ಬೀದರ – ಶತಾಯುಷಿ, ಮಾಜಿ ಸಚಿವ ಭೀಮಣ್ಣಾ ಖಂಡ್ರೆ ಅನಾರೋಗ್ಯ, ಆಸ್ಪತ್ರೆಯಲ್ಲಿ ಚಿಕಿತ್ಸೆ ಹಿನ್ನೆಲೆಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ, ಮಾಜಿ ಸಚಿವ ಹೆಚ್.ಆಂಜನೇಯ ಖಂಡ್ರೆಯವರನ್ನು ಬೀದರನ ಗುದಗೆ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಭೀಮಣ್ಣ ಖಂಡ್ರೆಯವರ ಆರೋಗ್ಯ ವಿಚಾರಿಸಲು ಬಂದಾಗ ಲಿಫ್ಟ್ ನಲ್ಲಿ ಸಿಲುಕಿ ಪರದಾಡಿದ ಕೆಎಚ್ ಮುನಿಯಪ್ಪ ಪರದಾಡಬೇಕಾಯಿತು.೧೦ ನಿಮಿಷಗಳ ಕಾಲ ಆಸ್ಪತ್ರೆಯ ಲಿಫ್ಟ್ ನಲ್ಲಿ ಸಿಕಿದ ಸಚಿವ ಕೆ.ಎಚ್ ಮುನಿಯಪ್ಪ. ಸಚಿವರು ಲಿಫ್ಟ್ ಒಳಗಡೆ ಹೋಗುತ್ತಿದ್ದಂತೆ ಏಕಾಏಕಿ ಲಿಫ್ಟ್ ಬಂದ್ ಆಯಿತು.
ಈ ಕಾರಣ ಸಚಿವರ ಬೆಂಬಲಿಗರು ಮತ್ತು ಆಸ್ಪತ್ರೆಯ ಮಾನ್ಯೇಜ್ ಮೆಂಟ್ ನಡುವೆ ಕೆಲವೊತ್ತು ಮಾತಿನ ಚಕಮಕಿ ನಡೆಯಿತು.
ವರದಿ : ನಂದಕುಮಾರ ಕರಂಜೆ, ಬೀದರ

