ಸಿಂದಗಿ: ಈ ತಾಲೂಕಿನ ಹೆಸರನ್ನು ರಾಜ್ಯದಿಂದ ರಾಷ್ಟ್ರ ಮಟ್ಟದವರೆಗೆ ಕೊಂಡೊಯ್ದ ನಟ ಭಯಂಕರ, ನಟ ಸಾಮ್ರಾಟ ಹಂದಿಗನೂರ ಸಿದ್ರಾಮಪ್ಪನವರ ರಂಗಮಂದಿರ ಮಾಡುವ ಬಹುದಿನಗಳ ಕನಸ್ಸು ಮೊದಲ ಹಂತದ ಕಾಮಗಾರಿಗೆ ರೂ ೫೫ ಲಕ್ಷ, ೨ನೇ ಹಂತ ೬೦ ಲಕ್ಷ ಹೀಗೆ ಅನುದಾನ ತರುವ ಮೂಲಕ ನನ್ನ ಅವಧಿಯಲ್ಲಿಯೇ ಪೂರ್ಣ ಗೊಳಿಸುವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಜಿ.ಪಿ.ಪೋರವಾಲ ಕಾಲೇಜಿನ ಎದುರು ಮುಖ್ಯಮಂತ್ರಿ ಅಮೃತ ನಗರೋತ್ತಾನ ( ಮುನಿಸಿಪಾಲಿಟಿ) ಯೋಜನೆ ( ಹಂತ-೪) ವಿವೇಚನಾ ಅನುದಾನದಡಿಯಲ್ಲಿ ರೂ ೫೫ ಲಕ್ಷ ವೆಚ್ಚದ ನಟ ಕೇಸರಿ ಹಂದಿಗನೂರ ಸಿದ್ರಾಮಪ್ಪ ರಂಗಮಂದಿರ ಮೊದಲ ಹಂತದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಚಿಕ್ಕಸಿಂದಗಿ ಬೈಪಾಸ್ ನಿಂದ ನವೀನ ಪೆಟ್ರೋಲ ಪಂಪವರೆಗೆಗಿನ ರಸ್ತೆಯು ನಿತ್ಯ ತಿರುಗಾಡುವ ರಸ್ತೆ ತುಂಬಾ ಹದಗೆಟ್ಟಿದ್ದು ರೂ ೪ ಕೋಟಿ ೬೦ ಲಕ್ಷ, ಕೆರೆ ಸುತ್ತಲಿನ ಸಾಲಮರದ ತಿಮ್ಮಕ್ಕ ಉದ್ಯಾನವನ ಅಭಿವೃದ್ಧಿಗೆ ರೂ. ೨ ಕೋಟಿ ೪೪ ಲಕ್ಷ, ಶಿಕ್ಷಕರ ಭವನ ನಿರ್ಮಾಣಕ್ಕೆ ರೂ ೫೦ ಲಕ್ಷ, ಕೆರೆ ಅಭಿವೃಧಿಗೆ ರೂ. ೫೩ ಲಕ್ಷ, ಮಂಜೂರು ಮಾಡಿಸುವಂತ ಕಾರ್ಯ ಮಾಡಲಾಗಿದೆ. ಜನವರಿವರೆಗೆ ಮಂಜೂರಾಗುವ ಸಾದ್ಯತೆಯಿದೆ. ಸಾರ್ವಜನಿಕರ ಆಸ್ಪತ್ರೆಯಲ್ಲಿರುವ ಹಳೆ ಅಂಬುಲೆನ್ಸಗಳು ಕೆಲಸಕ್ಕೆ ಬಂದಿವೆ. ಹೊಸ ಅಂಬುಲೆನ್ಸ ಖರೀದಿಗೆ ಶಾಸಕರ ಅನುದಾನದಡಿ ರೂ ೪೪ ಲಕ್ಷಗಳ ವೆಚ್ಚದಲ್ಲಿ ಹೈಟೆಕ್ ಅಂಬುಲೇನ್ಸ ಮಂಜೂರಾಗಿದೆ. ಅಲ್ಲದೆ ಶಾಲಾ ಮಕ್ಕಳ ಅನುಕೂಲಕ್ಕೆ ೨ ಸಿಟಿ ಬಸ್ಸುಗಳು ಬಂದಿವೆ ಈ ಕಾಮಗಾರಿಗಳು ಸೇರಿದಂತೆ ಹಲವಾರು ಕೆಲಸಗಳನ್ನು ಹಮ್ಮಿಕೊಳ್ಳುವ ಗುರಿ ಹೊಂದಿದ್ದೇನೆ ಕಾರಣ ಈ ಕ್ಷೇತ್ರದ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಡಾ. ಎಂ.