spot_img
spot_img

ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಬಹಳ ಮಹತ್ವವಿದೆ : ಒಪ್ಪತೇಶ್ವರ ಶ್ರೀಗಳು

Must Read

spot_img
- Advertisement -

ಹುನಗುಂದ : ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಗಳಿಗೆ ತಾಳಿ ಕಟ್ಟುತ್ತಾರೆ.ತಾಳಿಕೊಂಡು ಸಂಸಾರ ಸುಗಮವಾಗಿ ಸಾಗಿಸಬೇಕೆಂಬುದೇ ಅದರ ದ್ಯೋತಕವಾಗಿದೆ ಎಂದು ಗುಳೇದಗುಡ್ಡದ ಒಪ್ಪತೇಶ್ವರ ಶ್ರೀಗಳು ಹೇಳಿದರು.

ತಾಲೂಕಿನ ಬನಹಟ್ಟಿಯ ಗ್ರಾಮದೇವತೆ ಲಕ್ಕಮ್ಮದೇವಿ ಜಾತ್ರಾಮಹೋತ್ಸವ ಹಾಗೂ ಸನ್ಮಾನ ಸಮಾರಂಭ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಬಹಳ ಮಹತ್ವವಿದೆ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂದು ಹೇಳುವವರು ಇದ್ದಾರೆ ಅದೊಂದು ಋಣಾನುಬಂಧ ಮದುವೆ ಎನ್ನುವುದೊಂದು ಪವಿತ್ರ ಬಂಧನ ಎಂದು ಹೇಳಬಹುದು.
ಮುಂದುವರೆದು ಬನ್ನಟ್ಟಿ ಗ್ರಾಮ ಚಿಕ್ಕದಾದರು ಭಕ್ತಿವಂತರ ಗ್ರಾಮವಾಗಿದೆ ಜಾತ್ರೆ ನಡುವೆ ನಿಮಿತ್ತ ಶಿವಶರಣರಾದ ಗುಡ್ಡಾಪೂರ ದಾನಮ್ಮ ಇಟಗಿ ಭೀಮಮ್ಮ ಹಾಗೂ ಹೇಮರಡ್ಡಿ ಮಲ್ಲಮ್ಮನವರ, ಚರಿತ್ರೆಗಳ ಪುರಾಣಗಳನ್ನು ಪ್ರಾರಂಭಿಸುವುದರ ಮೂಲಕ ಧರ್ಮ ಪರಂಪರೆಗೆ ಹೆಚ್ಚಿನ ಒತ್ತು ನೀಡಿರುವುದು ಒಳ್ಳೆಯ ಕಾರ್ಯವಾಗಿದೆ  ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸಾರದಲ್ಲಿಕೊಂಡು ಪರಮಾತ್ಮನ ಸ್ವರೂಪರಾದವರು ಎಂದು ಹೇಳಿದರಲ್ಲದೇ, ಹೇಮರಡ್ಡಿ ಮಲ್ಲಮ್ಮ ತಾಳ್ಮೆಯಿಂದಲೇ ಸಂಸಾರವನ್ನು ಬೆಳಗಿಸಿದಳು ಅವಳ ತಾಳ್ಮೆಯನ್ನು ಮೆಚ್ಚಿ ಮಲ್ಲಿಕಾರ್ಜುನನ್ನೆ ಮಲ್ಲಮ್ಮ ಇದ್ದಲ್ಲಿಗೆ ಬಂದುದು ಆಧ್ಯಾತ್ಮಿಕ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ ನಮಗೆ ಮಲ್ಲಮ್ಮ ಆದರ್ಶವಾಗಬೇಕು ಎಂದು ತಮ್ಮ ಆರ್ಶೀವಚನದಲ್ಲಿ ಹೇಳಿದರು

