ದೇವತಾ ಕಾರ್ಯಗಳಲ್ಲಿ ಉಪಯೋಗಿಸುವ ಕಳಶ ಎನ್ನುವುದರ ಅರ್ಥ

Must Read

ಒಂದು ಪೂಜೆ ಅಥವಾ ವ್ರತವನ್ನು ಮಾಡುವ ಸಂಧರ್ಭದಲ್ಲಿ, ಇಡೀ ಭೂಮಂಡಲವನ್ನು ಪ್ರಕೃತಿ ಸಹಿತ ಜೀವ ತತ್ವಗಳನ್ನು ಸಂಕೇತಿಸುವ ಪ್ರತೀಕವೇ ಕಲಶ.

ಕಲಶವನ್ನು ಮಣ್ಣಿನಿಂದಾಗಲಿ, ಬೆಳ್ಳಿ – ಹಿತ್ತಾಳೆ – ಪಂಚಲೋಹ – ಚಿನ್ನದಿಂದಾಗಲಿ ಮಾಡಿರುವ ಕುಂಭದಾಕಾರದ ಪಾತ್ರೆಯು ಭೂಮಂಡಲವನ್ನು, ಅದರೊಳಗಿನ ನೀರು ಜೀವಸತ್ವವನ್ನು, ಅದರ ಮೇಲಿಡುವ ಮಾವಿನಸೊಪ್ಪು ಅಥವಾ ವಿಳ್ಳೆದೆಲೆ – ತೆಂಗಿನಕಾಯಿ, ಪ್ರಕೃತಿಯನ್ನು, ಅದಕ್ಕೆ ಮಾಡುವ ಪೂಜೆಗಳು ಜನಸಾಮಾನ್ಯರನ್ನು ಇಹಜೀವನದಲ್ಲಿ ಪರತತ್ವಗಳನ್ನು ಬೋಧಿಸುವ ಪ್ರತೀಕವಾಗಿರುತ್ತವೆ.

ನೋಡಿದಾಕ್ಷಣ ಪೂಜ್ಯ ಭಾವನೆಯನ್ನು ಹೊರಹೊಮ್ಮಿಸುವ ಕಳಶವನ್ನು ದೈವ ಸಮಾನವೆಂದು ಪರಿಗಣಿಸಲ್ಪಡುತ್ತದೆ. ಇನ್ನು ಅದರಲ್ಲಿ ಹಾಕಲ್ಪಡುವ ಅಕ್ಕಿ ಯನ್ನು ದೇವರ ಪ್ರಸಾದವೆಂದೂ, ಗೃಹಗಳಲ್ಲಿ ಅದು ಅಕ್ಷಯವಾಗುವ ಸಂಕೇತವನ್ನು ತೋರಿಸುತ್ತದೆ.

ಕೆಲವರು ಒಣಹಣ್ಣುಗಳನ್ನು, ಕಲ್ಲುಸಕ್ಕರೆಯನ್ನು ಕಳಶದೊಳಗಿನ ಜಲದಲ್ಲಿ ಹಾಕಿರುತ್ತಾರೆ. ಪೂಜೆಯ ನಂತರ ಇದು ಅತ್ಯಂತ ಪೌಷ್ಠಿಕಾಂಶದ ಮೂಲವಾಗಿ ಪರಿವರ್ತನೆಗೊಂಡು ಪ್ರಸಾದ ರೂಪದಲ್ಲಿ ಭಕ್ತರಿಗೆ ಲಭ್ಯವಾಗುತ್ತದೆ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group