ಸಿಂದಗಿ; ಸಿಂದಗಿ ಪುರಸಭೆಯನ್ನು ನಗರಸಭೆಯನ್ನಾಗಿ ಮೆಲ್ದರ್ಜೆಗೇರಿಸುವಲ್ಲಿ ಸಹಕರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಅವರಿಗೆ ಅವರ ಗೃಹ ಕಚೇರಿಯಲ್ಲಿ ಶಾಸಕ ಅಶೋಕ ಮನಗೂಳಿ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅದ್ಯಕ್ಷ ಹಣಮಂತ ಸುಣಗಾರ ಇದ್ದರು.
ಪುರಸಭೆಯನ್ನು ನಗರಸಭೆಯನ್ನಾಗಿ ಪರಿವರ್ತನೆ ಮಾಡುವಲ್ಲಿ ಶ್ರಮಿಸಿದ ಶಾಸಕರಾದ ಅಶೋಕ ಮನಗೂಳಿ ಯವರು ಸೆ. ೬ ಶನಿವಾರ ಸಾಯಂಕಾಲ ೪ ಘಂಟೆಗೆ ಸಿಂದಗಿಗೆ ಆಗಮಿಸಲಿದ್ದು ಕಾರ್ಯಕರ್ತರ ಆಸೆಯಂತೆ ಶಾಸಕರನ್ನು ಚಿಕ್ಕಸಿಂದಗಿ ಬೈಪಾಸ್‌ನಲ್ಲಿರುವ ಪ್ರಥಮ ಧರ್ಜೆ ಗುತ್ತಿಗೆದಾರ ದಯಾನಂದ ಬಿರಾದಾರ ಇವರ ಮನೆಯ ಹತ್ತಿರದಿಂದ ಚನ್ನಮ್ಮ ಸರ್ಕಲ್ ಮಾರ್ಗವಾಗಿ ವಿವೇಕಾನಂದ ಸರ್ಕಲ್ ವರೆಗೆ ಮೆರವಣಿಗೆ ಮುಖಾಂತರ ಬರಮಾಡಿಕೊಳ್ಳಲಾಗುವುದು.
ಈ ಮೆರವಣಿಗೆಯಲ್ಲಿ ಎಲ್ಲ ಕಾರ್ಯಕರ್ತರು ಮುಖಂಡರು ಮಹಿಳಾ ನಾಯಕಿಯರು, ಸಿಂದಗಿಯ ಜನತೆ ಪಕ್ಷ ಜಾತಿ ಎಲ್ಲವನ್ನೂ ಬದಿಗಿಟ್ಟು ಈ ಮೆರವಣಿಗೆಯಲ್ಲಿ ಬಾಗವಹಿಸಬೇಕೆಂದು ಅಭಿಮಾನಿ ಬಳಗ ವಿನಂತಿಸಿದ್ದಾರೆ.

