ಮುಧೋಳ – ರಾಮಕೃಷ್ಣ ಪರಮಹಂಸರ ಪರಮ ಶಿಷ್ಯ ತತ್ವಜ್ಞಾನಿ ಧೀರ ಸನ್ಯಾಸಿ . ಸ್ವಾಮಿ ವಿವೇಕಾನಂದರ 123 ನೆಯ ಸ್ಮರಣೋತ್ಸವ .ವಿಶೇಷ ಉಪನ್ಯಾಸ .ಸಾಂಸ್ಕೃತಿಕ ಕಾರ್ಯಕ್ರಮಗಳು ಶುಕ್ರವಾರ ದಿನಾಂಕ 4ರಂದು ತಾಲೂಕಿನ ಮುಗಳಖೋಡ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಆವರಣದಲ್ಲಿ ನಡೆಯಲಿದೆ.
ಸ್ವಾಮಿ ವಿವೇಕಾನಂದರ ಬದುಕು ವಿಷಯಾಧಾರಿತವಾಗಿ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಬೆಲವತ್ ಗ್ರಾಮದ ಶ್ರೀ ವಿವೇಕ ಸಿದ್ದ ಸೇವಾಶ್ರಮದ ಪೂಜ್ಯರಾದ ದಯಾಶಂಕರ ಮಹಾಸ್ವಾಮಿಜಿಯವರು ಉಪನ್ಯಾಸ ನೀಡಲಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳು ಪಿ.ಎಂ. ಹಲಗಿಯವರು ವಹಿಸುವರು. ಲೋಕ ನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ .ಶಾಮಲಾ ಅವರು ಉದ್ಘಾಟಿಸುವರು. ಮಹಾದೇವಯ್ಯ ಮಹಾಸ್ವಾಮಿಗಳು ಹಿರೇಮಠ, ವರದಿಗಾರ ಸುರೇಶ ಭಸ್ಮೆ ಅವರ ಉಪಸ್ಥಿತಿಯಲ್ಲಿ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ಯುವ ಗಾಯಕ ಎಲ್. ಶ್ರೀನಿವಾಸ್ ಪ್ರಸಾದ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗುವುದು.
ವಿಶ್ವಜನನಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಗ್ರಾಮೀಣ ಅಭಿವೃದ್ಧಿ ಹಾಗೂ ಜನಪದ ಕಲಾ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕಾರ್ಯಕ್ರಮ ಜರುಗುವುದು ಎಂದು ಆಶ್ರಮದ ಕುಮಾರ ಗುರುಪ್ರಸಾದ್ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