spot_img
spot_img

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

Must Read

- Advertisement -

 

ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ
ಆ ಪ್ರಶ್ನೆಗುತ್ತರವ ಹೀಗೆ ಹೇಳು
ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ
ಎಲ್ಲರವ ನಾನೆನ್ನು‌- ಎಮ್ಮೆತಮ್ಮ

ಶಬ್ಧಾರ್ಥ
ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು

- Advertisement -

ತಾತ್ಪರ್ಯ
ಜನಗಳು ನಿನ್ನ ಕುಲ‌ ಯಾವುದು? ಜಾತಿ ಯಾವುದು ? ಮತ ಯಾವುದು? ಪಂಥ ಯಾವುದು‌? ಧರ್ಮ ಯಾವುದು‌ ? ಎಂದು ಕೇಳಿದರೆ ನಾನಿಂಥ ಕುಲಜಾತಿಯವನು, ಮತಪಂಥದವನು, ಧರ್ಮದವನು ಎಂದು ಹೇಳಬೇಡ. ನಾನು‌ ಏಸುಕ್ರಿಸ್ತನಿಗೆ ಸೇರಿದವನು, ಕೃಷ್ಣನಿಗೆ ಸೇರಿದವನು, ಬುದ್ಧನಿಗೆ ಸೇರಿದವನು, ಬಸವಣ್ಣನಿಗೆ ಸೇರಿದವನು ಎಂದು ಹೇಳಬೇಕು. ಹುಟ್ಟಿನಿಂದ ಕುಲಜಾತಿ ಬರುವುದಿಲ್ಲ‌. ನಾವು ಮಾಡುವ ಕಾಯಕದಿಂದ ಕುಲಜಾತಿಗಳು ಬರುತ್ತವೆ. ಹಾಗೆ ಹುಟ್ಟಿನಿಂದ‌ ಮತಪಂಥ ಧರ್ಮಗಳು ಬರುವುದಿಲ್ಲ. ನಾವು ಆಚರಿಸುವ ಮತಪಂಥ ಧರ್ಮಗಳಿಂದ ಬರುತ್ತವೆ. ಆದರೆ ನಾವು‌ ವಿಶ್ವಮಾನವರಾಗಿ ವಿಶ್ವಕುಟುಂಬಿಗಾಳಾಗಿ ಬದಕಬೇಕಾದರೆ ಕ್ರಿಸ್ತ, ಕೃಷ್ಣ, ಬುದ್ಧ, ಬಸವ ಮುಂತಾದ ಎಲ್ಲ‌ ಮಹಾತ್ಮರು ನಮ್ಮವರೆಂದು ಗೌರವಿಸಬೇಕು. ಅವರು ಎಲ್ಲ‌ಮಾನವರಿಗಾಗಿ‌ ತತ್ತ್ವಗಳನ್ನು ಬೋಧಿಸಿದ್ದಾರೆ. ಜಗತ್ತಿನಲ್ಲಿ‌ ಬಂದ ಮೇಲೆ ಸಂಕುಚಿತ ಭಾವನೆ
ಬಿಟ್ಟು ವಿಶಾಲ ಮನದವನಾಗಬೇಕು. ನಾನು‌ ಈ ಜಗತ್ತಿಗೆ
ಸೇರಿದವನು ಎಂದು ಭಾವಿಸಿ ಸಹನೆ, ಸಹಕಾರ, ಸೌಹಾರ್ದ,
ಸಹಬಾಳ್ವೆ, ಸಮಾನತೆ, ಸಹೋದರತ್ವದಿಂದ ಬದುಕಿ ಬಾಳಿ
ಎಲ್ಲರೊಳಗೊಂದಾಗಬೇಕು. ಎಲ್ಲ‌ ಜನರನ್ನು ಪ್ರೀತಿಸಿ
ಸುಖಶಾಂತಿಸಂತೋಷದಿಂದ ಬಾಳಬೇಕು‌ ಮತ್ತು‌ ಇತರರನ್ನು
ಸುಖಶಾಂತಿನೆಮ್ಮದಿಯಿಂದ ಬಾಳಲು ಬಿಡಬೇಕು.

ರಚನೆ ಮತ್ತ ವಿವರಣೆ
ಎನ್.ಶರಣಪ್ಪ‌ ಮೆಟ್ರಿ
ಮೊ: 9449030990

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಚನ ವಿಶ್ಲೇಷಣೆ : ಗರ್ವದಿಂದ ಮಾಡುವ ಭಕ್ತಿ

*ಗರ್ವದಿಂದ ಮಾಡುವ ಭಕ್ತಿ* ------------------------------------ ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು; ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ; ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ; ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಡೆ, ಮಾರಯ್ಯಪ್ರಿಯ ಅಮರೇಶ್ವರಲಿಂಗವ ಮುಟ್ಟದ...
- Advertisement -

More Articles Like This

- Advertisement -
close
error: Content is protected !!
Join WhatsApp Group