spot_img
spot_img

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

Must Read

spot_img
- Advertisement -

 

ಮಂದಿರ ಮಸೀದಿಗಳು ಗುಡಿಗುರುದ್ವಾರಗಳು
ಮಠಬಸದಿಚರ್ಚುಚೈತ್ಯಾಲಯಗಳು
ಪ್ರತ್ಯೇಕಗೊಳಿಸುವವು ವೈಷಮ್ಯ ಬೆಳೆಸುವವು
ಬಿಟ್ಟು ಬಾ ಹೊರಗೆ ನೀ – ಎಮ್ಮೆತಮ್ಮ

ಶಬ್ಧಾರ್ಥ
ವೈಷಮ್ಯ = ದ್ವೇಷ

- Advertisement -

ತಾತ್ಪರ್ಯ
ಜಗತ್ತಿನ‌ ತುಂಬ ಅವರವರ ಧರ್ಮದಾಚರಣೆಗಾಗಿ ಸಾಕಷ್ಟು
ಮಂದಿರಗಳು, ಮಸೀದಿಗಳು, ಗುಡಿಗಳು, ಗುರುದ್ವಾರಗಳು,
ಮಠಗಳು, ಬಸದಿಗಳು, ಚರ್ಚುಗಳು, ಚೈತ್ಯಾಲಯಗಳು
ಇದ್ದಾವೆ. ಮಠ ಮಂದಿರ ಗುಡಿಗಳಲ್ಲಿ ಹಿಂದುಗಳು ಪೂಜೆ
ಸಲ್ಲಿಸುತ್ತಾರೆ. ಮಸೀದಿಗಳಲ್ಲಿ ಮುಸಲ್ಮಾನರು ನಮಾಜು
ಮಾಡುತ್ತಾರೆ. ಗುರುದ್ವಾರಗಳಲ್ಲಿ ಸಿಖ್ಖರು ಗುರುಗ್ರಂಥ ಪಠಣ
ಮಾಡುತ್ತಾರೆ. ಬಸದಿಗಳಲ್ಲಿ‌ ಜೈನರು ಜಿನನ ಪೂಜಿಸುತ್ತಾರೆ.
ಚರ್ಚುಗಳಲ್ಲಿ ಕ್ರೈಸ್ತರು ಪ್ರಾರ್ಥನೆ‌ ಸಲ್ಲಿಸುತ್ತಾರೆ ಮತ್ತು ಚೈತ್ಯಾಲಯಗಳಲ್ಲಿ‌ ಬೌದ್ಧರು‌ ಧ್ಯಾನ‌ಮಾಡುತ್ತಾರೆ. ಹೀಗೆ
ಅವರವರ ಧರ್ಮಾಚರಣೆಯನಷ್ಟೆ ಮಾಡುತ್ತಾರೆ ಮತ್ತು
ಜನರಿಗೆ ಅದನ್ನೆ‌ ಬೋಧಿಸುತ್ತಾರೆ. ಎಲ್ಲ ಧರ್ಮದ‌ ಮೂಲ
ಧ್ಯಾನದ ಬಗ್ಗೆ ಹೆಚ್ಚಿನ ಆಸಕ್ತಿ‌ ತೋರುವುದಿಲ್ಲ. ಬೇರೆ ಧರ್ಮಗಳನ್ನು ಗೌರವಿಸುವುದನ್ನು ಕಲಿಸುವುದಿಲ್ಲ.
ಪರಧರ್ಮ ಸಹಿಷ್ಣುತೆ ಬರಬೇಕಾದರೆ ಅಂಥ ಧರ್ಮದ
ಕೇಂದ್ರಗಳಿಂದ ಹೊರಬಂದು ಸ್ವತಂತ್ರವಾಗಿ ಚಿಂತಿಸಬೇಕು.
ಏಕೆಂದರೆ ಆ ಕೇಂದ್ರಗಳು ಸಂಕುಚಿತ‌ ಭಾವನೆಗಳನ್ನು
ಬೆಳೆಸುತ್ತವೆ. ಆದಕಾರಣ ಮನಸ್ಸು ವಿಶಾಲ‌ ಆಗಬೇಕಾದರೆ
ಪ್ರತ್ಯೇಕಗೊಳಿಸುವ ಅವುಗಳಿಂದ ಹೊರಬರಬೇಕು.ದ್ವೇಷ
ವೈಷಮ್ಯ ಬೆಳೆಸುವ ಯಾವುದೇ ಧರ್ಮವಿರಲಿ‌ ಅದನ್ನು ಬಿಟ್ಟು ಮಾನವೀಯ ಮೌಲ್ಯಗಳನ್ನು‌ ಎತ್ತಿಹಿಡಿಯಬೇಕು.‌

ರಚನೆ ಮತ್ತು ವಿವರಣೆ
ಎನ್ .ಶರಣಪ್ಪ‌ ಮೆಟ್ರಿ
ಮೊ: 9449030990

- Advertisement -
- Advertisement -

Latest News

ಕವನ : ಜೀವನ ಸತ್ಯ

 ಜೀವನ ಸತ್ಯ ಬೇವಿನ ಬೀಜವನ್ನು ನೆಟ್ಟರೆ ಬೇವು ಮಾತ್ರ ಬೆಳೆಯುತ್ತದೆ, ಸುಳ್ಳಿನ ನೆರಳಿನಲ್ಲಿ ಸತ್ಯ ಬೆಳೆಯುವುದಿಲ್ಲ. ಎಳ್ಳು ಬಿತ್ತಿದರೆ ಸಾಸಿವೆ ಬೆಳೆಯುವುದಿಲ್ಲ, ಕರ್ಮವೇ ಫಲ ಎಂದು ಜಗತ್ತು ಅರಿಯುವುದಿಲ್ಲ. ಕಲ್ಲಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group