ಬನವಾಸಿಯಲ್ಲಿ ಕಾರ್ಯಕರ್ತರಿಂದ ಸಚಿವರಿಗೆ ಅದ್ದೂರಿ ಸ್ವಾಗತ

Must Read

ಬನವಾಸಿ: ಸಚಿವ ಸಂಪುಟಕ್ಕೆ ಎರಡನೇ ಬಾರಿ ಆಯ್ಕೆಯಾದ ನಂತರ ಬನವಾಸಿಗೆ ಮೊದಲ ಬಾರಿ ಭೇಟಿ ನೀಡಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರನ್ನು ಸ್ಥಳೀಯ ಕದಂಬ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು.

ಸಚಿವರು ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಸಾಮಾಜಿಕ ಅಂತರ ಮರೆಯುವುದರ ಜೊತೆಗೆ ಹಾರ ತುರಾಯಿಗಳಿಗೆ ದುಂದುವೆಚ್ಚ ಮಾಡುವುದನ್ನು ಮುಖ್ಯಮಂತ್ರಿಗಳು ನಿಷೇಧಿಸಿದ್ದರು ಅದ್ಯಾವುದನ್ನು ಲೆಕ್ಕಿಸದೇ ಅಭಿಮಾನದಿಂದ ನೂರಾರು ಬಿಜೆಪಿ ಕಾರ್ಯಕರ್ತರು ಡೊಳ್ಳು ಬಾರಿಸುತ್ತ ಪಟಾಕಿ ಸಿಡಿಸಿ ಭಾರಿ ಗಾತ್ರದ ಹೂ ಮಾಲೆಗಳನ್ನು ಹಾಕುವುದರೊಂದಿಗೆ ವಿಧವಿಧದ ಹೂಗಳ ಸುರಿಮಳೆಗೈದು ತಮ್ಮ ನೆಚ್ಚಿನ ನಾಯಕನಿಗೆ ಅದ್ದೂರಿ ಸ್ವಾಗತ ಮಾಡಿದರು.

ನಂತರ ಸಚಿವರು ಬನವಾಸಿಯ ಶ್ರೀ ಉಮಾಮಧುಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನ ಸಮಿತಿಯಿಂದ ಮತ್ತು ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ರಾಜಶೇಖರ ಒಡೆಯರ್, ಉಪಾಧ್ಯಕ್ಷರು ವಿ.ವಿ. ಮಂಗಳೂರ, ಕಾರ್ಯದರ್ಶಿ ಪ್ರಕಾಶ್ ಬಂಗ್ಲೆ, ಶಿವಯೋಗಿ ಉಳ್ಳಾಗಡ್ಡಿ, ಜಯಶಂಕರ ಮೇಸ್ತ್ರಿ, ಶಿರಸಿ ಎಪಿಎಮ್‍ಸಿ ಅಧ್ಯಕ್ಷ ಶಿವಕುಮಾರ ದೇಸಾಯಿ ಗೌಡರ್, ಬಿಜೆಪಿ ಮುಖಂಡರಾದ ದ್ಯಾಮಣ್ಣ ದೊಡ್ಮನಿ, ಗ್ರಾಪಂ ಅಧ್ಯಕ್ಷೆ ತುಳಸಿ ಆರೇರ, ಪಿಎಸ್‍ಐ ಹನುಮಂತ ಅರಣ್ಯಧಿಕಾರಿ ಉಷಾ ಕಬ್ಬೆರ, ಗಣಪತಿ ನಾಯ್ಕ್ ಭಾಶಿ, ಚಂದ್ರಶೇಖರ ಗೌಡ ಕಡಗೋಡ, ಸಿದ್ದು ನೆರಗಲ್, ಅಶೋಕ ಪೊನ್ನಪ್ಪ, ಪ್ರೇಮ್‍ಕುಮಾರ್ ನಾಯ್ಕ್, ಸಾಯಿರಾಮ್ ಕಾನಳ್ಳಿ, ಪ್ರಶಾಂತ ಸಂತೊಳ್ಳಿ, ಬಸವರಾಜ್ ನಾಯ್ಕ್ ಭಾಶಿ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group