ದಿವ್ಯ ಸಾನ್ನಿಧ್ಯ ವಹಿಸಿದ ಅಮೀನಗಡ ಪ್ರಭುರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಈ ಭಾರತ ದೇಶ ಶರಣರ ಸಂತರ ನಾಡಾಗಿದ್ದು ನಮ್ಮ ಸನಾತನ ಧರ್ಮದ ಪ್ರಕಾರ ಪ್ರತಿ ಗ್ರಾಮಗಳಲ್ಲಿ ದೇವಸ್ಥಾನಗಳು ಮಠ ಮಂದಿರಗಳು ಧರ್ಮ ಜಾಗೃತಿ ಮೂಡಿಸಲು ಪ್ರತಿ ಗ್ರಾಮಗಳಲ್ಲಿ ಜಾತ್ರೆ- ಉತ್ಸವಗಳು ಜರುಗುತ್ತಿದೆ ಬನ್ನಹಟ್ಟಿ ಗ್ರಾಮ ಚಿಕ್ಕದಾದರೂ ಭಕ್ತಿವಂತರ ದಾನವಂತರ ಗ್ರಾಮವಾಗಿದೆ ಎಂದರಲ್ಲದೆ ಈ ಗ್ರಾಮದಲ್ಲಿ ಕಳೆದ ಕೆಲವು ವರ್ಷಗಳಿಂದ ಸಾಮೂಹಿಕ ವಿವಾಹ ಹಮ್ಮಿಕೊಂಡು ಬಡವರ ಪರವಾಗಿ ಒಳ್ಳೆಯ ಕಾರ್ಯವನ್ನು ಮಾಡಿದಿರಿ ಎಂದು ಅವರು ತಿಳಿಸಿದರು

- Advertisement -

ಕೋಲಾರದ ದಿಗಂಬರೇಶ್ವರ ಸಂಸ್ಥಾನಮಠದ ಯೋಗಿ ಕಲ್ಲಿನಾಥ ದೇವರು ನೇತೃತ್ವ ವಹಿಸಿ ಆಶೀರ್ವಚನ ನೀಡಿ ಉಚಿತ ಸಾಮೂಹಿಕ ವಿವಾಹಗಳು ಬಡವರ ಪಾಲಿಗೆ ಉಳಿತಾಯವೆಂದು ಹೇಳಬಹುದು ಆರ್ಥಿಕವಾಗಿ ಉಳಿಸುವ ಸುದುದ್ದೇಶ ಇದರಲ್ಲಿದೆ ಮದುವೆ ಎನ್ನುವ ಪವಿತ್ರ ಬಂಧನಕ್ಕೆ ಸಮಾಜ ಸಹಾಯ ಮಾಡುತ್ತಿರುವುದು ಸ್ತುತ್ಯವಾದ ಕಾರ್ಯವಾಗಿದೆ ಎಂದರು.

ಪುರತಗೇರೆ (ಪುರಗೆರೆ) ಅಭಿನವ ಕೈಲಾಸಲಿಂಗ ಮಹಾಸ್ವಾಮಿಗಳು ನವ ವಧುವರರಿಗೆ ಅಕ್ಷತಾರೋಹಣದ ಮಂತ್ರಗಳನ್ನು ಹೇಳುವುದರ ಮೂಲಕ ಮಾತನಾಡಿ ನವದಂಪತಿಗಳು ಕೀರ್ತಿಗೊಬ್ಬ ಮಗ ಆರತಿಗೊಬ್ಬ ಮಗಳು ಸರ್ಕಾರದ ನಿಯಮವನ್ನು ಪಾಲಿಸಿ ನವ ದಂಪತಿಗಳಾಗಿ ಬಾಳಿ ನೂರಾರು ವರ್ಷಗಳ ಸುಖ ಜೀವನ ನಡೆಸಬೇಕೆಂದು ಕರೆ ನೀಡಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಷಮ್ಮದೇವಿ ಜೀ.ಸೆ. ಸಂಘದ ಅಧ್ಯಕ್ಷ ವೇದಮೂರ್ತಿ ಅಯ್ಯಪ್ಪಯ್ಯ ಶಿ. ಸಾರಂಗಮಠ ವಹಿಸಿದರು.
ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಬಸವರಾಜ ಎಚ್ ಪಾಟೀಲ ಹಿರೇಬಾದವಾಡಗಿ ಗ್ರಾ ಪಂ ಅಧ್ಯಕ್ಷ ನಾಗಪ್ಪ ಕಲ್ಲಿಗೊಂಡಿ ಬನಹಟ್ಟಿ ಗ್ರಾಮದ ಗ್ರಾ. ಪಂ. ಸದಸ್ಯರಾದ ಶ್ರೀಮತಿ ಬಸಮ್ಮ ಸುರೇಶ ಬಾದವಾಡಗಿ ಇನ್ನೋರ್ವ ಸದಸ್ಯ ಮಲ್ಲಪ್ಪ ಸಂಗೊಣ್ಣಾಗರ ಅಜಪ್ಪಗೌಡ ನಾಡಗೌಡ ಇತರರು ಉಪಸ್ಥಿತರಿದ್ದರು.

