Homeಸುದ್ದಿಗಳುವಿದ್ಯಾರ್ಥಿಗಳಿಗಾಗಿ ಬೃಹತ್ ಲಸಿಕಾ ಅಭಿಯಾನ

ವಿದ್ಯಾರ್ಥಿಗಳಿಗಾಗಿ ಬೃಹತ್ ಲಸಿಕಾ ಅಭಿಯಾನ

ಸಿಂದಗಿ: ಮಹಾಮಾರಿ ಕರೋನಾ ಇಡೀ ಜಗತ್ತನ್ನೆ ತಲ್ಲಣಗೊಳಿಸಿದೆ ಕಾರಣ ಎಲ್ಲರೂ ಕಡ್ಡಾಯವಾಗಿ ಮಾಸ್ಕ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಮತ್ತು ತಮ್ಮ ಕೈಗಳನ್ನು ತೊಳೆದುಕೊಳ್ಳುವುದು ಕರೊನಾ ಮಹಾಮಾರಿಯನ್ನು ಹೋಗಲಾಡಿಸುವ ಸೂತ್ರವಾಗಿದ್ದು ಇದನ್ನು ಕಡ್ಡಾಯವಾಗಿ ಪಾಲಿಸಿದಾಗ ಮಾತ್ರ ಅದರಿಂದ ಮುಕ್ತಿ ಹೊಂದಲು ಸಾಧ್ಯ ಎಂದು ಪ್ರಾಚಾರ್ಯ ಡಾ.ಸತೀಶ ಗಾಯಕವಾಡ ಹೇಳಿದರು.

ಪಟ್ಟಣದ ಸರಕಾರಿ ಪ್ರಥಮ ಧರ್ಜೆ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಬೃಹತ್ ಉಚಿತ ಲಸಿಕಾ ಅಭಿಯಾನದಲ್ಲಿ ಅವರು ಮಾತನಾಡಿ, ನಮ್ಮ ಮಹಾವಿದ್ಯಾಲಯವು ಪ್ರಸ್ತುತ 305 ವಿದ್ಯಾರ್ಥಿಗಳು ಮತ್ತು ಎಲ್ಲ ಸಿಬ್ಬಂದಿ ವರ್ಗ ಲಸಿಕೆಯನ್ನು ಪಡೆದುಕೊಂಡು ತಾಲೂಕಿನಲ್ಲಿಯೇ ಅಭೂತಪೂರ್ವ ಸಾಧನೆ ಮಾಡಿದೆ ಎಂದರು.

ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಹರಿ ಕುಲಕರ್ಣಿ ಮಾತನಾಡಿ, ಲಸಿಕೆ ಅಭಿಯಾನದ ಮಹತ್ವ ಮತ್ತು ಕರೊನಾ ಹೇಗೆ ನಿಯಂತ್ರಿಸಬೇಕು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಸೈಯದ ಸಿರಾಜುದ್ದಿನ ಖಾದ್ರಿ, ರೇವಣಸಿದ್ದಪ್ಪ ಅಮ್ಮಾಣಿ, ಮಿರಜ್ ಪಾಶಾ, ಜ್ಯೋತಿ ಹೂಗಾರ, ಕು.ಸುಧಾರಾಣಿ ತಾರಾಪುರ, ಕವಿತಾ ಜಗಲರ್, ಮಲ್ಲಿಕಾರ್ಜುನ ಹೂಗಾರ ಕಾಲೇಜಿನ ಎಲ್ಲ ಸಿಬ್ಬಂದಿಯವರು ಉಪಸ್ಥಿತರಿದ್ದರು.

ವರದಿ: ಪಂಡಿತ್ ಯಂಪೂರೆ, ಸಿಂದಗಿ

RELATED ARTICLES

Most Popular

error: Content is protected !!
Join WhatsApp Group