ಸಿಸಿ ರಸ್ತೆ, ಚರಂಡಿ ಕಾಮಗಾರಿಗಳ ಉದ್ಘಾಟನೆ ಮಾಡಿದ ಶಾಸಕ ಮನಗೂಳಿ

Must Read

ಸಿಂದಗಿ; ನಗರದ ಜನರ ಬಹುದಿನಗಳ ಬೇಡಿಕೆಯಾದ ಬಂದಾಳ ರಸ್ತೆಯಿಂದ ಸ್ವಾಮಿ ವಿವೇಕಾನಂದ ವೃತ್ತದವರೆಗೆ ಅಚ್ಚುಕಟ್ಟು ರಸ್ತೆ ನಿರ್ಮಾಣಕ್ಕಾಗಿ ಮುಖ್ಯಮಂತ್ರಿಗಳಲ್ಲಿ ಹಾಗೂ ಸಚಿವ ಸತೀಶ ಜಾರಕಿಹೊಳಿಯವರಲ್ಲಿ ಅನುದಾನಕ್ಕಾಗಿ ಮನವಿ ಮಾಡಲಾಗಿತ್ತು ಅದನ್ನು ಪರಿಶೀಲಿಸಿದ ಸಚಿವರು ಅನುದಾನವನ್ನು ಮಂಜೂರು ಮಾಡಿದ್ದಾರೆ ಜನತೆಯು ಗುಣಮಟ್ಟದ ಕಾಮಗಾರಿ ತೆಗೆದುಕೊಂಡು ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಶಾಸಕ ಅಶೋಕ ಎಮ್. ಮನಗೂಳಿ ಮನವಿ ಮಾಡಿಕೊಂಡರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ಸರ್ಕಲ್ ಹತ್ತಿರ ಲೋಕೋಪಯೋಗಿ ಇಲಾಖೆ ಉಪ ವಿಭಾಗ, ಸಿಂದಗಿ ಲೆಕ್ಕ ಶೀರ್ಷಿಕೆ ೨೦೨೩-೨೪ನೇ ಸಾಲಿನ ೫೦೫೪ – ಅಪೆಂಡಿಕ್ಸ್- ಇ ವಿಜಯಪುರ ಮುಖ್ಯರಸ್ತೆಯಿಂದ ಬಂದಾಳ ರಸ್ತೆಯಲ್ಲಿರುವ ಶ್ರೀ ಶಾಂತೇಶ್ವರ ಲೇಔಟ ೩ನೇ ಅಡ್ಡರಸ್ತೆಯಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ ಮಾರ್ಗವಾಗಿ ವಿವೇಕಾನಂದ ಸರ್ಕಲ್ ವರೆಗೆ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಅಂದಾಜು ಮೊತ್ತ ೨೦೦.೦೦ ಲಕ್ಷಗಳ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.

ನಗರವು ಒಟ್ಟು ೯೭ ಕಿಮೀ ವಿಸ್ತೀರ್ಣದ ರಸ್ತೆಗಳಿದ್ದು ಸದ್ಯ ಯುಜಿಡಿಯಿಂದ ಎಲ್ಲ ರಸ್ತೆಗಳ ಯೋಜನೆ ಹಾಕಲಾಗಿದ್ದು ಈ ವರ್ಷಗಳ ಅವಧಿಯಲ್ಲಿ ಸುಮಾರು ೨೭ ಕಿಮೀ ವಿಸ್ತೀರ್ಣದ ರಸ್ತೆಗಳ ಕಾಮಗಾರಿ ಕೈಕೊಳ್ಳಲಾಗಿದೆ ಇನ್ನೂ ಹಂತ ಹಂತವಾಗಿ ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ. ಅದಕ್ಕೆ ನಾನೊಬ್ಬನೇ ಪ್ರಯತ್ನಿಸಿದರೆ ಸಾಲದು ಸಾರ್ವಜನಿಕರು ಸದ್ಯ ನಡೆಯುತ್ತಿರುವ ಕಾಮಾಗಾರಿಗಳನ್ನು ಅಚ್ಚುಕಟ್ಟಾಗಿ ಕಾಮಗಾರಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.

ಮಾಜಿ ಗ್ರಾಪಂ ಅಧ್ಯಕ್ಷ ರವಿ ಬಮ್ಮಣ್ಣಿ, ಪುರಸಭೆ ಸದಸ್ಯ ಸಾಯಬಣ್ಣ ಪುರದಾಳ ಮಾತನಾಡಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಇಇ ಅರುಣಕುಮಾರ ವಡಗೇರಿ, ಜೆಇ ಹೊಸಮನಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅದ್ಯಕ್ಷ ಸುರೇಶ ಪೂಜಾರಿ, ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಅರವಿಂದ ಹಂಗರಗಿ, ಬಸವರಾಜ ಶೀಲವಂತ, ರಮೇಶ ಹೂಗಾರ, ಸದಾನಂದ ಕುಂಬಾರ, ರವಿಗೌಡ ಬಿರಾದಾರ, ಅಂಬರೀಷ ಚೌಗಲೆ, ಮಹಾನಂದ ಬಮ್ಮಣ್ಣಿ, ಅಂಬಿಕಾ ಪಾಟೀಲ, ಶರಣಮ್ಮ ನಾಯಕ, ಶಿವಶಂಕರಗೌಡ ಬಿರಾದಾರ, ಬಿ.ಎ.ಪಾಟೀಲ, ಪ್ರವೀಣ ಕಂಠಿಗೊಂಡ ಸೇರಿದಂತೆ ಅನೇಕರಿದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group