- Advertisement -
ಮೈಸೂರಿನ ಮಾನಸಗಂಗೋತ್ರಿ ಬಳಿ ಇರುವ ಜಯಚಾಮರಾಜೇಂದ್ರ ಇಂಜನಿಯರಿಂಗ್ ಕಾಲೇಜು ಬಳಿ ಹಾಗೂ ಕೆ.ಆರ್.ಎಸ್. ರಸ್ತೆಯ ಗೋಕುಲಂ ಬಸ್ ನಿಲ್ದಾಣಗಳಲ್ಲಿ ಜೆ.ಕೆ. ಟೈರ್ಸ್ ಸಂಸ್ಥೆಯು ಆಂಗ್ಲ ಭಾಷೆಯಲ್ಲಿ ಪ್ರಚಾರ ಫಲಕಗಳನ್ನು ಅಳವಡಿಸಿದ್ದು, ಈ ಬಗ್ಗೆ ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಪತ್ರಕರ್ತ ಡಾ.ಭೇರ್ಯ ರಾಮಕುಮಾರ್ ಅವರು ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ದೂರು ನೀಡಿದ್ದರು.
ಸದರಿ ದೂರಿನ ಬಗ್ಗೆ ಕ್ರಮಕೈಗೊಂಡಿರುವ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನಿಲ್ ಕುಮಾರ್ ಅವರು ತಕ್ಷಣವೇ ಸದರಿ ಬಸ್ ನಿಲ್ದಾಣಗಳಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಪರಿಶೀಲನೆ ನಡೆಸಿ, ಕನ್ನಡ ನಾಮಫಲಕ ಅಳವಡಿಸಲು ನಿರ್ದೇಶನ ನೀಡಬೇಕೆಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ಹಾಗೂ ಮೈಸೂರು ಮಹಾನಗರಪಾಲಿಕೆ ಆಯುಕ್ತರಿಗೆ ಸಚಿವ ಸುನಿಲ್ ಕುಮಾರ್ ಅವರು ಸೂಚಿಸಿದ್ದಾರೆ.