spot_img
spot_img

ಕ್ರೀಡಾ ಸಾಧಕರು ಹಾಗೂ ತರಬೇತಿದಾರರಿಗೆ ಸತ್ಕಾರ ಸಮಾರಂಭ

Must Read

- Advertisement -

ಮೂಡಲಗಿ: ಮೂಡಲಗಿ ಶೈಕ್ಷಣಿಕ ವಲಯದಲ್ಲಿನ ಪ್ರಾಥಮಿಕ ಶಾಲೆಯಿಂದ ಪದವಿ ಹಂತದವರೆಗೆ ಕ್ರೀಡೆಯಲ್ಲಿ ಸಾಧನೆ ಮಾಡಿದ ಸಾಧಕ ಕ್ರೀಡಾಪಟುಗಳನ್ನು  ಮತ್ತು ತರಬೇತಿದಾರರನ್ನು ಗೌರವಿಸುವ ಕಾರ್ಯ ಶ್ಲಾಘನೀಯವಾದುದು ಎಂದು ನಿವೃತ್ತ  ದೈಹಿಕ ಪರೀವಿಕ್ಷಕ ಎಮ್.ಎಚ್.ಚಿಪಲಕಟ್ಟಿ ಹೇಳಿದರು.

ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಮಹಾವಿದ್ಯಾಲಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ 2022-23ನೇ ಸಾಲಿನಲ್ಲಿ ವಿವಿಧ ಕ್ರೀಡಾ ಕೂಟಗಳಲ್ಲಿ ಸಾಧನೆ ಮಾಡಿದ ಮೂಡಲಗಿ ಶೈಕ್ಷಣಿಕ ವಲಯದಲ್ಲಿನ ಕ್ರೀಡಾ ಪಟುಗಳು ಹಾಗೂ ತರಬೇತಿ ನೀಡಿ ಶಿಕ್ಷಕರಿಗೆ ಕ್ರೀಡಾ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದೆ, ಕ್ರೀಡಾಪಟುಗಳ ಕ್ರೀಡೆಯೊಂದಿಗೆ ಪಠ್ಯದ ಕಡೆಗೆಯೂ ಸಹ ಗಮನ ನೀಡಬೇಕು. ತರಬೇತಿದಾರರು ಮತ್ತು ಅಧಿಕಾರಿಗಳು ಕ್ರೀಡಾಟುಗಳಿಗೆ ಸಹಾಯ, ಸಹಕಾರ ನೀಡಿ ರಾಷ್ಟ್ರ ಮತ್ತು ಅಂತಾರಾಷ್ಟಿಯ ಕ್ರೀಡಾಕೂಟದಲ್ಲಿ ಸಾಧನೆ ಮಾಡಲು ಪ್ರೋತ್ಸಾಹ ಮತ್ತು ಉತ್ತೇಜನ ನೀಡ ಬೇಕೆಂದರು.

ಚಿಕ್ಕೋಡಿ ಜಿಲ್ಲಾ ದೈಹಿಕ ಶಿಕ್ಷಣ ಪರೀವಿಕ್ಷಕ ಎಸ್.ಬಿ.ಜೋಗಳೆ ಮಾತನಾಡಿ, ಕ್ರೀಡಾಪಟುಗಳಿಗೆ ಸದಾ ಕಾಲ ಸಲಹೆ ಮತ್ತು ಸಹಕಾರ ನೀಡುವುದಾಗಿ ಭರವಸೆ ನೀಡಿದ ಅವರು ಸರಕಾರ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಕ್ರೀಡೆಯಲ್ಲಿ ಸಾಧನೆ ಗೈದು ಶಾಲೆಯ ಮತ್ತು ಗ್ರಾಮದ ಕೀರ್ತಿಯನ್ನು ಹೆಚ್ಚಿಸಬೇಕೆಂದರು.

- Advertisement -

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಜಿಲ್ಲಾಧ್ಯಕ್ಷ ಎಸ್.ಎಮ್.ಲೋಕನವರ ಮತ್ತು ಶಿಕ್ಷಕ ಎ.ಪಿ.ಪರಸನ್ನವರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸತತ ಪ್ರಯತ್ನ ಪಟಾಗ ಮಾತ್ರ  ಜೀವನ್ನದಲ್ಲಿ ಏನ್ನನಾದರು ಸಾಧನೆ ಮಾಡಲು ಸಾಧ್ಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ ಸಸಿಗೆ ನೀರು ಉಣಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. 

ವೇದಿಕೆಯಲ್ಲಿ ಮಂಜುನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಲ್.ವಾಯ್.ಅಡಿವುಡಿ, ಶಿಕ್ಷಕರಾದ ರವಿ ಹೊಸಟ್ಟಿ. ಎಸ್.ಬಿ.ಹಳಿಗೌಡರ ಮತ್ತಿತರರು ಇದ್ದರು.

- Advertisement -

ಕಾರ್ಯಕ್ರಮದ ಮೂಡಲಗಿ ವಲಯದ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಪದವಿ ಮಹಾವಿದ್ಯಾಲಯದಲ್ಲಿನ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಮತ್ತು ತರಬೇತಿದಾರನ್ನು ಸತ್ಕರಿಸಿ ಗೌರವಿಸಿದರು.

ಮೂಡಲಗಿ ಬಿಇಒ ಕಚೇರಿಯ ದೈಹಿಕ ಪರೀವಿಕ್ಷಕ ಜುನೇದ ಪಟೇಲ ಸ್ವಾಗತಿಸಿದರು, ದೈಹಿಕ ಶಿಕ್ಷಕರಾದ ಕೆ.ಎಚ್.ಪಾಟೀಲ ಮತ್ತು ಬಿ.ಕೆ.ಬಡಗನ್ನವರ ನಿರೂಪಿಸಿದರು. ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಕೆ.ಕಂಕಣವಾಡಿ ವಂದಿಸಿದರು.

- Advertisement -
- Advertisement -

Latest News

ಸಿದ್ದಯ್ಯ ಪುರಾಣಿಕರ ಸಾಹಿತ್ಯ ರಾಶಿ ವಿಪುಲವಾಗಿದೆ ; ಮೃತ್ಯುಂಜಯ ಸ್ವಾಮಿಗಳು ಹಿರೇಮಠ

ಬೆಳಗಾವಿ- ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group