ಮೇಘಮೈತ್ರಿ ೫ ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ ೬ ರಂದು

0
389

ಬಾಗಲಕೋಟೆ – ಬಾಗಲಕೋಟ ಜಿಲ್ಲೆಯ ಕಮತಗಿಯ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ(ರಿ)ದ ವತಿಯಿಂದ ಪ್ರತಿ ವರ್ಷ ನಡೆಯುವಂತೆ ಈ ಬಾರಿ ಮೇಘಮೈತ್ರಿ ೫ ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತಿಗಳು ಹಾಗೂ ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕರಾದ ಡಾ.ಸತೀಶಕುಮಾರ್ ಹೊಸಮನಿಯವರ ಸರ್ವಾಧ್ಯಕ್ಷತೆಯಲ್ಲಿ ಬಾಗಲಕೋಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ದಿನಾಂಕ:06-03-2022ರ ಭಾನುವಾರ ನಡೆಯಲಿದೆ.

ಈ ಸಮ್ಮೇಳನದಲ್ಲಿ ಕಲಾತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ, ಧ್ವಜಾರೋಹಣ,ಪುಸ್ತಕಗಳ ಬಿಡುಗಡೆ,ಗಜಲ್ ಗೋಷ್ಠಿ,ವಿಚಾರ ಗೋಷ್ಠಿ, ಸಂವಾದ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ “ಮೇಘಮೈತ್ರಿ ಪುರಸ್ಕಾರ”, “ಮೇಘಮೈತ್ರಿ ಬಾಲ/ಯುವ ಪುರಸ್ಕಾರ”, “ಮೇಘಮೈತ್ರಿ ಪುಸ್ತಕ ಪ್ರಶಸ್ತಿ” ಹಾಗೂ ಸಮಾರೋಪ ಸಮಾರಂಭಗಳು ನಡೆಯಲಿವೆ.

ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ತಮ್ಮದೆ ಆದಂತಹ ಸೇವೆ ಸಲ್ಲಿಸಿರುವ ೩೦ ಜನರಿಗೆ ಗೌರವ ಸನ್ಮಾನ ಕಾರ್ಯಕ್ರಮವು ನೆರವೆರಲಿದೆ.

ಈ ಸಮ್ಮೇಳನಕ್ಕೆ ರಾಜ್ಯದ ವಿವಿಧ ಜಿಲ್ಲೆಯಿಂದ ಸಾಧಕರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು, ಶಿಕ್ಷಕರು, ಕಲಾವಿದರು, ಕನ್ನಡ ಅಭಿಮಾನಿಗಳು, ಮಾಧ್ಯಮ ಮಿತ್ರರು, ಆರಕ್ಷಕ ಮಿತ್ರರು ಇನ್ನೂ ಹಲವಾರು ಸ್ನೇಹಿತರು ಆಗಮಿಸುತ್ತಿದ್ದು ಎಲ್ಲರೂ ಸೇರಿ ಈ ಕನ್ನಡ ರಥವನ್ನು ಎಳೆಯೋಣ ಎಲ್ಲರೂ ತನು-ಮನ-ಧನದಿಂದ ಸಹಾಯ ಸಹಕಾರ ನೀಡಿ ಸಮ್ಮೇಳನವನ್ನು ಯಶಸ್ವಿ ಮಾಡುಬೇಕು ಎಂದು ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಎಮ್. ರಮೇಶ ಕಮತಗಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಸಮ್ಮೇಳನದಲ್ಲಿ ಮೇಲೆ ಪ್ರಕಟಿಸಿದಂತೆ ನಡೆಯುವ ವಿವಿಧ ಕಾರ್ಯಕ್ರಮಗಳ ಪೈಕಿ ಆಸಕ್ತರು ಸಂಪರ್ಕಿಸಬೇಕು ಎಂದೂ ಅವರು ಕೋರಿದ್ದಾರೆ. ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ ೯೬೮೬೭೮೨೭೭೪ (9686782774)