ಸಿಂದಗಿ: ಓತಿಹಾಳ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸುತ್ತ ಮುತ್ತಲಿನ ಕಂಪೌಂಡ ನಿರ್ಮಾಣ ಮಾಡಲು ಮಾರ್ಚ ತಿಂಗಳ ಒಳಗೆ ರೂ. ೧೦ ಲಕ್ಷ ರೂಪಾಯಿಗಳ ಅನುದಾನ ನೀಡುವದಾಗಿ ಶಾಸಕ ಅಶೋಕ ಮ ಮನಗೂಳಿ ಭರವಸೆ ನೀಡಿದರು.
ತಾಲೂಕಿನ ಓತಿಹಾಳ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಉನ್ನತಿಕರಿಸಿದ ಕೊಠಡಿ ಹಾಗೂ ಕಂಪ್ಯೂಟರ್ ಚಾಲನೆ ನೀಡುವ ಸಮಾರಂಭ ಉದ್ಘಾಟಿಸಿ ಮಾತನಾಡಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಪ್ರಗತಿ ಸಂಘದ ಮೂಲಕ ಮಕ್ಕಳ ಕಲಿಕೆಗೆ ಪೂರಕವಾದ ಕಂಪ್ಯೂಟರ ನೀಡಿರುವದು ಸಂತೋಷದ ವಿಷಯವಾಗಿದೆ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಶಿಕ್ಷಕರು ನೀಡುವ ಮೂಲಕ ಅವರಿಗೆ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಮಾಡಲು ಶ್ರಮಿಸಬೇಕು . ಗ್ರಾಮದಲ್ಲಿ ಪಶು ಆಸ್ವತ್ರೆ ಮಂಜೂರ ಮಾಡುವದಾಗಿ ರೈತರಿಗೆ ಆಶ್ವಾಸನೆ ನೀಡಿದರು.
ಪಟ್ಟಣದ ಸಾರಂಗಮಠ – ಗಚ್ಚಿನಮಠ ಉತ್ತರಾಧಿಕಾರಿ ಡಾ. ವಿಶ್ವ ಪ್ರಭುದೇವ ಶಿವಾಚಾರ್ಯರು ಆಶೀರ್ವಚನ ನೀಡಿ, ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣವು ಕೇವಲ ಅಂಕಗಳಿಗಿಂತ ಹೆಚ್ಚಾಗಿ ಸದ್ಗುಣಗಳನ್ನು ಪ್ರಾಮಾಣಿಕತೆ, ಸಹಾನುಭೂತಿ, ಗೌರವ ಮತ್ತು ಸಮುದಾಯದ ಬಗ್ಗೆ ಕರುಣೆಯಂತಹ ಗುಣಗಳನ್ನು ಬೆಳೆಸಿ, ತಂತ್ರಜ್ಞಾನದ ಯುಗದಲ್ಲಿ ಸರಿಯಾದ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಕಲಿಯಲು ಪೋಷಕರು ಮತ್ತು ಶಾಲೆಯ ಶಿಕ್ಷಕರ ಪಾತ್ರ ಇಲ್ಲಿ ನಿರ್ಣಾಯಕವಾಗಿದೆ ಎಂದರು.
ಕನ್ನೊಳ್ಳಿ ಹಿರೇಮಠದ ಶ್ರೀ ಷ ಬ್ರ ಸಿದ್ದಲಿಂಗ ಶಿವಾಚಾರ್ಯರು, ಜಮಖಂಡಿ ಓಂಕಾರ ಆಶ್ರಮದ ಮಾತೋಶ್ರೀ ಶ್ರೀದೇವಿ ಮಾತಾಜಿ, ಗ್ರಾಮದ ಹೇಮರಡ್ಡಿ ಮಲ್ಲಮ್ಮಮಠದ ಮಾತೋಶ್ರೀ ಬಸಮ್ಮ ತಾಯಿಯವರು ದಿವ್ಯ ಸಾನಿಧ್ಯವಹಿಸಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ಭೀಮನಗೌಡ ಬ ಬಿರಾದಾರ ಸಭೆ ಅಧ್ಯಕ್ಷತೆ ವಹಿಸಿದರು. ಗಣ್ಯ ವ್ಯಾಪಾರಸ್ಥ ಅಶೋಕ ಗು ವಾರದ, ಪ್ರಗತಿ ಸಂಘದ ಅಧ್ಯಕ್ಷ ಬಸನಗೌಡ ಮ ಪಾಟೀಲ, ಯಾದಗಿರಿ ಅರಣ್ಯ ಅಧಿಕಾರಿ ಹಾಗೂ ಪ್ರಗತಿ ಸಂಘದ ಕಾರ್ಯದರ್ಶಿ ಸುನೀಲಕುಮಾರ ಗು ಮಣೂರ, ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಡಿ ಬಿ ದೊಡಮನಿ, ತಾಲೂಕು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಹೆಚ್ ಬಿರಾದಾರ, ಸರಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯ ಜಿ ಎನ್ ನಡಕೂರ, ಪ್ರಥಮ ದರ್ಜೆ ಗುತ್ತಿಗೆದಾರ ಪುಂಡಲೀಕ ವ್ಹಿ ಬಿರಾದಾರ, ಶಿಕ್ಷಕ ಬಸವರಾಜ ಅಗಸರ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರಡ್ಡಿ, ಅಶೋಕ ಕೂಳಾರಿ, ಎಂ ಎ ಖತಿಭ ವೇದಿಕೆ ಮೇಲೆ ಇದ್ದರು.
ಪ್ರಗತಿ ಸಂಘದ ಸಮಿತಿ ಸಹ ಕಾರ್ಯದರ್ಶಿ ಕಿರಣಕುಮಾರ ನಾಟಿಕಾರ ನಿರೂಪಿಸಿದರು.

