spot_img
spot_img

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

Must Read

- Advertisement -

 

ಅರಮನೆಗೆ ಸಮನಾದ ಮನೆಯ ಕಟ್ಟಿದರೇನು ?
ಮಲಗಿ ನಿದ್ರಿಸುವುದರೆಮಂಚದಲ್ಲಿ
ಧನಧಾನ್ಯಸಂಪತ್ತು ಎಷ್ಟು ಗಳಿಸಿದರೇನು ?
ತಿನ್ನುವುದು ಹಿಡಿಯಕ್ಕಿ – ಎಮ್ಮೆತಮ್ಮ

ಶಬ್ಧಾರ್ಥ
ಅರೆಮಂಚ = ಅರ್ಧ ಮಂಚ

- Advertisement -

ತಾತ್ಪರ್ಯ
ಅರಮನೆಯ ತರಹ ದೊಡ್ಡ ಮನೆ ಕಟ್ಟುವುದರಿಂದ ಯಾವ
ಪುರುಷಾರ್ಥವಿದೆ. ದುಬಾರಿಯ ಸಾಗುವಾನಿಯ ಮಂಚ, ಇದ್ದರೇನು ನಿದ್ದೆ ಬರಿಸುವ ಶಕ್ತಿಯಿಲ್ಲ. ಮನಸ್ಸು ನಿಶ್ಚಿಂತವಾಗಿದ್ದರೆ ಸಂತೆಯ ಗಲಾಟೆಯಲ್ಲಿ ನಿದ್ದೆ ಬರುತ್ತದೆ. ದೊಡ್ಡ ಮಂಚ ಇದ್ದರು ಮಲಗುವುದು ಅರ್ಧ ಮಂಚದಲ್ಲಿ ಮಾತ್ರ.ಹಾಗೆ ಧನಕನಕ‌ ದವಸ ಧಾನ್ಯ ಮನೆಯಲ್ಲಿ ಎಷ್ಟಿದ್ದರು‌ ಉಣ್ಣುವುದು ಹಿಡಿ ಅಕ್ಕಿಯ ಅನ್ನ ಮಾತ್ರ. ಒಂದು ಗಾದೆ ಮಾತು ಇದೆ.‌ ಮನೆ ಚಿಕ್ಕದಾದರು ಮನಸ್ಸು ದೊಡ್ಡದಾಗಿ ಇರಬೇಕು . ಮನಸ್ಸು ಸಂಕುಚಿತವಾಗಿರದೆ ವಿಶಾಲವಾಗಿ ಇರಬೇಕು.ಈ‌ ಕಗ್ಗ ಆಡಂಬರ ಜೀವನಕ್ಕಿಂತ ಸರಳ ಸುಂದರ ಜೀವನ‌ ನಡೆಸಲು ಹೇಳುತ್ತದೆ. ಗಾಂಧೀಜಿ ನುಡಿದಂತೆ Simple living and high thinking (ಸರಳ ಜೀವನ, ಉನ್ನತ ವಿಚಾರ) ಇರಬೇಕು. ಎಷ್ಟೇ ಶ್ರೀಮಂತಿಕೆಯಿದ್ದರು ಶಾಂತಿ ಕೊಡುವುದಿಲ್ಲ. ಅಂತರಂಗದ ಶ್ರೀಮಂತಿಕೆಯಿಂದ‌ ಶಾಂತಿ ಸಮಾಧಾನ ದೊರಕುವುದು. ಆದಕಾರಣ Enjoyment (ಸಂತೋಷ) ಮತ್ತು Entertailment (ಮನೋರಂಜನೆ)ಗಿಂತ Enlightment (ಆತ್ಮಜ್ಞಾನ)ದ ಕಡೆಗೆ ಗಮನ‌ಕೊಡಬೇಕು. Spirituality is mother of all sciences (ಅಧ್ಯಾತ್ಮ ಎಲ್ಲ‌ ಶಾಸ್ತ್ರಗಳ ಮಾತೆ)

ರಚನೆ ಮತ್ತು ವಿವರಣೆ                                  ‌‌ ‌‌‌ ಎನ್.ಶರಣಪ್ಪ‌ ಮೆಟ್ರಿ
ಮೊ. 9449030990

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group