ಗಣಿತಜ್ಞ ರಾಮಾನುಜನ್ ದಿನಾಚರಣೆ

Must Read

ಸಿಂದಗಿ; ಗಣಿತ ತಜ್ಞ ರಾಮಾನುಜನ್‍ರ ಜನ್ಮದಿನವನ್ನು ರಾಷ್ಟೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಎಸ್ ಜಿ. ಶಾಹಪುರ ಹೇಳಿದರು.

ಪಟ್ಟಣದ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಗಣಿತ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲೆಯ 8,9,10 ನೇ ತರಗತಿಯ ವಿದ್ಯಾರ್ಥಿಗಳು ಗಣಿತ ತಜ್ಞರ ಕುರಿತಾಗಿ ಸುಮಧುರವಾಗಿ ಮಾತನಾಡಿದರು. ಶ್ರೀನಿವಾಸ್ ರಾಮಾನುಜನ್ ಅವರ ಜೀವನ ಚರಿತ್ರೆಯನ್ನು ವಿವರಿಸಿದ ಶಾಹಿನ್ ನದಾಫ್, ರಾಮಾನುಜನ್‍ರ ಜನ್ಮದಿನವನ್ನು ರಾಷ್ಟೀಯ ಗಣಿತ ದಿನವನ್ನಾಗಿ ಆಚರಿಸುತ್ತಿರುವುದಾಗಿ ತಿಳಿಸಿದರು. ಕುಮಾರಿ ಚೈತ್ರ ಇಳಗೇರ ರಾಮಾನುಜನ್ ಮಾಯಾಚೌಕದ ಕುರಿತು ವಿವರಣೆಯನ್ನು ನೀಡಿದಳು.

ಜ್ಯೋತಿ ಯಕ್ತಪೂರ್ ಹಾಗೂ ಸಂಗಡಿಗರು ಪೈಥಾಗೊರಸ್ ಪ್ರಮೇಯದ ಹಾಡು ಹಾಡಿದರು ಈ ಹಾಡಿಗೆ ಕುಮಾರ್ ಪ್ರೇತ ಹೊಸಮನಿ ವಿದ್ಯಾರ್ಥಿಯು ತಬಲಾ ಬಾರಿಸುವುದರ ಮೂಲಕ ವಾದ್ಯ ಮೇಳವನ್ನು ನಡೆಸಿದನು. ಅಮರ್ ಸಿಂಗ್ ರಜಪೂತ್ ಗಣಿತ ಚಮತ್ಕಾರದ ಒಂದು ಚಟುವಟಿಕೆಯನ್ನು ತೋರಿಸಿದನು. ಗಣಿತದ ಒಗಟನ್ನು ಬಿಡಿಸುವ ಮೂಲಕ ಶಿವಕುಮಾರ್ ಬಂಕಲಗಿ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಕೆರಳಿಸಿದನು. ಶಾಲೆಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಡಗೇರಿ ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಅವರ ಬಗ್ಗೆ ಹಾಗೂ ಗಣಿತ ದಿನಾಚರಣೆಯ ಆಚರಣೆಯ ಬಗ್ಗೆ ಮಾತನಾಡಿದನು.

ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಭೋಗಪ್ಪ ನರಗೋದಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶರಣಬಸು ಲಂಗೋಟಿ, ದೈಹಿಕ ಶಿಕ್ಷಕ ರಾಜೇಂದ್ರ ನಿಂಬಾಳ್ಕರ್ ವೇದಿಕೆ ಮೇಲಿದ್ದರು.

ಗಣಿತ ಪ್ರೇರಣಾ ಸಂಘದ ವತಿಯಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ವಿಜ್ಞಾನ ಶಿಕ್ಷಕಿ ಗೀತಾ ಅಥಣಿ ಸ್ವಾಗತಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಶರಣಪ್ಪ ಕೇಸರಿ ಗುರುಗಳು ಹಾಗೂ ತೋಟಪ್ಪ ಪೂಜಾರಿ ಗುರುಗಳು ನೆರವೇರಿಸಿದರು. ಸಂಗೀತಾ ಕೆ ಗಣಿತ ಶಿಕ್ಷಕಿ ನಿರೂಪಿಸಿದರು. ದೈಹಿಕ ಶಿಕ್ಷಕಿ ಶೋಭಾ ಕೊಳೇಕರ್ ವಂದಿಸಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group