ವಚನ ಸಾಹಿತ್ಯ ಮತ್ತು ಸಂಪುಟಗಳಲ್ಲಿ ಇತ್ಯರ್ಥವಾಗದೆ ಉಳಿದ ವಿಷಯಗಳು

Must Read

ವಚನ ಸಾಹಿತ್ಯ ಮತ್ತು ಸಂಪುಟಗಳಲ್ಲಿ ಅನೇಕ ಸಲ ಚರ್ಚೆಗೆ ಒಳಗಾದರೂ ಇನ್ನೂ  ಇತ್ಯರ್ಥವಾಗದೆ ಉಳಿದ ವಿಷಯಗಳು ಕೆಲವು ಇವೆ

ಅವುಗಳನ್ನು ನೋಡುವುದಾದರೆ…..೧. ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಒಬ್ಬರೇನಾ ಇಲ್ಲವೇ ಬೇರೆ ಬೇರೆ ನಾ? ಬಸವ ಸಮಿತಿ ಶರಣಚರಿತಾಮೃತದಲ್ಲಿ ಇಬ್ಬರನ್ನೂ ಒಬ್ಬರೇ ಎಂದಿದ್ದಾರೆ

ಸತ್ಯ/ ಇಬ್ಬರೂ ಬೇರೆ ಬೇರೆ

೨ ಏಕಾಂತ ರಾಮಯ್ಯ ಮತ್ತು ಏಕೋರಾಮಿತಂದೆ ಇಬ್ಬರೂ ಬೇರೆ ಬೇರೆ ಎಂದಿದ್ದಾರೆ ಶರಣ ಸಾಹಿತ್ಯ ಅಧ್ಯಯನಕಾರರು

ಸತ್ಯ / ಇಬ್ಬರೂ ಒಬ್ಬರೇ

೩ ಶರಣೆಯರ ಹೆಸರಿನ ಮುಂದೆ ಪುಣ್ಯ ಸ್ತ್ರೀ ಎಂಬ ವಿಶೇಷಣ ಬಳಸಬೇಕೇ ?

ಅದು ಶುದ್ಧ ಸುಳ್ಳು
ಕೆಲ ವೇಶ್ಯೆಯರು ಶರಣಾದ ಉಲ್ಲೇಖ ಇದೆ ಆದರೆ ಎಲ್ಲರನ್ನೂ ಪುಣ್ಯ ಸ್ತ್ರೀ ಎಂದು ನಮೂದಿಸುವುದು ತಪ್ಪು ಜೇಡರ ದಾಸಿಮಯ್ಯ ಪುಣ್ಯ ಸ್ತ್ರೀ ದುಗ್ಗಳೆ ಹಡಪದ ಅಪ್ಪಣ್ಣನವರ ಪುಣ್ಯ ಸ್ತ್ರೀ ಲಿಂಗಮ್ಮ ಹೀಗೆ ಉಲ್ಲೇಖ ಮಾಡುವದರಿಂದ ಅವರೂ ವೇಶ್ಯೆರಾಗಿದ್ದಾರೆ ಎಂಬ ಸಂದೇಹ ಬರುತ್ತದೆ

೪ ಹಾದರಕಾಯಕದ ಗಂಗಮ್ಮ ಇದು ಎಷ್ಟು ಸರಿ ?
ಇದು ಹರದ ಕಾಯಕ ಆಗಬೇಕು ಹರದ ಎಂದರೆ ಸಣ್ಣಪುಟ್ಟ ವ್ಯಾಪಾರ

೫ ಅಕ್ಕನಾಗಮ್ಮ ಬಸವಣ್ಣನವರ ಅಕ್ಕ ಅಥವಾ ತಂಗಿ

ಬಸವಣ್ಣನವರ ಅಕ್ಕ ಅಕ್ಕನಾಗಮ್ಮ ಎನ್ನುವುದು ಹಲವು ಶರಣರ ವಚನಗಳನ್ನು ಅಧ್ಯಯನ ಮಾಡಿದ ಮೇಲೆ ತಿಳಿದು ಬಂದಿದೆ

೬ ಅಕ್ಕ ಮಹಾದೇವಿ ಅರೆ ಬೆತ್ತಲೆಯಾಗಿ ಕಲ್ಯಾಣಕ್ಕೆ ಬಂದಳೆ ?

