ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

Must Read

 

ಏಸುಕ್ರಿಸ್ತನ ಪ್ರೀತಿ ಬುದ್ಧದೇವನ ಕರುಣೆ
ಮಹಮದನ ಸಹಬಾಳ್ವೆ ಸೋದರತ್ವ
ನಾನಕರ ಸಮಬಾಳು ಶಂಕರರ ಸಮಭಾವ
ಅಳವಡಿಸುಕೋ‌ ನೀನು – ಎಮ್ಮೆತಮ್ಮ

ಶಬ್ಧಾರ್ಥ
ಸಮಬಾಳ್ವೆ = ಸಹಜೀವನ. ಸೋದರತ್ವ = ಸಹೋದರತ್ವ
ಸಮಬಾಳು = ಸಮಾನರಾಗಿ‌ ಜೀವಿಸುವುದು
ಸಮಭಾವ = ಸಮಾನತೆಯ ಮನಸ್ಸು

ತಾತ್ಪರ್ಯ
ಏಸುಕ್ರಿಸ್ತನು ಬಡವ ಬಲ್ಲಿದ ಎನ್ನದೆ ಎಲ್ಲರನ್ನು‌ ಪ್ರೀತಿಸುತ್ತಿದ್ದ.
ಒಬ್ಬ ವೇಶ್ಯೆಯನ್ನು ಜನ ಕಲ್ಲಿನಿಂದ ಹೊಡೆಯುವುದನ್ನು
ನಿಲ್ಲಿಸಿದ. ಆಕೆಯನ್ನು ಆ‌ ವೃತ್ತಿಯನ್ನು‌ ತೊರೆಯುವಂತೆ ಮಾಡ ಅವಳ‌ನ್ನು‌ ನಿಷ್ಕಾಮದಿಂದ ಪ್ರೀತಿಸಿ ಅವಳ‌ ಜೀವನವನ್ನು ಮೇಲ್ಮಟ್ಟಕ್ಕೇರಿಸಿದನು. ಅಂಥ‌ ಪ್ರೀತಿಯಿಂದ ಎಲ್ಲರನ್ನು ಪ್ರೀತಿಸಬೇಕು. ಬುದ್ಧನು ಕ್ರೂರಿಯಾದ ಅಂಗುಲಿಮಾಲನನ್ನು ಕರುಣೆಯಿಂದ ಕಂಡು ಅವನು ಕೊಲೆಮಾಡುವುದನ್ನು ಬಿಡಿಸಿ ತನ್ನ ಶಿಷ್ಯನನ್ನಾಗಿ‌ ಮಾಡಿದನು. ಅಂಥ‌ ಕರುಣೆಯಿಂದ ಜನರ ತಪ್ಪನ್ನು ಕ್ಷಮಿಸಬೇಕು. ಪೈಗಂಬರರು‌ ಸಹಜೀವನ ಮಾಡಿ
ಸಹೋದರರಂತೆ ಭಾವೈಕ್ಯತೆಯಿಂದ ಇರುವಂತೆ ಬೋಧಿಸಿದ.
ಹಾಗೆ ನಾವು ಎಲ್ಲರು ನಮ್ಮರೆಂದು ಭಾವಿಸಬೇಕು.‌

ಗುರುನಾನಕರು ಎಲ್ಲರು ಸಮಾನರಾಗಿ ಬದುಕಬೇಕೆಂದು
ಬೋಧಿಸಿದ.ಹಾಗೆ ನಾವು ಸಮಾಜದಲ್ಲಿ ಬದುಕಿ‌ ಇನ್ಮೊಬ್ಬರಿಗೆ
ಬದುಕಲು ಬಿಡಬೇಕು. ಶಂಕರಾಚಾರ್ಯರು ಎಲ್ಲರೂ ಬ್ರಹ್ಮ
ಸ್ವರೂಪರೆಂದು ಭಾವಿಸಿ ಸಮಾನತೆಯಿಂದ‌ ಕಾಣಬೇಕೆಂದು
ಬೋಧಿಸಿದ ಹಾಗೆ ಎಲ್ಲರನ್ನು‌ ಸಮಾನತೆಯಿಂದ‌ ಕಂಡು
ಗೌರವಿಸಬೇಕು. ಈ ಎಲ್ಲ‌ ಮಹಾತ್ಮರ‌‌ ಉತ್ತಮ ಗುಣಗಳನ್ನು
ಅಳವಡಿಸಿಕೊಂಡು ಜಗತ್ತಿನಲ್ಲಿ‌ ನಾವು ಜೀವಿಸಬೇಕು.

ರಚನೆ ಮತ್ತ ವಿವರಣೆ
ಎನ್.ಶರಣಪ್ಪ‌ ಮೆಟ್ರಿ
ಮೊ: 9449030990

Latest News

ವಿ.ಬಿ.ಎಸ್.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಮೂಡಲಗಿ- ವಿ ಬಿ ಎಸ್ ಎಂ ಶಾಲೆಯಲ್ಲಿ ೭೦ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಅನೇಕ ವಿದ್ಯಾರ್ಥಿಗಳು ರಾಜ್ಯದ ಶ್ರೇಷ್ಠ ವ್ಯಕ್ತಿತ್ವಗಳ...

More Articles Like This

error: Content is protected !!
Join WhatsApp Group