Homeಸುದ್ದಿಗಳುಸಂತಶ್ರೀ ಆಯ್ ಎಸ್ ಮಂಟೂರ ಮಹಾರಾಜರ ಸ್ಮರಣೋತ್ಸವ ದಿ . 7 ರಂದು

ಸಂತಶ್ರೀ ಆಯ್ ಎಸ್ ಮಂಟೂರ ಮಹಾರಾಜರ ಸ್ಮರಣೋತ್ಸವ ದಿ . 7 ರಂದು

spot_img

ಮುಧೋಳ – ಹರಿಪಂಥದ ಹರಿಕಾರ.ಸಮಾಜ ಸೇವಾಧುರೀಣ. ಸುಧೀಘ೯ಕಾಲ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಮೋಘಸೇವೆ ನೀಡಿ ಬಡವರ ಕಷ್ಟಗಳಲ್ಲಿ ಪಾಲ್ಗೊಂಡು ಬಡವರ ಬಂಧುವೆನಿಸಿದ ತಾಲೂಕಿನ ಮುಗಳಖೋಡದ ಸಂತಶ್ರೀ ಆಯ್ ಎಸ್ ಮಂಟೂರ ಮಹಾರಾಜರ 11ನೇ ವಷ೯ದ”ಸ್ಮರಣೋತ್ಸವ” ಸಂಸ್ಕೃತಿ ಕಾರ್ಯಕ್ರಮವು ಮಂಗಳವಾರ ದಿ.7ರಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಸಂಜೆ 7.30 ಕ್ಕೆ ಜರುಗಲಿದೆ ಎಂದು ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಮುಖಂಡರಾದ ಎಲ್ ಶ್ರೀನಿವಾಸ ಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅವರು ಪತ್ರಿಕೆಯೊಂದಿಗೆ ಮಾತನಾಡಿ ಇದೆ ಸಂದರ್ಭದಲ್ಲಿ ಲೋಕಮಾತೆ “ದೇವಿ” ಪುರಾಣದ ಮಂಗಲೋತ್ಸವ ಹಾಗೂ ವಾಲ್ಮೀಕಿ ಮಹರ್ಷಿಗಳ ಜಯಂತ್ಯುತ್ಸವ ಆಚರಣೆಯು ಸಂಭ್ರಮದಿಂದ ಜರುಗುವುದು.

ಭಜನೆ ಓಂಕಾರ ಸತ್ಕಾರ ಮುಂತಾದ ಕಾರ್ಯಕ್ರಮಗಳು ಪರಮಪೂಜ್ಯ ಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ನಡೆಯಲಿವೆ ಎಂದು ಶ್ರೀನಿವಾಸ ಪ್ರಸಾದ ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group