spot_img
spot_img

ಕಣಚೂರು ಆಯುರ್ವೇದ ಆಸ್ಪತ್ರೆಯ ವತಿಯಂದ ವೈದ್ಯಕೀಯ ಶಿಬಿರ

Must Read

spot_img
- Advertisement -

ಮಂಗಳೂರು – ಮಂಗಳೂರು ದೇರಳ‌ಕಟ್ಟೆ ಬಳಿಯ ನಾಟೆಕಲ್ಲಿನಲ್ಲಿರುವ ಕಣಚೂರು ಆಯುರ್ವೇದ ಆಸ್ಪತ್ರೆಯ ವತಿಯಿಂದ ಸ್ಥಳೀಯ ಬೆಳ್ಮ ಗ್ರಾಮದಲ್ಲಿರುವ ಸೇವಾಭಾವ ಚಾರಿಟೇಬಲ್ ಟ್ರಸ್ಟಿನ ಸೇವಾಶ್ರಮದಲ್ಲಿರುವ ವೃದ್ಧ ಆಶ್ರಮ ವಾಸಿಗಳಿಗೆ ಉಚಿತವಾದ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯನ್ನು ದಿನಾಂಕ 24 ಅಕ್ಟೋಬರ 2024 ರಂದು ನಡೆಸಲಾಯಿತು.

ಔಷಧಿ,ಶಸ್ತ್ರ ಕರ್ಮ, ಸ್ತ್ರೀರೋಗ ,ಯೋಗ ಮತ್ತಿತರ ಎಂಟು ವಿಭಾಗಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ನುರಿತ ವೈದ್ಯರುಗಳಾದ ಡಾ ಸೌಮ್ಯ ಕುಮಾರಿ, ಡಾ ಅತಿರಾ ರವಿ, ಡಾ.ಚರಣ್ ಎ. ಮತ್ತಿತರರೂ ಸುಭಿ ರಾಜ್,ಪ್ರೀತಿ ಶ್ರಾವ್ಯಾ ಮತ್ತಿತರ ಪರಿಚಾರಿಕೆಯರನ್ನೊಳಗೊಂಡಂತೆ ವೈದ್ಯಕೀಯ ನಿರ್ದೇಶಕ ಡಾ ಸುರೇಶ್ ನೆಗಳಗುಳಿ ಹಾಗೂ ಮುಖ್ಯ ವೈದ್ಯಾಧಿಕಾರಿ ಡಾ ಕಾರ್ತಿಕೇಯ ಪ್ರಸಾದ್ ಈ ಶಿಬಿರದಲ್ಲಿ ಭಾಗವಹಿಸಿದ್ದರು.

ಆಶ್ರಮವಾಸಿಗಳನ್ನು ಸಂಪೂರ್ಣ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡಲಾಯಿತು.ಅಗತ್ಯ ಉಳ್ಳವರಿಗೆ ಆಸ್ಪತ್ರೆಯಲ್ಲಿ ಉಚಿತ ಒಳರೋಗಿ ವ್ಯವಸ್ಥೆಯನ್ನೂ ಒದಗಿಸಲಾಯಿತು.

- Advertisement -

ಆಶ್ರಮದ ಮುಖ್ಯ ನಿರ್ವಹಣಾಧಿಕಾರಿ  ಬಾಲಕೃಷ್ಣ ಅವರು ಸಕಲ ಸಹಕಾರ ಸಹಿತ ಸಾರಥ್ಯ ವಹಿಸಿದ್ದರು.

 ಡಾ. ಸುರೇಶ ನೆಗಳಗುಳಿ
ಸುಹಾಸ
ಬಜಾಲ್ ಪಕ್ಕಲಡ್ಕ ಮಂಗಳೂರು ೫೭೫೦೦೯
೯೪೪೮೨೧೬೬೭೪

- Advertisement -

LEAVE A REPLY

Please enter your comment!
Please enter your name here

- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group