ಬೆಳಗಾವಿ – ಬೆಳಗಾವಿ ತನ್ಮಯ ಚಿಂತನ ಚಾವಡಿ ರಾಮತೀಥ೯ನಗರ ಹಾಗೂ ಮಹೇಶ ಪ ಪೂ ಕಾಲೇಜ ಮಹಾಂತೇಶನಗರ ಬೆಳಗಾವಿ ಇವರ ಸಹಯೋಗದಲ್ಲಿ ರವಿವಾರ ದಿನಾಂಕ ೦೮. ೦೯. ೨೦೨೪ ರಂದು ಸಾಹಿತಿ ಸ ರಾ ಸುಳಕೂಡೆ ಅವರ ಆಯ್ದ ಕೃತಿಗಳ ವಿಮರ್ಶಾ ಲೇಖನಗಳ ಸಂಕಲನ “ಮಿಂಚಿನಗೊಂಚಲು” ಕೃತಿಯ ಬಿಡುಗಡೆ ಕಾರ್ಯಕ್ರಮವನ್ನು ಬೆಳಗಾವಿಯ ಮಹೇಶ್ ಪದವಿ ಪೂರ್ವ ಕಾಲೇಜಿನಲ್ಲಿ ಮುಂಜಾನೆ 10:30ಕ್ಕೆ ಆಯೋಜಿಸಲಾಗಿದೆ.
ಮಂಗಳೂರಿನ ಡಾ.ಕೊಳ್ಚಪ್ಪೆ ಗೋವಿಂದ ಭಟ್ಟ ಸಂಪಾದಿತ ಈ ಕೃತಿಯನ್ನು ಡಾ. ಎಪ್. ಡಿ.ಗಡ್ಡಿಗೌಡರ, ಸಾಹಿತಿಗಳು ಬೈಲಹೊಂಗಲ ಇವರು ಬಿಡುಗಡೆ ಮಾಡಲಿದ್ದಾರೆ. ಕೃತಿ ಪರಿಚಯ ಅಶೋಕ ಮಳಗಲಿ ಅ. ಭಾ. ಶ. ಸಾ. ಪ. ಅಧ್ಯಕ್ಷರು ಬೆಳಗಾವಿ ಮಾಡುವರು.ಮುಖ್ಯ ಅತಿಥಿಗಳಾಗಿ ಎಂ. ವ್ಹಿ. ಭಟ್ಟ.ಪ್ರಾಚಾಯ೯ರು ಮಹೇಶ ಪ ಪೂ ಕಾಲೇಜು,ಬೆಳಗಾವಿ ಆಗಮಿಸಲಿದ್ದಾರೆ. ಅತಿಥಿಗಳಾಗಿ ಶಶಿಕಾಂತ ಗುಂಡಕಲ್ಲೆ. ನಿ ತಹಸೀಲ್ದಾರರು ಬೆಳಗಾವಿ ಆಗಮಿಸಲಿದ್ದು, ಡಾ. ಅ. ಬ. ಇಟಗಿ ನಿರೂಪಿಸುವರು. ಇದೇ ಸಂದರ್ಭದಲ್ಲಿ ಕೃತಿಕಾರರ ಸನ್ಮಾನವನ್ನು ಆಯೋಜಿಸಲಾಗಿದೆ.
ಆಯೋಜಕರಾದ ಎಂ. ವೈ. ಮೆಣಸಿನಕಾಯಿ, ಮಲ್ಲಿಕಾಜು೯ನ ಜುಗತಿ, ಬಾಳಗೌಡ ದೊಡಬಂಗಿ, ಡಾ. ಸುನಿಲ ಪರೀಟ ಸ್ವಾಗತ ಕೋರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.