕುರೇರ ದಂಪತಿಗಳು 50ನೇ ವಿವಾಹ ವಾರ್ಷಿಕೋತ್ಸವ ನೆಪದಲ್ಲಿ ಚೌಡಯ್ಯನವರ ಕಲ್ಯಾಣ ಮಹೋತ್ಸವಕ್ಕೆ ಸಾಕ್ಷಿಯಾದರು.
ಮೀನಾಕ್ಷಿ ಶಂಕರ ಗೋಣಿ ಸವಿತಾ ಶ್ರೀಶೈಲ ಶರಣಪ್ಪನವರ ನಿಶ್ಚಯಿಸಿದರು. ರಾಜೇಶ್ವರಿ ದ್ಯಾಮನಗೌಡರ ಸುವರ್ಣ ಬಿಜಗುಪ್ಪಿ ನಿಜಾಚರಣೆಗಳೊಂದಿಗೆ ಕಲ್ಯಾಣ ಮಹೋತ್ಸವಕ್ಕೆ ನಾಂದಿ ಹಾಡಿದರು. ನಿವೃತ್ತ ಆದರ್ಶ ಶಿಕ್ಷಕಿ ದಾನಮ್ಮ ಈಟಿ ಅವರನ್ನು ಸನ್ಮಾನಿಸಲಾಯಿತು. ಗೌರಿ ಕರ್ಕಿ ವಚನ ಚಿಂತನಗೈದರು.
ಡಾ ನಿಂಗನಗೌಡ ಪಾಟೀಲ ವಿಶ್ವನಾಥ್ ಗಣಚಾರಿ ಶಿವಾನಂದ ಪಟ್ಟಿಹಾಳ ಮೋಹನ ಬೇವಿನಗಿಡದ ಅಶ್ವಿನಿ ಮಸ್ತನ್ನವರ ಶೋಭಾ ಕಾಡನ್ನವರ ಶಿಕ್ಷಕಿ ಶೋಭಾ ಅಗ್ನಿಗೋತ್ರಿ ಸಂಘದ ಸರ್ವ ಸದಸ್ಯರು ಅಜಗಣ್ಣ ಹಾಗೂ ಮುಕ್ತಾಯಕ್ಕ ಬಳಗ ಪಟ್ಟಣದ ನೂರಾರು ಶರಣ ಶರಣೆಯರು ಉಪಸ್ಥಿತರಿದ್ದರು
ದುಂಡಯ್ಯ ಕುಲಕರ್ಣಿ ಸ್ವಾಗತಿಸಿದರು ವೀರಭದ್ರಪ್ಪ ಕಾಪಸೆ ವಂದಿಸಿದರು ಕಾಡಪ್ಪ ರಾಮಗುಂಡಿ ನಿರೂಪಿಸಿದರು.