ಎಂ.ಪಡಶೆಟ್ಟಿ ಮಾತನಾಡಿ, ಡಾ ತೊಂಟದ ಸಿದ್ದಲಿಂಗ ಮಹಾಸ್ವಾಮಿಗಳು ನಟ ಭಯಂಕರ ಹಂದಿಗನೂರ ಸಿದ್ರಾಮಪ್ಪ ನವರ ರಂಗ ಮಂದಿರ ಮಾಡಬೇಕು ಎಂದು ೨೦೧೨ರಲ್ಲಿ ಪ್ರಸ್ತಾವನೆ ಸಲ್ಲಿಸಿದರು. ನಂತರ ಬಂದ ಶಾಸಕರು ಪ್ರಯತ್ನ ಮಾಡಿದರು ಕಾರ್ಯ ರೂಪಕ್ಕೆ ಬಾರದೇ ಅದು ಕನಸ್ಸಾಗಿಯೇ ಉಳಿದುಕೊಂಡಿತ್ತು ಶಾಸಕ ಅಶೋಕ ಮನಗೂಳಿ ಅವರ ಅವಿರತ ಪ್ರಯತ್ನದಿಂದ ಕಾಮಗಾರಿಗೆ ಚಾ;ಲನೆ ದೊರೆತ್ತಿದೆ ಅದು ಅರ್ಧಕ್ಕೆ ನಿಲ್ಲದೆ ಅನುದಾನ ತಂದು ಕಾಮಗಾರಿ ಪೂರ್ಣ ಗೊಳಿಸಲು ಉದ್ಘಾಟನೆ ಗೊಳ್ಳಬೇಕು ಎಂದು ಆಶಯ ವ್ಯಕ್ತ ಪಡಿಸಿದರು.
ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ಕಲಾ ಸಾಮ್ರಾಟ ಹಂದಿಗನೂರ ಸಿದ್ರಾಮನವರ ರಂಗ ಮಂದಿರ ಜಾಗೆಯ ಸಲುವಾಗಿ ಅನೇಕ ಹೋರಾಟಗಳು ನಡೆದಿವೆ ಅಲ್ಲದೆ ೨೦೧೩ ರಲ್ಲಿ ರೂ ೨ ಕೋಟಿ ೫೦ ಲಕ್ಷ ಅಂದಾಜು ನಕ್ಷೆ ಮಾಡಲಾಗಿತ್ತು ಅದು ಅಷ್ಟಕ್ಕೆ ಅರ್ಧಕ್ಕೆ ನಿಂತ ಕಾಮಗಾರಿಗೆ ಸಧ್ಯ ಈಗಿನ ಶಾಸಕ ಅಶೋಕ ಮನಗೂಳಿ ಅವರು ಪ್ರಾರಂಭಗೊಂಡಿದ್ದು ಈ ಭಾಗದ ಸರ್ವಾಂಗಿಣ ಅಭಿವೃದ್ಧಿಗೆ ಮುಂದಾಗಿರುವ ಕಾರ್ಯ ಅಮೋಘವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುತ್ತು ಮುಂಡೆವಾಡಗಿ, ಹಾಸೀಂ ಆಳಂದ, ಸಿದ್ದು ಮಲ್ಲೇದ, ಸುನಂದಾ ಯಂಪೂರೆ, ಜಯಶ್ರೀ ಹದನೂರ, ಶಾರದಾ ಬೆಟಗೇರಿ ಸೇರಿದಂತೆ ಅನೇಕರಿದ್ದರು.

