ದೇವರ ಧ್ಯಾನ ಶಾಂತಿ ನೀಡುತ್ತದೆ- ಸರ್ವೋತ್ತಮ ಜಾರಕಿಹೊಳಿ

Must Read

ಮೂಡಲಗಿ: ‘ದೇವಸ್ಥಾನಗಳ ಸ್ಥಾಪನೆ ಹಾಗೂ ದೇವರ ಧ್ಯಾನ, ಪ್ರಾರ್ಥನೆಗಳು ಮನುಷ್ಯರಲ್ಲಿ ಧನಾತ್ಮಕ ಅಂಶಗಳನ್ನು ಪ್ರಾಪ್ತ ಮಾಡಿ ಶಾಂತಿ, ನೆಮ್ಮದಿ ದೊರೆಯುತ್ತದೆ’ ಎಂದು ಗೋಕಾಕದ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಇಲ್ಲಿಯ ಗಂಗಾನಗರದ ಹನುಮಾನ ದೇವಸ್ಥಾನ ನಿರ್ಮಾಣ ಹಾಗೂ ಮೂರ್ತಿ ಪ್ರತಿಷ್ಠಾಪನೆಯ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪ್ರತಿ ಊರಿನಲ್ಲಿ ಹನುಮಾನ, ಆಂಜನೇಯ, ಹಣಮಂತ ಹೆಸರಿನಲ್ಲಿ ದೇವಾಲಯಗಳಿದ್ದು, ಯಾವುದೇ ಜಾತಿ, ಧರ್ಮ, ಮೇಲು, ಕೀಳು ಎನ್ನದೆ ಎಲ್ಲ ಜನರು ಹನುಮಾನ ದೇವರ ಆರಾಧಕರಿರುವುದು ವಿಶೇಷ ಎಂದರು.

ಗಂಗಾನಗರದಲ್ಲಿರುವ ಸರ್ವ ಧರ್ಮಿಯರು ಸೇರಿ ಸುಂದರವಾದ ಹನುಮಾನ ದೇವರ ದೇವಸ್ಥಾನವನ್ನು ನಿರ್ಮಿಸಿದ್ದು ಶ್ಲಾಘನೀಯವಾಗಿದೆ ಎಂದರು. 

ಸರ್ವೋತ್ತಮ ಜಾರಕಿಹೊಳಿ ಅವರನ್ನು ಹಾಗೂ ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ನೀಡಿದ ಭಕ್ತರನ್ನು ಸಮಾರಂಭದಲ್ಲಿ ದೇವಸ್ಥಾನ ಸಮಿತಿಯವರು ಸನ್ಮಾನಿಸಿದರು.

ರೇವಪ್ಪ ದಳವಾಯಿ, ಮಹಾದೇವ ಶೆಕ್ಕಿ, ಚಂದ್ರು ದರೂರ, ಶಿವು ಕುರಬಗಟ್ಟಿ, ಅಣ್ಣವ್ವ ಕಾಂಬಳೆ, ಗಿರೀಶ ನಾಝರೆ, ಮಾರುತಿ ಮುದೇನವರ, ಲಕ್ಕಪ್ಪ ಹೊಸಮನಿ, ಬದ್ರು ಪ್ಯಾಟಿ, ವಿಲಾಸ ನಾಗಣ್ಣವರ, ನಂಜುಂಡಿ ಸರ್ವಿ, ರೇವಪ್ಪ ಕುರುಬಗಟ್ಟಿ, ಈರಪ್ಪ ಢವಳೇಶ್ವರ, ಸುಭಾಷ ಕುರಬಗಟ್ಟಿ ಸೇರಿದಂತೆ ಗಂಗಾನಗರದ ಅನೇಕ ಭಕ್ತರು ಭಾಗವಹಿಸಿದ್ದರು.

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group