ಸತ್ಯ/ ಅಕ್ಕಮಹಾದೇವಿ ತನ್ನ ವಚನದಲ್ಲಿ ಹೇಳಿದ ಹಾಗೆ ತನ್ನ ಅಂಗ ಶೀತಕ್ಕೆ ಬಿಸಾಟಿದ ಬಟ್ಟೆ ಉಂಟು ಎಂದಿದ್ದಾಳೆ

೭ ಬಸವಣ್ಣನವರು ಹುಟ್ಟಿದ ವರ್ಷ ೧೧೦೫ ರಿಂದ
೧೧೩೧. ಲಿಂಗೈಕ್ಯ ೧೧೬೭ ರಿಂದ ೧೧೯೩

ಸತ್ಯ / ಜನನ ೧೧೩೧
ಲಿಂಗೈಕ್ಯ ೧೧೬೭ ಇತ್ಯರ್ಥವಾಗಬೇಕು

೮. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಹೆಸರಿಗೆ ಬಂದ ಕೊಂಡೆ ಮಂಚಣ್ಣ ಶರಣರ ಬಸವಣ್ಣನವರ ವಿರೋಧಿಯೇ ?

ಕೊಂಡೆ ಮಂಚಣ್ಣ ಶರಣರ ಬಸವಣ್ಣನವರ ಆಪ್ತನಾಗಿದ್ದ ಆತನ ಹೆಂಡತಿ ಲಕ್ಷ್ಮಮ್ಮ ಮಹಾಮನೆಯಲ್ಲಿ ಕೆಲಸ ಮಾಡುತ್ತಿದ್ದಳು ವಚನಕಾರ್ತಿ

೯. ಕಾಯಕ ಮಾಡುವಾಗ ನುಲಿಯ ಚಂದಯ್ಯನ ಲಿಂಗ ನೀರಿನಲ್ಲಿ ಬಿದ್ದು ಅದು ಮುಂದೆ ಲಿಂಗದೇವನಾದನೆ ?

ಇದೊಂದು ಪವಾಡ ಕಟ್ಟು ಕಥೆ

ಶರಣರ ಚರಿತ್ರೆಯಲ್ಲಿ ಇಂತಹ ನೂರಾರು ಪವಾಡ ಕಟ್ಟು ಕಥೆ ಹೇಳುವುದು ಶೂನ್ಯ ಸಂಪಾದನಕಾರರಿಗೆ ಅಗತ್ಯ ಮತ್ತು ಅನಿವಾರ್ಯವಾಗಿತ್ತು.

೧೦ ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇನಾ

ಲಿಂಗಾಯತ ಸ್ವತಂತ್ರ ಧರ್ಮ
ವೀರಶೈವ ಲಿಂಗಾಯತ ಧರ್ಮದ ಒಂದು ಉಪ ಪಂಗಡ

೧೧. ಹಡಪದ ಅಪ್ಪಣ್ಣ ಹಾಗೂ ಸಂಗಮೇಶ್ವರ ಅಪ್ಪಣ್ಣ ಇಬ್ಬರೂ ಬೇರೆ ಬೇರೆ
ಸತ್ಯ. ಇಬ್ಬರೂ ಒಬ್ಬರೇ

ಇಂತಹ ಸೂಕ್ಷ್ಮ ಗಳನ್ನು ಇಂದು ವೈಚಾರಿಕ ನೆಲೆಯಲ್ಲಿ ಚಿಂತಿಸಿ ಇತ್ಯರ್ಥ ಮಾಡ ಬೇಕು. ವಚನ ಸಂಪುಟಗಳ ಪ್ರಕಟಣೆಯ ಆರಂಭದಿಂದ ಇಲ್ಲಿಯವರೆಗೆ ಇಂತಹ ಪ್ರಮಾದ ದೋಷ ಉಳಿದು ಕೊಂಡಿವೆ.

ಡಾ ವೀರಣ್ಣ ರಾಜೂರ ಸರ್ ಮತ್ತು ಇತರ ಸಂಪಾದಕರು ಮತ್ತು ಬಸವ ಸಮಿತಿಯ ಅಧ್ಯಕ್ಷ ಡಾ ಅರವಿಂದ ಜತ್ತಿ ಇವರು ಈ ದಿಶೆಯಲ್ಲಿ ಚಿಂತಿಸಲಿ ಅಗತ್ಯವಾದ ಪರಿವರ್ತನೆ ಬದಲಾವಣೆ ಮಾಡಲು ಕೋರಿಕೆ
__________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ೯೫೫೨೦೦೨೩೩೮

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group