ಸಿಂದಗಿ : ಆಲಮೇಲ ತಾಲೂಕಿನ ಕಡಣಿ ಗ್ರಾಮದ ಶ್ರೀ ಭೋಗಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಮಾಜಿ ಸಚಿವ ದಿ.ಎಮ್. ಸಿ. ಮನಗೂಳಿ ಅವರ ಸ್ಮರಣಾರ್ಥ ಏ. 6 ರಂದು ಹಮ್ಮಿಕೊಳ್ಳಲಾದ ಸಾಮೂಹಿಕ ವಿವಾಹದ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಶಾಸಕ ಅಶೋಕ ಎಮ್ ಮನಗೂಳಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಕಡಣಿ ನಿರ್ಮಾಣ ಗ್ರಾಮದ ಬ್ಯಾರೇಜು ಕಾರ್ಯಕ್ಕೆ ಯೋಜನೆ ರೂಪಿಸಿ ಮಂಜೂರಾತಿ ನೀಡಿದ ದಿ.ಎಂ. ಸಿ.ಮನಗೂಳಿ ಅವರ ಸ್ಮರಣಾರ್ಥ ಸಾಮೂಹಿಕ ವಿವಾಹ ಕಾರ್ಯಕ್ರಮ ಗ್ರಾಮಸ್ಥರು ಹಮ್ಮಿಕೊಂಡಿದ್ದು ಸ್ಮರಣೀಯ, ಪರಿಶಿಷ್ಟ ಜಾತಿ, ಪಂಗಡದವರಿಗೆ 50 ಸಾವಿರ ಸಹಾಯಧನವೂ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಆಲಮೇಲದ ಶ್ರೀಶೈಲಯ್ಯ ಸ್ವಾಮೀಗಳು, ಕಡಣಿ ಗ್ರಾಮದ ಮುಖಂಡರಾದ ವೀರಭದ್ರ ಕತ್ತಿ, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಕೊಳಾರಿ, ಪ್ರಭು ವಾಲಿಕಾರ,ಎಪಿಮಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ, ರಮೇಶ ಬಂಟನೂರ ಸುರೇಶ ಕೋರಹಳ್ಳಿ ಬಾಗಪ್ಪಾಗೌಡ ಪಾಟೀಲ, ರಮಜಾನ್ ರಂಜುನಗಿ ಸೇರಿದಂತೆ ಇನ್ನಿತರರು ಇದ್ದರು.