ದಿನಕ್ಕೊಂದು‌ ಎಮ್ಮೆತಮ್ಮನ‌ ಕಗ್ಗದ ತಾತ್ಪರ್ಯ

0
56

 

ಕಾನನದಿ ಬೆಳೆದಿರುವ ಗಿಳಿಯಮರಿಯನು ತಂದು
ಅರಮನೆಯ ಪಂಜರದಿ ಬಂಧಿಸಿಟ್ಟು
ತನಿವಣ್ಣು ತಿನಿಸಿದರು ಕಾನನವ ನೆನೆವಂತೆ.
ನೆನೆ ನಿನ್ನ ಮೂಲವನು – ಎಮ್ಮೆತಮ್ಮ

ಶಬ್ಧಾರ್ಥ
ಕಾನನ = ಅರಣ್ಯ. ತನಿವಣ್ಣು‌ = ಸಿಹಿಹಣ್ಣು

ತಾತ್ಪರ್ಯ
ಅರಣ್ಯದಲಿ ಹುಟ್ಟಿ ಬೆಳೆದ ಗಿಳಿಮರಿಯನ್ನು ಹಿಡಿದುತಂದು
ಪಂಜರದಲ್ಲಿ ಬಂಧಿಸಿ ಸವಿಯಾದ‌‌ ಹಣ್ಣುಗಳನ್ನು‌ ಇಟ್ಟರು
ಅದು ತಿ‌ನ್ನುವುದಿಲ್ಲ. ಏಕೆಂದರೆ‌ ಅದು‌ ಅರಣ್ಯದಲ್ಲಿ ಸ್ವಚ್ಛಂದ
ಬೆಳೆದು‌ ಹಾರಾಡಿ‌ ಸಂತೋಷವಾಗಿತ್ತು. ಈಗ‌ ಅದರ‌ ಸ್ವಾತಂತ್ರ
ಹರಣವಾಗಿಹೋಗಿದೆ. ಅದಕ್ಕಾಗಿ ಅದು‌‌‌ ಹಣ್ಣು ತಿನ್ನುವುದು‌ ಬಿಟ್ಟು ತನ್ನ ಅರಣ್ಯವನ್ನು‌ ದಿನನಿತ್ಯ‌‌ ನೆನೆಯುತ್ತಿದೆ. ಸಿದ್ದಣ್ಷ
ಮಸಳಿಯವರು‌ ಬರೆದ‌ ಪಂಜರದ ಪಕ್ಷಿ ಕವನ‌‌‌ ನೆನಪಾಗುತ್ತದೆ
ನಾನು ಪಂಜರದ ಪಕ್ಷಿ ಇನ್ನು ನನಗಾರು ಗತಿ⁣|ಕೇಳ ಬಯಸುವಿಯೇನು ನನ್ನ ಕಥೆಯ⁣|ಯಾರ ಸಂತೋಷಕ್ಕೆ ಹಿಡಿದು ತಂದರು ನನ್ನ⁣|ಅರಿಯಬಲ್ಲೆಯ ನನ್ನ ಒಡಲ ವ್ಯಥೆಯ

⁣ಅದನ್ನು‌ ತಂದು ಅರಮನೆಯಲ್ಲಿಟ್ಟರು‌‌ ಅದಕ್ಕೆ ಸಂತಸವಿಲ್ಲ.
ಹಾಗೆ ಈ ಜಗವೆಂಬ ಅರಮನೆಯ‌ಲ್ಲಿ‌ ತನುವೆಂಬ ಪಂಜರದಲ್ಲಿ ಸ್ವಾತಂತ್ರವಾಗಿ ಆನಂದವಾಗಿದ್ದ ಜೀವಾತ್ಮವೆಂಬ ಗಿಳಿ ಬಂಧಿಸಲ್ಪಟ್ಟಿದೆ. ಅದು ತನ್ನ ಮೂಲವಾದ ಪರಮಾತ್ಮನನ್ನು ನೆನೆಯುತ್ತಲಿದೆ. ಈ ಭೂಮಿಯ‌ ಭೋಗಭಾಗ್ಯವೆಂಬ‌ ಹಣ್ಣು ತಿನ್ನದೆ ವೈರಾಗ್ಯ ತಾಳಿ ಬಿಡುಗಡೆಗಾಗಿ ಕಾಯುತ್ತಲಿದೆ. ತನ್ನ ಸ್ವಾತಂತ್ರ ಸಂತೋಷವನ್ನು‌ ಪುನಃ‌ ಪಡೆಯಲು ಯತ್ನಿಸುತ್ತಿದೆ.
ಆದಕಾರಣ ನಾವು ನಮ್ಮ‌ಮೂಲವಾದ ಪರಮಾತ್ಮನನ್ನು‌
ನೆನೆದು ಬಿಡುಗಡೆಗಾಗಿ‌ ಯತ್ನಿಸಬೇಕಾಗಿದೆ.

ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಗಂಗಾವತಿ

LEAVE A REPLY

Please enter your comment!
Please enter your name here