ಸಿಂದಗಿ: ಮಾಜಿ ಸಚಿವ ದಿ.ಎಂ ಸಿ ಮನಗೂಳಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಬಡವರ ಹಾಗೂ ಕೂಲಿ ಕಾರ್ಮಿಕರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಬಹು ಜನತೆಗೆ ನೆರಳಾಗುವಂತೆ ಮಾಡಿದ್ದಾರೆ ಅವರ ಹೆಸರು ಅಜರಾಮರವಾಗಿ ಉಳಿಸಲು ಎಂ ಸಿ ಮನಗೂಳಿ ಪ್ರತಿಷ್ಠಾನವತಿಯಿಂದ ಬೀದಿ ಬದಿ ಸಣ್ಣ ಪುಟ್ಟ ವ್ಯಾಪಾರಿಗಳಿಗಾಗಿ ಛತ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ಹತ್ತಿರ ಬೀದಿ ಬದಿ ವ್ಯಾಪಾರಿಗಳಿಗೆ ಎಂ ಸಿ ಮನಗೂಳಿ ಪ್ರತಿಷ್ಠಾನ ವತಿಯಿಂದ ಛತ್ರಿಗಳನ್ನು ವಿತರಿಸಿ ಮಾತನಾಡಿ, ಬೀದಿ ಬದಿ ವ್ಯಾಪಾರ ಮಾಡಿಕೊಂಡು ಉಪಜೀವನ ನಡೆಸುತ್ತಿರುವ ಬಡ ಕುಟುಂಬಗಳು ನೆರಳಲ್ಲಿ ಕುಳಿತು ವ್ಯಾಪಾರ ಮಾಡಿಕೊಂಡು ಮನಗೂಳಿ ಕುಟುಂಬಕ್ಕೆ ಆಶೀರ್ವಾದ ಮಾಡಿ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ. ಜಯಶ್ರೀ ಹದನೂರ,ಎಂ ಎ ಖತಿಬ, ಸಾಧಿಕ ಸುಂಬಡ, ಮಹಿಬೂಬ ಮರ್ತುರ, ಪ್ರವೀಣ ಕಂಠೀಗೊಂಡ, ರುದ್ರಗೌಡ ಪಾಟೀಲ ಯಂಕಂಚಿ, ಬಸು ಕಾಂಬಳೆ, ಶಾರದಾ ಬೆಟಗೇರಿ, ಸುನಂದಾ ಯಂಪುರೆ, ಮಹಾನಂದ ಬಮ್ಮಣ್ಣಿ, ಸುನಂದಾ ಭಜಂತ್ರಿ, ಇಬ್ರಾಹಿಂ ನಾಟಿಕಾರ ಸೇರಿದಂತೆ ಅನೇಕರು ಇದ್ದರು