- Advertisement -

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಗಮಿಸಿದ ಸ್ವಾಮೀಜಿಗಳನ್ನು ಹಾಗೂ ಗಣ್ಯರು ಸಾಮೂಹಿಕ ವಿವಾಹಕ್ಕೆ ಸಹಾಯ ಸಹಕಾರ ನೀಡಿದ ವಿವಿಧ ದಾನಿಗಳಾದ ಸಿದ್ದನಗೌಡ.ಬ. ಗುಡದಪ್ಪನವರ, ಮಹಾಲಿಂಗಪ್ಪ ಗೋಡಿ ವಿರೇಶ ಕುಂಬಾರ (ಡಾಮಣ್ಣಗೇರಿ) ಬಸವರಾಜ ನಿಂ ಹೊಸಮನಿ ಮಠ, ಶ್ರೀ ಗಂಗಾಧರಯ್ಯ ಪಂ. ಸಾರಂಗಮಠ ಶ್ರೀಮತಿ ಗಂಗಮ್ಮ ಬ.ಹಡಪದ ಶರಣಪ್ಪ ಶಂ. ತೋಟಗೇರ, ಜಗದೀಶ ಕುಂಬಾರ ಸಂಗುಮಠ ಚಂದನಗೌಡ ಹು. ಮರಿಗೌಡರ ಮೂಲತ ಬನಹಟ್ಟಿಯವರಾದ ತುಮಕೂರ ಜಿಲ್ಲೆಯ ತಿಪ್ಪಟೂರಿನ ಅಲ್ಲಿಯ ಟ್ಯಾಕ್ಷಿ ಚಾಲಕರ ಅಧ್ಯಕ್ಷ ಶ್ರೀಧರ ಬಳ್ಳಾರಿ ಸನ್ಮಾನಿಸಲಾಯಿತು

ಕಾರ್ಯಕ್ರಮವನ್ನು ಶರಣಪ್ಪ ಗುಡ್ಡದಪ್ಪನವರ ಸ್ವಾಗತಿಸಿದರು. ಸಂಗುಮಠ ನಿರೂಪಿಸಿದರು ಎಲ್.ಐ.ಸಿ. ಪ್ರತಿನಿಧಿ ಸುರೇಶ ಬಳ್ಳಾರಿ ವಂದಿಸಿದರು
ಈ ಸಂದರ್ಭದಲ್ಲಿ ೫ಜೋಡಿ ಸಾಮೂಹಿಕ ವಿವಾಹಗಳು ಜರುಗಿದವು.
ಜಾತ್ರೆಯ ನಿಮಿತ್ತ ೧೧ ದಿನಗಳೊಂದಿಗೆ ಹೇಮರಡ್ಡಿ ಮಲ್ಲಮ್ಮಳ ಪುರಾಣ  ಕಾರ್ಯಕ್ರಮ ದೇವಿಗೆ ಅಭಿಷೇಕ, ಕುಂಭವೇಳ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ನಾಟಕ ಪ್ರದರ್ಶನ ಜರುಗಿದವು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸ್ವಾವಲಂಬಿಗಳಾಗಿ ಉತ್ತಮ ಜೀವನ ಸಾಗಿಸಿ: ವಿದ್ಯಾರ್ಥಿಗಳಿಗೆ ಎನ್.ಆರ್. ಠಕ್ಕಾಯಿ ಕರೆ

ರಾಮದುರ್ಗ: ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆ ಮಾಡಿ ಸ್ವಾವಲಂಬಿಗಳಾಗಿ ಉತ್ತಮ ಜೀವನವನ್ನು ನಡೆಸಬೇಕು ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್. ಆರ್.ಠಕ್ಕಾಯಿ ಹೇಳಿದರು. ತಾಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group