Homeಸುದ್ದಿಗಳುಹೆಬ್ಬಳ್ಳಿಯ ಲಿಂಗೈಕ್ಯ ಯೋಗಾನಂದ ಸ್ವಾಮೀಜಿ ಪುಣ್ಯಾರಾಧನೆ

ಹೆಬ್ಬಳ್ಳಿಯ ಲಿಂಗೈಕ್ಯ ಯೋಗಾನಂದ ಸ್ವಾಮೀಜಿ ಪುಣ್ಯಾರಾಧನೆ

ಧಾರವಾಡ : ಇತ್ತೀಚೆಗೆ ಲಿಂಗೈಕ್ಯರಾದ ತಾಲೂಕಿನ ಹೆಬ್ಬಳ್ಳಿ ಯೋಗಾನಂದ ಆಶ್ರಮದ ಶ್ರೀಯೋಗಾನಂದ ಸ್ವಾಮೀಜಿ ಪುಣ್ಯಾರಾಧನೆ ಶನಿವಾರ ಜರುಗಿತು.

ಪ್ರಾತಃಕಾಲ ಲಿಂಗೈಕ್ಯ ಶ್ರೀಗಳ ಯೋಗಸಮಾಧಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾಲಂಕಾರ ಮಹಾಪೂಜೆ ಜರುಗಿತು.

ನುಡಿ ನಮನ : ನಂತರ ಜರುಗಿದ ಧರ್ಮ ಸಮಾರಂಭದಲ್ಲಿ ಹೆಬ್ಬಳ್ಳಿ ಬ್ರಹ್ಮಚೈತನ್ಯಾಶ್ರಮದ ಶ್ರೀದತ್ತಾವಧೂತ ಸ್ವಾಮೀಜಿ, ದೇವರ ಹುಬ್ಬಳ್ಳಿ ಸಿದ್ಧಾಶ್ರಮದ ಶ್ರೀಸಿದ್ಧಶಿವಯೋಗಿ ಸ್ವಾಮೀಜಿ, ನಾಗರಾಳ ಆನಂದಾಶ್ರಮದ ವೀರೇಶಾನಂದ ಸ್ವಾಮೀಜಿ, ರಾಯದುರ್ಗ ಸಿದ್ಧಾರೂಢಮಠದ ತಿಪ್ಪೇ ಸ್ವಾಮೀಜಿ, ತಿಪಟೂರು ಪರದೇಶಿ ಆಶ್ರಮದ ನಟರಾಜ ಸ್ವಾಮೀಜಿ, ಇಬ್ರಾಹಿಂಪುರ ಸಿದ್ದಪ್ಪಜ್ಜನ ಮಠದ ಚಿನ್ಮಯ ಸ್ವಾಮೀಜಿ, ಈಚಲಕರಂಜಿ ಮಹೇಶಾನಂದ ಸ್ವಾಮೀಜಿ, ದಾದನಟ್ಟಿ ಶಿವಾನಂದಮಠದ ನಿಜಾನಂದ ಸ್ವಾಮೀಜಿ, ಹೆಬ್ಬಳ್ಳಿ ಶಿವಾನಂದ ಮಠದ ಬ್ರಹ್ಮಾನಂದ ಸ್ವಾಮೀಜಿ, ಅನಸಮ್ಮ ಮಾತಾಜಿ, ಗದಗ ಶಿವಾನಂದಮಠದ ಮುಕ್ತಮ್ಮ ಮಾತಾಜಿ, ಭಾವನಸೌದತ್ತಿ ಓಂಕಾರಾಶ್ರಮದ ಶಿವಶಂಕರ ಸ್ವಾಮೀಜಿ, ಚಿಕ್ಕುಂಬಿ ನಾಗಲಿಂಗಸ್ವಾಮಿ ಮಠದ ಸ್ವಾಮೀಜಿ, ರನ್ನತಿಮ್ಮಾಪುರದ ಬಸವರಾಜ ಸ್ವಾಮೀಜಿ, ದೇವದಂತೆ ಹಿರೇಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ವಿಜಯಪುರ ಬಸವದೇವರ ಮಠದ ಬಸವ ಚೈತನ್ಯ ಸ್ವಾಮೀಜಿ, ಕಮ್ಮಕೇರಿ ಶಿವಾನಂದ ಮಠದ ಮಹಾದೇವಮ್ಮ ಮಾತಾಜಿ, ಹುಬ್ಬಳ್ಳಿ ಸಿದ್ಧಾರೂಢ ಮಠದ ನಟರಾಜ ಸ್ವಾಮೀಜಿ ಅವರು ಲಿಂಗೈಕ್ಯ ಯೋಗಾನಂದ ಸ್ವಾಮೀಜಿ ಅವರನ್ನು ಕುರಿತು ನುಡಿನಮನ ಸಲ್ಲಿಸಿದರು.

ವಿಶೇಷ ಪ್ರಾರ್ಥನೆ : ಲಿಂಗೈಕ್ಯ ಶ್ರೀಗಳ ಯೋಗ ಸಮಾಧಿ ಬಳಿ ಜರುಗಿದ ವಿಶೇಷ ಪ್ರಾರ್ಥನೆಯಲ್ಲಿ ಹೆಬ್ಬಳ್ಳಿ ಯೋಗಾನಂದ ಆಶ್ರಮ ಭಕ್ತಗಣದ ಲಿಂಬಣ್ಣ ನಾಯ್ಕರ, ಮಂಜುನಾಥ ಭೀಮಕ್ಕನವರ, ಸಹದೇವ ಹಾವೇರಿ, ಎಲ್.ಐ. ಲಕ್ಕಮ್ಮನವರ, ಮಂಜುನಾಥ ವಾಸಂಬಿ, ಯಲ್ಲಪ್ಪ ಸಾಲಿ, ಚನಬಸಪ್ಪ ಮಟ್ಟಿ, ರವಿ ಬಿಜಲಿ, ಯಲ್ಲಪ್ಪ ಉಪ್ಪಿನ, ಬಸಪ್ಪ ವಾಳದ, ಅಶೋಕ ಸೂರ್ಯಕಾಂತಿ, ಹನುಮಂತಪ್ಪ ಹಾವೇರಿ, ಮುದಕಪ್ಪ ಮಿಂಡೆಣ್ಣವರ, ಈರಪ್ಪ ಸೂರಕೋಡ, ಮಲ್ಲಪ್ಪ ನವಲೂರ, ನಿಂಗಪ್ಪ ಕೊಪ್ಪದ, ಮಲ್ಲಪ್ಪ ಮೊರಬದ, ಮಂಜುನಾಥ ಸೂರ್ಯವಂಶಿ, ಧರ್ಮಗೌಡ ಪಾಟೀಲ, ಬಸವರಾಜ ಬಳ್ಳೋಡಿ, ಚನ್ನಪ್ಪ ಅಕ್ಕಿ, ನಾಗಪ್ಪ ಬನಪ್ಪನವರ, ರಾಮಚಂದ್ರ ಭಜಂತ್ರಿ ಪಾಲ್ಗೊಂಡಿದ್ದರು. ನಂತರ ದಾಸೋಹ ಸೇವೆಯಲ್ಲಿ ಅನ್ನಸಂತರ್ಪಣೆ ಜರುಗಿತು.

– ಎಲ್. ಐ. ಲಕ್ಕಮ್ಮನವರ, ಕನ್ನಡ ಅಧ್ಯಾಪಕರು, ಹೆಬ್ಬಳ್ಳಿ ತಾ.ಧಾರವಾಡ (ಮೊ) ೯೮೮೦೪೫೪೨೩೩

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group