ಮಹಿಳಾ ದಿನದ ನಿಮಿತ್ತ ಸೂಲಗಿತ್ತಿ ರಾಜಮ್ಮಗೆ ಆತ್ಮೀಯ ಸತ್ಕಾರ
ಸಿಂದಗಿ : ಸೂಲಗಿತ್ತಿ ರಾಜಮ್ಮ ಸೋಂಪೂರ ಅವರು ಬಂದಾಳ ಗ್ರಾಮದಲ್ಲಿ ಹುಟ್ಟಿ ಅಂಗನವಾಡಿ ಕೇಂದ್ರದಲ್ಲಿ ಅಡಿಗೆ ಸಹಾಯಕಿ ಕಾಯಕದ ಮೂಲಕವೇ ಒಂದು ಸಾವಿರಕ್ಕೂ ಹೆಚ್ಚು ಸೂಲಗಿತ್ತಿ ಸೇವೆ ಹಲವು ಮಹಿಳೆಯರ ಪ್ರಾಣ ಕಾಪಾಡಿದ ಮಹಾತಾಯಿ ರಾಜಮ್ಮ ಸೇವೆ ಉತ್ತಮ ಎಂದು ಶೈಲಾಜ ಸ್ಥಾವರಮಠ ಹೇಳಿದರು.
ತಾಲೂಕಿನ ಬಂದಾಳ ಗ್ರಾಮದ ಮಶೇಕಸಾಬ ಸೇಲೇದಾರ ಮನೆಯ ಆವರಣದಲ್ಲಿ ಪಟ್ಟಣದ ನಿವೇದಿತಾ ಮಹಿಳಾ ಮಂಡಳಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸರಳ ಸಮಾರಂಭದಲ್ಲಿ ಅವರು ಮಾತನಾಡಿ, ರಾಜಮ್ಮ ಸೋಂಪೂರ ಅವರು ಕಡುಬಡತನದಲ್ಲಿ ಹುಟ್ಟಿ ಬೆಳೆದು, ಸೂಲಗಿತ್ತಿ ಕಸುಬಿನಿಂದ ಸಾವಿರಾರು ಹೆರಿಗೆ ಮಾಡಿಸಿ ತಾಯಿ, ಮಗುವಿನ ಜೀವ ಉಳಿಸಿದ್ದಾರೆ ಎಂದರು.
ಜಾನಪದ ಕವಿ ಮಾದೇವಿ ಹಿರೇಮಠ ಮಾತನಾಡಿ, ಮಹಿಳೆ ಅಬಲೆ ಅಲ್ಲ ಸಬಲೆ ಭಾರತೀಯ ಸಮಾಜದಲ್ಲಿ ಮಹಿಳೆಯರಿಗೆ ಉನ್ನತವಾದ ಸ್ಥಾನಮಾನ ನೀಡಲಾಗಿದೆ ಮಹಿಳೆ ಅಬಲೆ ಅಲ್ಲ, ಸಬಲೆಯಾಗಿದ್ದಾಳೆ. ವಿಮಾನಯಾನ, ಹಣಕಾಸು, ಬ್ಯಾಂಕಿಂಗ್, ಶಿಕ್ಷಣ, ರಾಜಕೀಯ, ಸೈನ್ಯ, ಜೀವ ವಿಮೆ ಸೇರಿದಂತೆ ವಿವಿಧ ಉನ್ನತ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಆದರೆ ಬಂದಾಳ ಗ್ರಾಮದ ಹಿರಿಯ ಮಹಿಳೆ ರಾಜಮ್ಮ ಸೋಂಪೂರ ಮಾಡಿರುವ ಸೇವೆ ಗ್ರಾಮಸ್ಥರು ಮರೆಯಬಾರದು ಎಂದು ತಿಳಿಸಿದರು.
ಸರೋಜಿನಿ ಸ್ಥಾವರಮಠ ಮಾತನಾಡಿ,ಮಹಿಳೆಯರು ಬರೀ ಅಡುಗೆ ಮನೆಗೆ ಸೀಮಿತರಾಗದೆ ಶಿಕ್ಷಣ ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಚನ್ನಮ್ಮ ಬಗಲಿ ದುಂಡಮ್ಮ ದ್ಯಾಬೇರಿ ಹಾಗೂ ಸುನಂದಾ ಸುಕಾಲಿ ಮಾತನಾಡಿ, ತಾಯಿ ರಾಜಮ್ಮ ಸೋಂಪೂರ ಸೂಲಗಿತ್ತಿ ಕಸುಬಿನಿಂದ ಸಾವಿರಾರು ಹೆರಿಗೆ ಮಾಡಿಸಿ ತಾಯಿ, ಮಗುವಿನ ಜೀವ ಉಳಿಸಿದ್ದಾರೆ ಸೇವೆ ಅವಿಸ್ಮರಣೀಯವಾಗಿದೆ ಎಂದರು.
ಶ್ರೀದೇವಿ ಚನಗೊಂಡ, ರೈಹಿಮತಿ ಶಿಲೇದಾರ ಮತ್ತು ಮಕ್ಕಳು ಇದ್ದರು .ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ ಸ್ವಾಗತಿಸಿ ನಿರೂಪಿಸಿದರು ವಂದಿಸಿದರು.